For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಗಳ ದಾಖಲೆ ಬರೆದ ರೋ'ಹಿಟ್' ಶರ್ಮಾ!

ನಾಯಕನನ್ನೂ ಮೀರಿಸಿದ ಉಪ-ನಾಯಕ | ROHIT SHARMA | VIRAT KOHLI | IND | WI
Rohit Sharma leaves Chris Gayle behind in illustrious list of openers

ವಿಶಾಖಪಟ್ಟಣ, ಡಿಸೆಂಬರ್ 18: ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ವಿಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 18) ನಡೆದ ಭಾರತ vs ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ದಾಖಲೆಗಳ ದಾಖಲೆ ಬರೆದಿದ್ದಾರೆ.

138 ಎಸೆತಗಳಲ್ಲಿ 159 ರನ್ ಸಿಡಿಸಿದ ರೋಹಿತ್, ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡರಲ್ಲದೆ, ಇನ್ನೂ ಅನೇಕ ದಾಖಲೆಗಳಿಗೆ ಕಾರಣರಾದರು.

ವಿಶಾಖಪಟ್ಟಣ ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಥಾಪಿಸಿರುವ ಸಾಲು ಮೈಲಿಗಲ್ಲುಗಳು ಕೆಳಗಿವೆ.

28ನೇ ಏಕದಿನ ಶತಕ

28ನೇ ಏಕದಿನ ಶತಕ

ಇಲ್ಲೀವರೆಗೆ ಒಟ್ಟು 213 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ರೋಹಿತ್ ಶರ್ಮಾ ಒಟ್ಟು 8881 ರನ್‌ ಬಾರಿಸಿದ್ದಾರೆ. ಇದರಲ್ಲಿ 28 ಶತಕ, 42 ಅರ್ಧ ಶತಕ, 3 ದ್ವಿಶತಕಗಳು ಸೇರಿವೆ. ಅಲ್ಲದೆ ಏಕದಿನದಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ವೈಯಕ್ತಿಕ ಅತ್ಯಧಿಕ ರನ್ (264 ರನ್) ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಗೇಲ್ ಹಿಂದಿಕ್ಕಿದ ರೋಹಿತ್

ಗೇಲ್ ಹಿಂದಿಕ್ಕಿದ ರೋಹಿತ್

ಏಕದಿನದಲ್ಲಿ ಆರಂಭಿಕರಾಗಿ ಇಳಿದು ಅತ್ಯಧಿಕ ಶತಕಗಳನ್ನು ಬಾರಿಸಿದ ದಾಖಲೆಗಾಗಿ ರೋಹಿತ್ ಶರ್ಮಾ ಅವರು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಈ ದಾಖಲೆ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ (344 ಪಂದ್ಯ, 45 ಶತಕ), ಶ್ರೀಲಂಕಾದ ಸನತ್ ಜಯಸೂರ್ಯ (388 ಪಂದ್ಯ, 28 ಶತಕ), ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲ (176 ಪಂದ್ಯ, 27 ಶತಕ), ರೋಹಿತ್ ಶರ್ಮಾ (136 ಪಂದ್ಯ, 26 ಶತಕ), ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್ (280 ಪಂದ್ಯ, 25 ಶತಕ) ಇದ್ದಾರೆ.

ವರ್ಷದಲ್ಲಿ ಅತೀ ಹೆಚ್ಚು ಶತಕ

ವರ್ಷದಲ್ಲಿ ಅತೀ ಹೆಚ್ಚು ಶತಕ

ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯೂ ಶರ್ಮಾ ಅವರಿಂದಾಗಿದೆ. 2019ರಲ್ಲಿ ರೋಹಿತ್ ಒಟ್ಟಿಗೆ 7 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ವಿಶ್ವಕಪ್‌ನಲ್ಲಿನ 5 ಶತಕಗಳು ಸೇರಿವೆ. ಈ ದಾಖಲೆ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (9 ಶತಕ, 1998ರಲ್ಲಿ), ಸೌರವ್ ಗಂಗೂಲಿ (7 ಶತಕ, 2000ರಲ್ಲಿ), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (7 ಶತಕ, 2016ರಲ್ಲಿ), ರೋಹಿತ್ ಶರ್ಮಾ (7 ಶತಕ, 2019ರಲ್ಲಿ) ಹೆಸರುಗಳಿವೆ.

ಕೊಹ್ಲಿ ಮೀರಿಸಿದ ಹಿಟ್‌ಮ್ಯಾನ್

ಕೊಹ್ಲಿ ಮೀರಿಸಿದ ಹಿಟ್‌ಮ್ಯಾನ್

ಪುರುಷರ ಏಕದಿನ ಕ್ರಿಕೆಟ್‌ ಐಸಿಸಿ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರಾದರೂ 2019ರ ವರ್ಷವನ್ನು ಪರಿಗಣಿಸಿದರೆ ರೋಹಿತ್, ಕೊಹ್ಲಿಯನ್ನು ಮೀರಿಸಿದ್ದಾರೆ. 2019ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಸರದಾರನಾಗಿ ರೋಹಿತ್ ಮೊದಲ ಸ್ಥಾನ ಪಡೆದಿದ್ದಾರೆ. ಶರ್ಮಾ 27 ಪಂದ್ಯಗಳಲ್ಲಿ 1427 ರನ್ ಗಳಿಸಿದ್ದರೆ, ಕೊಹ್ಲಿ 1292 ರನ್ ಮಾಡಿದ್ದಾರೆ. ಈ ಯಾದಿಯಲ್ಲಿ ತೃತೀಯ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ 27 ಪಂದ್ಯಗಳಲ್ಲಿ 1225 ರನ್ ಗಳಿಸಿದ್ದಾರೆ.

Story first published: Wednesday, December 18, 2019, 23:10 [IST]
Other articles published on Dec 18, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+