For Quick Alerts
ALLOW NOTIFICATIONS  
For Daily Alerts
 

3 ಸ್ವರೂಪದಲ್ಲಿ ರೋಹಿತ್‌ ಶರ್ಮಾ ಕ್ಯಾಪ್ಟನ್: ಎಲೈಟ್ ಕ್ಲಬ್‌ ಸೇರಿದ ಹಿಟ್‌ಮ್ಯಾನ್‌

Rohit sharma

ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಹಲವು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಒಂದೆಡೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ ಪಂದ್ಯದ ಕ್ಷಣವಾದ್ರೆ, ಪ್ರಸ್ತುತ ನಾಯಕ ರೋಹಿತ್‌ ಶರ್ಮಾ ಮೊದಲ ಬಾರಿಗೆ ಟೆಸ್ಟ್ ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿದ್ದಾರೆ.

ಈಗಾಗಲೇ ಟಿ20 ಮತ್ತು ಏಕದಿನ ಫಾರ್ಮೆಟ್‌ ನಾಯಕತ್ವ ಪಡೆದಿರುವ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನ ಮೂರು ಫಾರ್ಮೆಟ್‌ನಲ್ಲಿ ಮೂಡಿಸಿದ ಕೆಲವೇ ನಾಯಕರ ಪಟ್ಟಿಗೆ ಹಿಟ್‌ಮ್ಯಾನ್ ಸೇರಿಕೊಂಡಿದ್ದಾರೆ.

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ ಆಟಗಾರರಲ್ಲಿ ಒಬ್ಬರು. ಸೆಹ್ವಾಗ್‌ಗೆ ಮೂರು ಮಾದರಿಗಳಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದರೂ, ನಾಯಕನಾಗಿ ಶ್ರೇಷ್ಠ ವೃತ್ತಿಜೀವನವನ್ನು ರಚಿಸಲು ಸಾಧ್ಯವಾಗಲಿಲ್ಲ. ರಾಹುಲ್ ದ್ರಾವಿಡ್ ನಂತರ ವೀರೇಂದ್ರ ಸೆಹ್ವಾಗ್ ಅವರು ಮುಂದಿನ ಭಾರತೀಯ ನಾಯಕರಾಗಬೇಕಾಗಿದ್ದರೂ, ಎಂಎಸ್ ಧೋನಿಯ ಬೆಳವಣಿಗೆಯು ಸೆಹ್ವಾಗ್ ಅವರ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಛಿದ್ರಗೊಳಿಸಿತು.

ಎಂ.ಎಸ್ ಧೋನಿ

ಎಂ.ಎಸ್ ಧೋನಿ

ಎಂಎಸ್ ಧೋನಿ ಈ ಸಾಧನೆ ಮಾಡಿದ ಮತ್ತೊಬ್ಬ ನಾಯಕ. ಧೋನಿ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ ಮತ್ತು ಉತ್ತಮ ದಾಖಲೆಗಳನ್ನು ನಿರ್ಮಿಸಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಧೋನಿ, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಸಾಧನೆಯನ್ನ ಧೋನಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಈ ನಾಯಕತ್ವದ ದಾಖಲೆಯ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ. ಕೊಹ್ಲಿ ಪ್ರಸ್ತುತ ಕೇವಲ ಬ್ಯಾಟ್ಸ್‌ಮನ್ ಆಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಉಳಿದಿದ್ದಾರೆ. ಕೊಹ್ಲಿ ಈ ಮೊದಲು ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ ಆದರೆ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಕೊಹ್ಲಿ ಟೆಸ್ಟ್‌ನಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದ್ದಾರೆ.

ಟೆಸ್ಟ್ ಗೂ ಮುಂಚೆ ಕೊಹ್ಲಿಗೆ ಸಿಕ್ತು ಸ್ಪೆಷಲ್ ಕ್ಯಾಪ್ ದ್ರಾವಿಡ್ ವಿರಾಟ್ ಮಾತುಕತೆ ಸೂಪರ್ | Oneindia Kannada
ರೋಹಿತ್ ಶರ್ಮಾ

ರೋಹಿತ್ ಶರ್ಮಾ

ರೋಹಿತ್ ಶರ್ಮಾ ದೀರ್ಘಕಾಲದವರೆಗೆ ಭಾರತ ತಂಡದ ಉಪನಾಯಕರಾಗಿದ್ದರು. ಮೂರು ಮಾದರಿಯ ನಾಯಕತ್ವವನ್ನು ಕೊಹ್ಲಿ ತೆರವು ಮಾಡಿದ ನಂತರ ರೋಹಿತ್‌ಗೆ ತಂಡದ ನಾಯಕತ್ವದ ಅವಕಾಶ ಸಿಕ್ಕಿತು. 2021ರ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟಿ20 ನಾಯಕತ್ವವನ್ನು ಬಿಟ್ಟು ಕೊಟ್ಟರು. ಬಳಿಕ ತಂಡದ ಆಡಳಿತ ಮಂಡಳಿಯ ಒತ್ತಾಯದ ಮೇರೆಗೆ ಏಕದಿನ ತಂಡದ ನಾಯಕತ್ವವನ್ನು ತೆರವು ಮಾಡಲಾಗಿತ್ತು. ಅಂತಿಮವಾಗಿ, ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಬೇಕಾಯಿತು. ಇದರೊಂದಿಗೆ ರೋಹಿತ್‌ಗೆ ಮೂರೂ ಫಾರ್ಮೆಟ್‌ಗಳಲ್ಲಿ ಅವಕಾಶ ಸಿಕ್ಕಿತು.

ರೋಹಿತ್ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ದೊಡ್ಡ ಮಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಮೊಹಾಲಿ ಟೆಸ್ಟ್‌ನಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಬ್ಯಾಟ್ಸ್‌ಮನ್ ರೋಹಿತ್‌ಗೆ 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ರೋಹಿತ್ ಆರು ಬೌಂಡರಿಗಳನ್ನು ಬಾರಿಸಿದ್ದರು. ರೋಹಿತ್ ದೊಡ್ಡ ಹೊಡೆತಕ್ಕೆ ಯತ್ನಕ್ಕೆ ಬಿದ್ದರು. ಶ್ರೀಲಂಕಾ ವಿರುದ್ಧ ಭಾರತ ಅತ್ಯುತ್ತಮ ಟೆಸ್ಟ್ ದಾಖಲೆ ಹೊಂದಿದೆ. ಹಾಗಾಗಿ ರೋಹಿತ್ ನಾಯಕತ್ವದಲ್ಲಿಯೂ ಈ ದಾಖಲೆ ಮುಂದುವರಿಯಬಹುದು ಎಂದು ನಿರೀಕ್ಷಿಸಬಹುದು.

Story first published: Friday, March 4, 2022, 16:31 [IST]
Other articles published on Mar 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+