ಸಚಿನ್, ಕೊಹ್ಲಿ ದಾಖಲೆಯ ಬೆನ್ನಲ್ಲಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ!


ನವದೆಹಲಿ, ಫೆಬ್ರವರಿ 1: ಸದ್ಯ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರೋಹಿತ್ ಶರ್ಮಾ ಅವರು ಮುಂಬರಲಿರುವ ನ್ಯೂಜಿಲ್ಯಾಂಡ್-ಭಾರತ 5ನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆಯನ್ನು ಬರೆಯುತ್ತ ಕಣ್ಣಿಟ್ಟಿದ್ದಾರೆ. ಒಂದು ವೇಳೆ ರೋಹಿತ್ ಶತಕ ಬಾರಿಸಿದರೆ ಭಾರತದ ಮಾಜಿ ಆಟಗಾರ ಸೌರವ್ ಗಂಗೂಲಿ ದಾಖಲೆಯೊಂದು ಮುರಿದುಹೋಗಲಿದೆ.
ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಇತ್ತಂಡಗಳ ನಡುವಣ 4ನೇ ಪಂದ್ಯದಲ್ಲಿ 200ನೇ ಏಕದಿನ ಪಂದ್ಯವನ್ನಾಡಿದ್ದ ಶರ್ಮಾ, 7 ರನ್ನಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ದುರದೃಷ್ಟವೆಂದರೆ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ಈ ಪಂದ್ಯದಲ್ಲಿ ಭಾರತ 8 ವಿಕೆಟ್ ಹೀನಾಯ ಸೋಲನುಭವಿಸಿತ್ತು.
ಭಾರತ ತಂಡದ ಪರ ಅಂತಾರಾಷ್ಟ್ರೀಯ ಏಕದಿನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ಒಟ್ಟು 49 ಶತಕ ಬಾರಿಸಿದ್ದಾರೆ. 39 ಶತಕಗಳೊಂದಿಗೆ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 22 ಶತಕಗಳಿಂದ ಮಾಜಿ ನಾಯಕ ಗಂಗೂಲಿ ಮತ್ತು ರೋಹಿತ್ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಫೆಬ್ರವರಿ 3ರಂದು ವೆಲ್ಲಿಂಗ್‌ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಎಚ್ಚರಿಕೆ ಆಟವಾಡುವ ಮೂಲಕ ದಾಖಲೆ ನಿರ್ಮಿಸುವತ್ತ ಕಣ್ಣಿಟ್ಟಿದ್ದಾರೆ. 4ನೇ ಪಂದ್ಯದ ಸೋಲಿನ ಸೇಡನ್ನು ರೋಹಿತ್ ಅಲ್ಲದರೂ ತೀರಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications