For Quick Alerts
ALLOW NOTIFICATIONS  
For Daily Alerts
 

Rohit Sharma: ವೆಸ್ಟ್ ಇಂಡೀಸ್ ಪ್ರವಾಸದ ನಂತರ ರೋಹಿತ್ ಶರ್ಮಾಗೆ ಟೆಸ್ಟ್ ನಾಯಕತ್ವದಿಂದ ಕೋಕ್!?

ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳಿಂದ ಸೋತ ಬಳಿಕ ಇದೀಗ ರೋಹಿತ್ ಶರ್ಮಾ ಅವರ ಟೆಸ್ಟ್ ನಾಯಕತ್ವಕ್ಕೆ ಅಪಾಯ ಎದುರಾಗಿದೆ.

ಫೈನಲ್‌ನಲ್ಲಿ ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರವು ಭಾರತ ತಂಡಕ್ಕೆ ಹಿನ್ನಡೆಯಾಗಲು ಕಾರಣವಾಯಿತು. ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಪಂದ್ಯದುದ್ದಕ್ಕೂ ಭಾರತ ತಂಡದ ವಿರುದ್ಧ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು.

Rohit Sharma Likely To Be Removed From Indian Test Captaincy After West Indies Tour

ಆದರೂ, 36 ವರ್ಷದ ರೋಹಿತ್ ಶರ್ಮಾ ಅವರು ಜುಲೈ 12ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಸದ್ಯಕ್ಕೆ ರೋಹಿತ್ ಶರ್ಮಾ ಅವರ ಟೆಸ್ಟ್ ನಾಯಕತ್ವಕ್ಕೆ ಯಾವುದೇ ಬೆದರಿಕೆ ಇಲ್ಲದಿದ್ದರೂ, ಅವರ ನಾಯಕತ್ವದ ಕುರಿತು ಪ್ರಶ್ನಾರ್ಥಕ ಚಿಹ್ನೆಯನ್ನು ತಡೆಯಲು ವೆಸ್ಟ್ ಇಂಡೀಸ್‌ನಲ್ಲಿ ಗಮನಾರ್ಹ ರನ್‌ಗಳನ್ನು ಗಳಿಸಬೇಕಿದೆ.

ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ. ನಂತರ ಬಹುಶಃ ಬಿಸಿಸಿಐ ಜೊತೆ ಕುಳಿತು ಟೆಸ್ಟ್ ಸ್ವರೂಪದಲ್ಲಿ ಅವರ ಭವಿಷ್ಯವನ್ನು ನಿರ್ಧರಿತವಾಗಲಿದೆ. ಜುಲೈ 12ರಿಂದ ಡೊಮಿನಿಕಾದಲ್ಲಿ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆಯಲು ಸ್ವತಃ ರೋಹಿತ್ ಶರ್ಮಾ ನಿರ್ಧರಿಸದಿದ್ದರೆ, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Rohit Sharma Likely To Be Removed From Indian Test Captaincy After West Indies Tour

ಎರಡು ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಒಂದು ಶತಕವನ್ನು ಗಳಿಸಲು ವಿಫಲವಾದರೆ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ.

"ರೋಹಿತ್ ಶರ್ಮಾ ಅವರನ್ನು ತಕ್ಷಣ ನಾಯಕತ್ವದಿಂದ ತೆಗೆದುಹಾಕಲಾಗುತ್ತದೆ ಎಂಬುದು ಆಧಾರರಹಿತವಾಗಿದೆ. ಆದರೆ, ಅವರು ಇಡೀ ಎರಡು ವರ್ಷಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರವನ್ನು ಆಡುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ 2025ರ ವೇಳೆಗೆ ಅವರು ಸುಮಾರು 38 ವರ್ಷ ವಯಸ್ಸಿನವರಾಗಿತ್ತಾರೆ," ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

"ವೆಸ್ಟ್ ಇಂಡೀಸ್ ಪ್ರವಾಸದ ನಂತರ ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವಾಗ ಡಿಸೆಂಬರ್ ಅಂತ್ಯದವರೆಗೆ ನಮಗೆ ಯಾವುದೇ ಟೆಸ್ಟ್‌ ಪಂದ್ಯಗಳಿರುವುದಿಲ್ಲ. ಆದ್ದರಿಂದ ಆಯ್ಕೆಗಾರರಿಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯವಿದೆ. ಅಷ್ಟರೊಳಗೆ ಹೊಸ ಅಧ್ಯಕ್ಷರು ಆಯ್ಕೆ ಸಮಿತಿಯನ್ನು ಸೇರಿಕೊಳ್ಳುತ್ತಾರೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು," ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲಿನ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು. ಆಗ ರೋಹಿತ್ ಶರ್ಮಾ ಆರಂಭದಲ್ಲಿ ಟೆಸ್ಟ್ ಸ್ವರೂಪದಲ್ಲಿ ನಾಯಕನಾಗಲು ಹೆಚ್ಚು ಉತ್ಸುಕನಾಗಿರಲಿಲ್ಲ.

ಸವಾಲಿನ ನಾಗ್ಪುರ ಪಿಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ 120 ರನ್ ಗಳಿಸಿದ ನಂತರ, ರೋಹಿತ್ ಶರ್ಮಾ ಅವರಿಂದ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿರೀಕ್ಷಿಸಿದ ರೀತಿಯ ರನ್‌ಗಳನ್ನು ಗಳಿಸಲು ವಿಫಲರಾದರು.

2022ರಲ್ಲಿ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವ ವಹಿಸಿಕೊಂಡ ನಂತರ, ಭಾರತ ತಂಡ 10 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ ಅವರು ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಒಂದು ಮತ್ತು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳಲ್ಲಿ ಆಡಲಿಲ್ಲ.

ರೋಹಿತ್ ಶರ್ಮಾ ನಾಯಕನಾಗಿ ಆಡಿದ 7 ಟೆಸ್ಟ್‌ಗಳ 11 ಇನ್ನಿಂಗ್ಸ್‌ಗಳಲ್ಲಿ 35.45 ಸರಾಸರಿಯಂತೆ 390 ರನ್ ಗಳಿಸಿದರು. ಅದರಲ್ಲಿ ಒಂದು ಶತಕ ಬಂದಿದ್ದರೆ, ಒಂದೇ ಒಂದು 50ಕ್ಕಿಂತ ಹೆಚ್ಚಿನ ಸ್ಕೋರ್ ಬರಲಿಲ್ಲ. ಇದೇ ವೇಳೆ ವಿರಾಟ್ ಕೊಹ್ಲಿ ಎಲ್ಲಾ 10 ಟೆಸ್ಟ್‌ ಪಂದ್ಯಗಳನ್ನು ಆಡಿದರು. 17 ಇನ್ನಿಂಗ್ಸ್‌ಗಳಲ್ಲಿ 517 ರನ್ ಗಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ 186 ರನ್ ಗರಿಷ್ಠ ಸ್ಕೋರ್ ಆಗಿತ್ತು.

Story first published: Tuesday, June 13, 2023, 21:31 [IST]
Other articles published on Jun 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+