Rohit Sharma: ಗುಜರಾತ್ ಟೈಟಾನ್ಸ್ ವಿರುದ್ಧ ರೋಹಿತ್ ಕಣಕ್ಕಿಳಿಯಲಿಲ್ಲ ಏಕೆ?
ಸೋಮವಾರ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು 19ನೇ ಆವೃತ್ತಿ ಐಪಿಎಲ್‌ನ 30ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಈ ವೇಳೆ ಗುಜರಾತ್ ಟೈಟಾನ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿದೆ. ಮುಂಬೈ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಈ ವೇಳೆ ತಂಡದಲ್ಲಿ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 2026ರಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಇಲ್ಲದೇ ಎರಡನೇ ಪಂದ್ಯವನ್ನು ಆಡುತ್ತಿದೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು. ಇವರು ಏಪ್ರಿಲ್ 12 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊನೆಯ ಬಾರಿಗೆ ಕಣಕ್ಕೆ ಇಳಿದಿದ್ದರು. ಆರ್‌ಸಿಬಿ ನೀಡಿದ್ದ 241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ 13 ಎಸೆತಗಳಲ್ಲಿ 19 ರನ್ ಬಾರಿಸಿದ್ದರು. ಆಗ ಇವರಿಗೆ ಸ್ನಾಯು ಸೆಳೆತ ಉಂಟಾಯಿತು.

ರೋಹಿತ್ ಶರ್ಮಾ ಮಂಡಿರಜ್ಜು ನೋವಿನಿಂದ ಬಳಲಿದರು. ಅಲ್ಲದೆ, ಅವರನ್ನು ಸಹಾಯಕ ಸಿಬ್ಬಂದಿಗಳು ಡ್ರೆಸ್ಸಿಂಗ್ ರೂಮ್‌ನತ್ತ ಕರೆದೊಯ್ದರು. ಇದೇ ಗಾಯದ ಕಾರಣದಿಂದ ರೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ.
ರೋಹಿತ್ ಕಣಕ್ಕೆ ಇಳಿಯುವುದು ಯಾವಾಗ?
ಸೋಮವಾರದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದು ಕಂಡು ಬಂದಿತು. ಇದನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಮುಂಬೈ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಕೂಡ ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಸಹ ಹೇಳಿದ್ದರು. ಇವರು ಫಿಟ್ ಆಗಿದ್ದರೂ ಸಹ ಮುಂಬೈ ಮ್ಯಾನೇಜ್ಮೆಂಟ್ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ಇವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ ಇಂಡಿಯನ್ಸ್ ಇಲೆವೆನ್: ದಾನಿಶ್ ಮಾಲೆವರ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ತಿಲಕ್ ವರ್ಮಾ, ಶೆರ್ಫೇನ್ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಕ್ರಿಶ್ ಭಗತ್, ಜಸ್ಪ್ರೀತ್ ಬುಮ್ರಾ, ಎ ಎಮ್ ಗಜನ್ಫರ್.
19ನೇ ಆವೃತ್ತಿಯಲ್ಲಿ ಮುಂಬೈ
ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿದ 5 ಪಂದ್ಯಗಳಲ್ಲಿ 1 ಜಯ, 4 ಸೋಲು ಕಂಡಿದ್ದು, 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ರೋಹಿತ್ ಶರ್ಮಾ ಸಾಧನೆ
38 ವರ್ಷದ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ತಮ್ಮ ಬಿಗ್ ಹಿಟ್‌ಗಳಿಂದ ಹೆಸರುವಾಸಿಯಾದ ಆಟಗಾರ. ಇವರು ಈಗಾಗಲೇ ಐಪಿಎಲ್‌ನಲ್ಲಿ ಆಡಿದ 276 ಪಂದ್ಯಗಳಲ್ಲಿ 7183 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 132 ಆಗಿದೆ. ಇನ್ನು ಇದರಲ್ಲಿ 2 ಶತಕ ಹಾಗೂ 48 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications