ಡೇವಿಡ್ ವಾರ್ನರ್ ದಾಖಲೆ ಅಳಿಸಿದ ರೋಹಿತ್ ಶರ್ಮಾ
ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ಶನಿವಾರ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕ ಶುಭಮನ್ ಗಿಲ್ ಗೆಲುವಿನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಸಹ ಮೈದಾನಕ್ಕೆ ಇಳಿದರು. ಇವರು 6 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರಿಂದ ಎಲ್ಲರ ಚಿತ್ತ ಇವರ ಮೇಲೆ ನೆಟ್ಟಿತ್ತು.
ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿದ್ದವು. ಇವರು ಐಪಿಎಲ್ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಾಗಿತ್ತು. ರೋಹಿತ್ ಶರ್ಮಾ ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆ ನೀಡಿ, ಸೈ ಎನಿಸಿಕೊಂಡರು.

ಅಫ್ಘಾನಿಸ್ತಾನ ನೀಡಿದ್ದ 194 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಈ ವೇಳೆ ರೋಹಿತ್ ಶರ್ಮಾ 16 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 16 ರನ್ ಸಿಡಿಸಿದರು. ಈ ಚಿಕ್ಕ ಇನಿಂಗ್ಸ್ ನೆರವಿನಿಂದ ದೊಡ್ಡ ಸಾಧನೆ ಮಾಡಿದರು.
ರೋಹಿತ್ ಶರ್ಮಾ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅವರು ಕೇವಲ 384 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ. ಡೇವಿಡ್ ವಾರ್ನರ್ ಈ ಮೈಲಿಗಲ್ಲು ತಲುಪಲು 390 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.
ಆರಂಭಿಕ ಆಟಗಾರನಾಗಿ 16,000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟರ್ಸ್
ರೋಹಿತ್ ಶರ್ಮಾ - 384 ಇನ್ನಿಂಗ್ಸ್
ಡೇವಿಡ್ ವಾರ್ನರ್ - 390 ಇನ್ನಿಂಗ್ಸ್
ಗ್ರೇಮ್ ಸ್ಮಿತ್ - 392 ಇನ್ನಿಂಗ್ಸ್
ವೀರೇಂದ್ರ ಸೆಹ್ವಾಗ್ - 394 ಇನ್ನಿಂಗ್ಸ್
ಕ್ರಿಸ್ ಗೇಲ್ - 415 ಇನ್ನಿಂಗ್ಸ್
110 ರನ್‌ಗೆ ಮತ್ತೊಂದು ದಾಖಲೆ
ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕನಾಗಿ 16,000 ರನ್ ಗಳಿಸಿದ ಏಳನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಭಾರತೀಯ ಆಟಗಾರರಲ್ಲಿ, ವೀರೇಂದ್ರ ಸೆಹ್ವಾಗ್ ಮಾತ್ರ ಈ ಸಾಧನೆ ಮಾಡಿದ್ದರು. ಈಗ ರೋಹಿತ್ ಸೆಹ್ವಾಗ್ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ಯಶಸ್ವಿ ಅಂತರರಾಷ್ಟ್ರೀಯ ಆರಂಭಿಕ ಆಟಗಾರನಾಗಲು ಕೇವಲ 110 ರನ್‌ಗಳ ದೂರದಲ್ಲಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಆಸೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಅಂದಾಗ ಮಾತ್ರ ದಕ್ಷಿಣ ಆಫ್ರಿಕಾ ಫ್ಲೈಟ್ ಏರುವ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications