Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಪರೂಪ ರೀತೀಲಿ ಅರ್ಧಶತಕ ಸಂಭ್ರಮಾಚರಿಸಿದ ರೋಹಿತ್: ವಿಡಿಯೋ!

Rohit Sharma dedicates fifty to daughter Samaira with unique celebration - Watch

ಮುಂಬೈ, ಮೇ 6: ನಾಯಕ ರೋಹಿತ್ ಶರ್ಮಾ ಅರ್ಧಶತಕದ ನೆರವಿನೊಂದಿಗೆ ಭಾನುವಾರ (ಮೇ 6) ಮುಂಬೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ಸುಲಭ ಗೆಲುವನ್ನಾಚರಿಸಿತ್ತು. ಪಂದ್ಯದ ವೇಳೆ ರೋಹಿತ್ ಶರ್ಮಾ ಅರ್ಧಶತಕದ ಸಂಭ್ರಮಾಚರಿಸಿದ್ದ ರೀತಿ ತೀರಾ ಅಪರೂಪವೆನಿಸಿತ್ತಲ್ಲದೆ, ಪ್ರೇಕ್ಷಕರ ಗಮನ ಸೆಳೆದಿತ್ತು.

ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್ 48 ಎಸೆತಗಳಿಗೆ 55 ರನ್ ಬಾರಿಸಿದ್ದರು. ಅರ್ಧಶತಕ ಪೂರೈಸುತ್ತಲೇ ರೋಹಿತ್, ಬ್ಯಾಟನ್ನು ಮಗುವಿನಂತೆ ಹಿಡಿದು 'ಈ ಅರ್ಧಶತಕ ನನ್ನ ಪುಟ್ಟ ಮಗಳು ಸಮೈರಾಗೆ ಅರ್ಪಿತ' ಅನ್ನೋದನ್ನು ಸನ್ನೆ ಮೂಲಕವೇ ತಿಳಿಸಿದ್ದರು.

ಶರ್ಮಾ ಹೀಗೆ ವಿಶಿಷ್ಠ ರೀತಿಯಲ್ಲಿ ಅರ್ಧಶತಕ ಸಂಭ್ರಮಾಚರಿಸಿದ್ದಕ್ಕೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರೋಹಿತ್ ಪತ್ನಿ ರಿತಿಕಾ ಕೂಡ ಚಪ್ಪಾಳೆ ತಟ್ಟಿ ಅಭಿನಂಸಿದಿದ್ದರು. ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿಕೊಂಡಿದೆ.

Story first published: Monday, May 6, 2019, 18:15 [IST]
Other articles published on May 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+