For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಟಚ್ಚಲ್ಲಿಲ್ಲ, ಆ ಅನುಕೂಲ ಬಳಸಿಕೊಳ್ತೀವಿ: ಶಿಖರ್ ಧವನ್

Rohit Sharma may have lost touch, we will take advantage of that says Shikhar Dhawan

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್‌ ಹಂತದ ಕೊನೇ ಕ್ಷಣದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯಕ್ಕೀಡಾಗಿ ಒಂದಿಷ್ಟು ಪಂದ್ಯಗಳಿಂದ ಹೊರಗುಳಿದಿದ್ದರು. ಹೀಗಾಗಿ ಈಗ ಶರ್ಮಾ ಕೊಂಚ ಫಾರ್ಮ್ ಕಳೆದುಕೊಂಡಂತಿದೆ. ಶರ್ಮಾ ಅವರ ಈ ಮೈನಸ್ ಪಾಯಿಂಟ್ ಅನ್ನು ಬಳಸಿಕೊಳ್ಳುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದ್ದಾರೆ.

ಹ್ಯಾಮ್‌ಸ್ಟ್ರಿಂಗ್ ಇಂಜುರಿಗೆ ಒಳಗಾಗಿರುವ ರೋಹಿತ್ ಲೀಗ್‌ ಕೊನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಕೇವಲ 4 ರನ್ ಬಾರಿಸಿ ನಿರ್ಗಮಿಸಿದ್ದರು. ರೋಹಿತ್‌ ವಿಶ್ರಾಂತಿ ಮಾಡುತ್ತಾರೆ ಎಂದು ಭಾವಿಸಲಾಗಿತ್ತಾದರೂ ಅಚಾನಕ್ ಕಾಣಿಸಿಕೊಂಡಿದ್ದ ರೋಹಿತ್ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಯೂ ಕೇಳಿ ಬಂದಿತ್ತು.

ಗುರುವಾರ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆಲುವಿನತ್ತ ಚಿತ್ತ ನೆಟ್ಟಿರುವ ಡೆಲ್ಲಿ, ರೋಹಿತ್ ಶರ್ಮಾ ಫಾರ್ಮ್ ಇಲ್ಲದ್ದನ್ನು ಬಳಸಿಕೊಂಡು ಒಳ್ಳೆಯ ಪ್ರದರ್ಶನ ನೀಡುವ ಯೋಚನೆಯಲ್ಲಿದೆ.

'ರೋಹಿತ್ ಒಬ್ಬ ಒಳ್ಳೆಯ ಆಟಗಾರ. ಆತ ಈ ಬಾರಿ ಸಾಕಷ್ಟು ಪಂದ್ಯಗಳನ್ನಾಡಿಲ್ಲವಾದ್ದರಿಂದ ಆತ ಟಚ್‌ನಲ್ಲಿದ್ದಾನೋ ಅನ್ನೋದು ನನಗೆ ಖಾತ್ರಿಯಿಲ್ಲ. ಹೀಗಾಗಿ ನಾವು ಖಂಡಿತಾ ಅದರ ಸದುಪಯೋಗ ಪಡೆದುಕೊಳ್ಳುತ್ತೇವೆ,' ಎಂದು ಧವನ್ ಮೊದಲ ಕ್ವಾಲಿಫೈರ್ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.

Story first published: Wednesday, November 4, 2020, 19:12 [IST]
Other articles published on Nov 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+