For Quick Alerts
ALLOW NOTIFICATIONS  
For Daily Alerts
 

ಎರಡು ದೊಡ್ಡ ದಾಖಲೆಯ ಮೇಲೆ ರೋಹಿತ್ ಶರ್ಮಾ ಕಣ್ಣು

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಗಳು ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಟೀಮ್ ಇಂಡಿಯಾವನ್ನು ಈಗಾಗಲೇ ಘೋಷಿಸಲಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೂ ಸ್ಥಾನ ನೀಡಲಾಗಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿ ಫಾರ್ಮ್‌ನಲ್ಲಿದ್ದು, ಇವರ ಆಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಈ ಸ್ಟಾರ್ ಆಟಗಾರರು ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರಿಬ್ಬರ ಆಟವನ್ನು ಕಣ್ಣು ತುಂಬಿಕೊಳ್ಳಲು ಫ್ಯಾನ್ಸ್‌ ರೆಡಿಯಾಗಿದ್ದಾರೆ. ಮೊದಲ ಪಂದ್ಯದ ಟಿಕೆಟ್‌ಗಳು ಜಸ್ಟ್‌ 8 ನಿಮಿಷದಲ್ಲಿ ಸೇಲ್ ಆಗಿವೆ. ರೋಹಿತ್‌ ಶರ್ಮಾ ಈ ಸರಣಿಯಲ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Rohit Sharma Eyes Sourav Ganguly s Record as India Face New Zealand in ODI Series Starting Jan 11

ರೋಹಿತ್ ನ್ಯೂಜಿಲೆಂಡ್ ವಿರುದ್ಧದ 31 ಏಕದಿನ ಪಂದ್ಯಗಳಲ್ಲಿ, 38.32 ರ ಸರಾಸರಿಯಲ್ಲಿ 1073 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಮತ್ತು ಆರು ಅರ್ಧಶತಕಗಳು ಸೇರಿವೆ. ಇದಲ್ಲದೆ, ರೋಹಿತ್ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ 44.23 ರ ಸರಾಸರಿಯಲ್ಲಿ 575 ರನ್ ಗಳಿಸಿದ್ದಾರೆ. ಇದಲ್ಲದೆ, ಹಿಟ್‌ಮ್ಯಾನ್ ನ್ಯೂಜಿಲೆಂಡ್ ವಿರುದ್ಧ 17 ಟಿ20 ಪಂದ್ಯಗಳಲ್ಲಿ 511 ರನ್ ಗಳಿಸಿದ್ದಾರೆ.

ರೋಹಿತ್‌ ಶರ್ಮಾ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಸೌರವ್ ಗಂಗೂಲಿ ನ್ಯೂಜಿಲೆಂಡ್ ವಿರುದ್ಧ ಆಡಿದ 32 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 1079 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ರೋಹಿತ್ ಶರ್ಮಾ ಇವರ ದಾಖಲೆಯನ್ನು ಅಳಿಸಲು ಇನ್ನು 7 ರನ್‌ ಅವಶ್ಯಕತೆ ಇದೆ. ಆಗ ಅವರು ಸೌರವ್ ಗಂಗೂಲಿ ಅವರ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ

ಉಭಯ ದೇಶಗಳ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಸಚಿನ್ ತೆಂಡೂಲ್ಕರ್, ಭಾರತ, 42 ಪಂದ್ಯ, 1750 ರನ್‌
ವಿರಾಟ್‌ ಕೊಹ್ಲಿ, ಭಾರತ, 33 ಪಂದ್ಯ, 1657 ರನ್‌
ರಾಸ್ ಟೇಲರ್‌, ನ್ಯೂಜಿಲೆಂಡ್, 35 ಪಂದ್ಯ, 1385 ರನ್‌
ಕೇನ್ ವಿಲಿಯಮ್ಸನ್‌, ನ್ಯೂಜಿಲೆಂಡ್‌, 31 ಪಂದ್ಯ, 1239 ರನ್‌
ನಾಥನ್ ಆಸ್ಟಲ್, ನ್ಯೂಜಿಲೆಂಡ್‌, 29 ಪಂದ್ಯ, 1207 ರನ್‌

3 ಸಿಕ್ಸರ್ ಬಾರಿಸುತ್ತಲೇ ರೋಹಿತ್ ದಾಖಲೆ

ರೋಹಿತ್‌ ಶರ್ಮಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3 ಸಿಕ್ಸರ್ ಬಾರಿಸಿದ್ದೇ ಆದಲ್ಲಿ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ರೋಹಿತ್‌ 47 ಸಿಕ್ಸರ್ ಬಾರಿಸಿದ್ದಾರೆ. ಇನ್ನು 3 ಸಿಕ್ಸರ್ ಬಾರಿಸಿದಲ್ಲಿ ಕಿವೀಸ್‌ ವಿರುದ್ಧ ಸಿಕ್ಸರ್‌ಗಳ ಲೆಕ್ಕಾಚಾರದಲ್ಲಿ 50 ಸಿಕ್ಸರ್ ಬಾರಿಸಿದ ದಾಖಲೆ ಬರೆಯಲಿದ್ದಾರೆ.

Story first published: Tuesday, January 6, 2026, 8:09 [IST]
Other articles published on Jan 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+