Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ರೋಹಿತ್ ಶರ್ಮಾ 3 ಸಿಕ್ಸರ್‌ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆ

ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ. ಸ್ಟಾರ್ ಆಟಗಾರರು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಲು ಪ್ಲ್ಯಾನ್ ಮಾಡಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ಬ್ಯಾಟರ್‌ ರೋಹಿತ್ ಶರ್ಮಾ ಸಹ ದಾಖಲೆ ಬರೆಯಲು ಸಿದ್ದರಾಗಿದ್ದಾರೆ. ರೋಹಿತ್ ಶರ್ಮಾ ನಿರ್ಮಿಸಲಿರುವ ದಾಖಲೆಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ದುಬೈನ ಅಂಗಳದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈಟ್ ನಡೆಸಲಿವೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ದೊಡ್ಡ ಇನಿಂಗ್ಸ್‌ ಕಟ್ಟದೇ ಇದ್ದರೂ ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದಿದ್ದರು. ಇದೇ ಆಟವನ್ನು ಪಾಕಿಸ್ತಾನ ವಿರುದ್ಧ ಆಡುವ ಇರಾದೆಯನ್ನು ಹೊಂದಿದ್ದಾರೆ.

Rohit Sharma Hits 3 Sixes Closes in on Sachin Tendulkar s Record Against Pakistan

ಸಚಿನ್‌ ದಾಖಲೆಯ ಮೇಲೆ ರೋಹಿತ್ ಕಣ್ಣು

ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಸಿಕ್ಸರ್‌ ಬಾರಿಸುವಲ್ಲಿ ಸಫಲರಾದರೆ, ಇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಬಹುದು. ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧ ಸಚಿನ್ ಆಡಿದ 69 ಪಂದ್ಯಗಳಲ್ಲಿ 40.09ರ ಸರಾಸರಿಯಲ್ಲಿ 2526 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಬ್ಯಾಟ್‌ ನಿಂದ 29 ಸಿಕ್ಸರ್‌ಗಳು ಬಂದಿವೆ.

ರೋಹಿತ್‌ ಶರ್ಮಾ ಸಹ ಪಾಕ್‌ ವಿರುದ್ಧ ವೀರಾವೇಶವನ್ನು ತೋರಿಸುವ ಆಟಗಾರ. ಈ ಪ್ಲೇಯರ್‌ ಪಾಕ್‌ ವಿರುದ್ಧ ಆಡಿದ 19 ಪಂದ್ಯಗಳಲ್ಲಿ 51.35ರ ಸರಾಸರಿಯಲ್ಲಿ 873 ರನ್‌ ಸಿಡಿಸಿದ್ದಾರೆ. ಈ ವೇಳೆ 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಭಾನುವಾರದ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ ಬಾರಿಸುವಲ್ಲಿ ಸಫಲರಾದರೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಂದು ವೇಳೆ 3 ಸಿಕ್ಸರ್‌ ಬಾರಿಸುವಲ್ಲಿ ಸಫಲರಾದರೂ ಸಚಿನ್ ದಾಖಲೆಯ ಸಮಕ್ಕೆ ನಿಲ್ಲಲಿದ್ದಾರೆ.

Rohit Sharma Hits 3 Sixes Closes in on Sachin Tendulkar s Record Against Pakistan

ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಪಾಕಿಸ್ತಾನ ಸ್ಫೋಟಕ ಬ್ಯಾಟರ್ ಶಾಹೀದ್ ಅಫ್ರಿದಿ ಅವರಿಗೆ ಸಲ್ಲುತ್ತದೆ. ಇವರು ಭಾರತ ವಿರುದ್ಧ ಆಡಿದ 67 ಪಂದ್ಯಗಳಲ್ಲಿ 1524 ರನ್‌ ಸಿಡಿಸಿದ್ದಾರೆ. ಈ ವೇಳೆ 51 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ಸ್‌

  • ಸಚಿನ್ ತೆಂಡೂಲ್ಕರ್‌, 29
  • ರೋಹಿತ್ ಶರ್ಮಾ, 26,
  • ಮಹೇಂದ್ರ ಸಿಂಗ್ ಧೋನಿ, 25,
  • ಯುವರಾಜ್‌ ಸಿಂಗ್‌, 22
  • ವೀರೇಂದ್ರ ಸೆಹ್ವಾಗ್‌, 20

Story first published: Saturday, February 22, 2025, 14:51 [IST]
Other articles published on Feb 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+