For Quick Alerts
ALLOW NOTIFICATIONS  
For Daily Alerts
 

Rohit Sharma: ಸಚಿನ್‌, ಗಂಗೂಲಿಯ ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ ರೋಹಿತ್ ಶರ್ಮಾ

ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಭಾರತದ ಅನುಭವಿ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದವು. ಈ ವೇಳೆ ಹಿಟ್‌ ಮ್ಯಾನ್‌ ಅವರು ಹಲವು ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದರು. ಈ ಪಂದ್ಯದಲ್ಲಿ ಇವರು ನಾಲ್ಕು ಸಿಕ್ಸರ್‌ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸುವ ಕನಸಿನಲಿದ್ದರು. ಆದರೆ ಆ ಆಸೆ ಈಡೇರಲಿಲ್ಲ. ಆದರೆ ಇನ್ನೊಂದು ದಾಖಲೆಯನ್ನು ಮಾಡಿ ಬೀಗಿದ್ದಾರೆ.

ಪಾಕ್‌ ನೀಡಿದ್ದ 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕರು ಸ್ಥಿರ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟವನ್ನು ನೀಡಿತು. ರೋಹಿತ್ ಶರ್ಮಾ ಪಾಕ್‌ ವಿರುದ್ಧವೂ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದು ರನ್ ಗಳಿಸಿದ ತಕ್ಷಣ, ಅವರು ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಒಂಬತ್ತು ಸಾವಿರ ರನ್‌ ಪೂರ್ಣಗೊಳಿಸಿದರು.

Rohit Sharma Joins Elite Club with 9000 ODI Runs as an Opener in Champions Trophy 2025

ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 11 ಸಾವಿರಕ್ಕೂ ಹೆಚ್ಚು ರನ್‌ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ವೇಳೆ ರೋಹಿತ್‌ 262 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇನ್ನು ಆರಂಭಿಕರಾಗಿ ರೋಹಿತ್ 181 ಇನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್‌ 8999 ರನ್ ಗಳಿಸಿದ್ದರು. ಆರಂಭಿಕರಾಗಿ 9 ಸಾವಿರ ರನ್‌ ಪೂರೈಸಲು ರೋಹಿತ್‌ಗೆ ಒಂದು ರನ್‌ ಅವಶ್ಯಕತೆ ಇತ್ತು. ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಸ್ಕ್ವೇರ್‌ ಲೇಗ್‌ನಲ್ಲಿ ಚೆಂಡನ್ನು ತಳ್ಳಿ ಒಂದು ರನ್ ಪೂರ್ಣ ಗೊಳಿಸಿ ದೊಡ್ಡ ದಾಖಲೆ ನಿರ್ಮಿಸಿದರು.

ಎಲೈಟ್‌ ಕ್ಲಬ್‌ಗೆ ಎಂಟ್ರಿ

ರೋಹಿತ್‌ ಶರ್ಮಾ ಅವರಿಗಿಂತ ಮುಂಚೂಣಿಯಲ್ಲಿ ಸೌರವ್‌ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್‌ ಅವರು ಇದ್ದಾರೆ. ಸೌರವ್‌ ಗಂಗೂಲಿ ಆರಂಭಿಕರಾಗಿ 236 ಏಕದಿನ ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ 9146 ರನ್‌ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್‌ ಇದ್ದಾರೆ. ಇವರು 340 ಏಕದಿನ ಪಂದ್ಯಗಳಲ್ಲಿ ಆರಂಭಿಕನಾಗಿ 15310 ರನ್ ಗಳಿಸಿದ್ದಾರೆ.

Rohit Sharma Joins Elite Club with 9000 ODI Runs as an Opener in Champions Trophy 2025

10 ಸಾವಿರ ರನ್ ಪೂರೈಸಿದ ಬ್ಯಾಟರ್ಸ್‌

ವಿಶ್ವ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಕೇವಲ ಮೂವರು ಆಟಗಾರರು ಬಾರಿಸಿದ್ದಾರೆ. ಇದರಲ್ಲಿ ಅಗ್ರ ಸ್ಥಾನದಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಇದ್ದು, ಎರಡನೇ ಸ್ಥಾನದಲ್ಲಿ ಲಂಕಾದ ಸನತ್ ಜಯಸೂರ್ಯ ಇದ್ದಾರೆ. ಇವರು 383 ಏಕದಿನ ಪಂದ್ಯಗಳಲ್ಲಿ 12740 ರನ್ ಸಿಡಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಹೆಸರುವಾಸಿಯಾಗಿರುವ ಕ್ರಿಸ್‌ ಗೇಲ್‌ ಆರಂಭಿಕರಾಗಿ 10179 ರನ್ ಗಳಿಸಿದ್ದಾರೆ.

Story first published: Sunday, February 23, 2025, 21:35 [IST]
Other articles published on Feb 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+