For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಜೆರ್ಸಿ ಧರಿಸಿ ರೋಹಿತ್ ಎದುರು ಕುಣಿದ ಜಮೈಕಾ ಫ್ಯಾನ್ಸ್

IND vs WI 2nd test : ರೋಹಿತ್ ಶರ್ಮ ಎದುರು ಕುಣಿದ ಜಮೈಕಾ ಫ್ಯಾನ್ಸ್ | Oneindia Kannada
Rohit Sharma enjoys with dancing in Jamaica after series win

ಕಿಂಗ್‌ಸ್ಟನ್, ಸೆಪ್ಟೆಂಬರ್ 4: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0ಯಿಂದ ಜಯಿಸಿದ ಖುಷಿಯನ್ನು ಭಾರತದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಜಮೈಕಾದ ಇಬ್ಬರು ಅಭಿಮಾನಿಗಳ ಡಾನ್ಸ್ ಸ್ಟೆಪ್ ವೀಕ್ಷಿಸುವ ಮೂಲಕ ಸಂಭ್ರಮಿಸಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಜಮೈಕನ್ ಅಭಿಮಾನಿಗಳು ಡ್ಯಾನ್ಸ್ ವೇಳೆ ರೋಹಿತ್ ಅವರ ಜೆರ್ಸಿ ಧರಿಸಿದ್ದರು.

ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 2) ಮುಕ್ತಾಯಗೊಂಡ ಭಾರತ-ವಿಂಡೀಸ್ ದ್ವಿತೀಯ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 257 ರನ್ ಜಯ ಗಳಿಸಿತ್ತು. ಅದೇ ದಿನ ಸಂಜೆ ರೋಹಿತ್ ಮುಂದೆ ಜಮೈಕಾ ಅಭಿಮಾನಿಗಳಿಬ್ಬರು ಕುಣಿದು ಸಂಭ್ರಮಿಸಿದ್ದರು.

ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಬಿಸಿಸಿಐ, 'ಜಮೈಕಾದಲ್ಲಿ ಪ್ರೇಕ್ಷಕರ ಮಧ್ಯೆಯಿದ್ದ ಇಬ್ಬರು ಅಭಿಮಾನಿಗಳನ್ನು ರೋಹಿತ್ ಹೆಕ್ಕಿ ತೆಗೆದು ಸಂಭ್ರಮಿಸುತ್ತಿರುವುದು ಅದ್ಭುತವಾಗಿದೆ,' ಎಂದು ಬರೆದುಕೊಂಡಿದೆ. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಂಡಿದ್ದ ರೋಹಿತ್, ಎರಡು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡದೆ ವಿಶ್ರಾಂತಿ ಪಡೆದಿದ್ದರು.

Story first published: Wednesday, September 4, 2019, 12:12 [IST]
Other articles published on Sep 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+