ಟೀಮ್ ಇಂಡಿಯಾದ ಆಟಗಾರರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಲೀಗ್ ಆದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಭಾರತ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಭಾಗವಾಗಿದೆ. ಈ ಸರಣಿಗಾಗಿ ಇನ್ನು ಭಾರತ ತಂಡವನ್ನು ಪ್ರಕಟಿಸಬೇಕಿದೆ. ಈಗಾಗಲೇ ಈ ಸರಣಿಯಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಇಂಗ್ಲೆಂಡ್ ಪ್ರವಾಸಕ್ಕೆ ಈ ತಿಂಗಳ ಅಂತ್ಯದಲ್ಲಿ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇನ್ನು ಸದ್ಯದ ರೋಹಿತ್ ಶರ್ಮಾ ಅವರ ಫಾರ್ಮ್ ನೋಡಿದ್ರೆ, ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿ ಕಾಣುತ್ತದೆ. ಇನ್ನು ರೋಹಿತ್ ಶರ್ಮಾ ಅವರೇ ಈ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ದೊಡ್ಡ ದಾಖಲೆಯನ್ನು ಬರೆಯುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಈ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕಣ್ಣು ದೊಡ್ಡ ದಾಖಲೆಯ ಮೇಲೆ ನೆಟ್ಟಿರಲಿದೆ. ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ದೊಡ್ಡ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ವೇಳೆ ಇವರು ಭಾರತದ ಪರ ಸಿಕ್ಸರ್ ಬಾರಿಸುವ ಲೆಕ್ಕಾಚಾರದಲ್ಲಿ ದಾಖಲೆಯನ್ನು ಬರೆಯಬಹುದು.
ರೋಹಿತ್ ಶರ್ಮಾ ಐದು ಪಂದ್ಯಗಳ ಸರಣಿಯಲ್ಲಿ 13 ಸಿಕ್ಸರ್‌ಗಳನ್ನು ಬಾರಿಸಿದ್ದೇ ಆದಲ್ಲಿ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಮೀರಿ ನಿಲ್ಲಬಹುದಾಗಿದೆ. ಆಡಂ ಗಿಲ್ ಕ್ರಿಸ್ಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ.
ಬೆನ್ ಸ್ಟೋಕ್ಸ್, ಇಂಗ್ಲೆಂಡ್, 133 ಸಿಕ್ಸರ್
ಬ್ರೆಂಡನ್ ಮೆಕಲಮ್, ನ್ಯೂಜಿಲೆಂಡ್, 107 ಸಿಕ್ಸರ್
ಆಡಮ್ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾ, 100 ಸಿಕ್ಸರ್
ಟಿಮ್ ಸೌಥಿ, ನ್ಯೂಜಿಲೆಂಡ್, 98 ಸಿಕ್ಸರ್
ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 98 ಸಿಕ್ಸರ್
ಜಾಕ್ವೆಸ್ ಕಾಲಿಸ್, ದಕ್ಷಿಣ ಆಫ್ರಿಕಾ, 97 ಸಿಕ್ಸರ್
ವೀರೇಂದ್ರ ಸೆಹ್ವಾಗ್, ಭಾರತ, 91 ಸಿಕ್ಸರ್
ಏಂಜೆಲೊ ಮ್ಯಾಥ್ಯೂಸ್, ಶ್ರೀಲಂಕಾ, 89 ಸಿಕ್ಸರ್
ರೋಹಿತ್ ಶರ್ಮಾ, ಭಾರತ, 88 ಸಿಕ್ಸರ್
ಬ್ರಿಯಾನ್ ಲಾರಾ, ವೆಸ್ಟ್ ಇಂಡೀಸ್, 88 ಸಿಕ್ಸರ್

ರೋಹಿತ್ ಶರ್ಮಾ ಆಡಿರುವ 67 ಟೆಸ್ಟ್ ಪಂದ್ಯಗಳಲ್ಲಿ 4301 ರನ್ ಸಿಡಿಸಿದ್ದರು, ಈ ವೇಳೆ 12 ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಇನ್ನು ಇಂಗ್ಲೆಂಡ್‌ನಲ್ಲಿ ರೋಹಿತ್ ಅಂಕಿ ಅಂಶಗಳನ್ನು ನೋಡಿದಾಗ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4030ರ ಸರಾಸರಿಯಲ್ಲಿ 524 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ.