For Quick Alerts
ALLOW NOTIFICATIONS  
For Daily Alerts
 

ವಾರ್ನರ್‌ ಸೇರಿದಂತೆ ಈ ದಾಖಲೆಗಳೇ ರೋಹಿತ್‌ ಟಾರ್ಗೆಟ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯ ಬುಧವಾರ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ರಾಯ್‌ಪುರ್‌ಗೆ ತೆರಳಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ, ಅಭಿಮಾನಿಗಳನ್ನು ರಂಜಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲೂ ರೋಹಿತ್‌ ದೊಡ್ಡ ಇನಿಂಗ್ಸ್‌ ಕಟ್ಟುವ ಮೂಲಕ ದಾಖಲೆ ನಿರ್ಮಿಸುವ ಕನಸು ಹೊಂದಿದ್ದಾರೆ.

ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಸಹ ರೋಹಿತ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ಪಾಕ್‌ ತಂಡದ ಶಾಹೀದ್ ಅಫ್ರೀದಿ ಅವರ 351 ಸಿಕ್ಸರ್‌ ದಾಖಲೆಯನ್ನು ಮೀರಿ ನಿಂತು ಇತಿಹಸ ನಿರ್ಮಿಸಿದ್ದಾರೆ. ಈಗ ರೋಹಿತ್‌ ಶರ್ಮಾ ಎರಡನೇ ಪಂದ್ಯದಲ್ಲಿ ಡೇವಿಡ್ ವಾರ್ನರ್‌ ದಾಖಲೆಯನ್ನು ಅಳಿಸಿ ಹಾಕುವ ಕನಸಿನಲ್ಲಿದ್ದಾರೆ.

Rohit Sharma Eyes David Warner s Record Set to Achieve 20 000 Int l Runs Milestone

ದಕ್ಷಿಣ ಆಫ್ರಿಕಾ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡೇವಿಡ್ ವಾರ್ನರ್‌ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಆಸೀಸ್‌ ಸ್ಫೋಟಕ ಬ್ಯಾಟರ್‌ ಹರಿಣಗಳ ವಿರುದ್ಧ ಆಡಿದ 60 ಪಂದ್ಯಗಳಲ್ಲಿ 64 ಸಿಕ್ಸರ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗಿಂತ ಮೊದಲು ಜೋಸ್ ಬಟ್ಲರ್‌ (63 ಸಿಕ್ಸರ್‌), ಕ್ರಿಸ್‌ ಗೇಲ್‌ (61 ಸಿಕ್ಸರ್‌) ಇದ್ದಾರೆ.

4 ಸಿಕ್ಸರ್‌ ದಾಖಲೆ

ರೋಹಿತ್‌ ಶರ್ಮಾ ರಾಯ್‌ಪುರದಲ್ಲಿ 4 ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರೆ, ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಾರ್ನರ್‌ ದಾಖಲೆಯನ್ನು ಮುರಿಯಲಿದ್ದಾರೆ. ರಾಂಚಿಯಲ್ಲಿ ರೋಹಿತ್‌ 5 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 57 ರನ್‌ ಬಾರಿಸಿದ್ದರು. ಈಗ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ.

ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 41 ರನ್‌ಗಿಂತಲೂ ಹೆಚ್ಚು ರನ್ ಬಾರಿಸುವಲ್ಲಿ ಸಫಲರಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಪೂರೈಸಿದ ಸಾಧನೆಯನ್ನು ಮಾಡಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ವಿಶ್ವದ 14ನೇ ಹಾಗೂ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿ ಇವರದ್ದಾಗಲಿದೆ. ಇವರಿಗೂ ಮೊದಲು ಭಾರತದ ಪರ ಸಚಿನ್ ತೆಂಡೂಲ್ಕರ್‌, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.

Rohit Sharma Eyes David Warner s Record Set to Achieve 20 000 Int l Runs Milestone

ರೋಹಿತ್ ಶರ್ಮಾ 277 ಏಕದಿನ ಪಂದ್ಯಗಳ 269 ಇನ್ನಿಂಗ್ಸ್‌ಗಳಲ್ಲಿ 49.25 ಸರಾಸರಿಯಲ್ಲಿ 11,427 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಮುಂದಿನ ಎರಡು ಪಂದ್ಯಗಳಲ್ಲಿ ರೋಹಿತ್‌ 153 ರನ್‌ ಸಿಡಿಸುವಲ್ಲಿ ಯಶಸ್ವಿಯಾದರೆ, ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್‌ ಕಾಲೀಸ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಕಾಲೀಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,579 ರನ್ ಸಿಡಿಸಿದ್ದಾರೆ.

Story first published: Tuesday, December 2, 2025, 9:55 [IST]
Other articles published on Dec 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+