Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ಸರಣಿಗೆ ರೋಹಿತ್ ಶರ್ಮಾ ಭರ್ಜರಿ ತಯಾರಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜೂನ್ 13, 2026 ರಿಂದ ಆರಂಭವಾಗಲಿದೆ. ಐಪಿಎಲ್ ಮುಕ್ತಾಯದ ನಂತರ ನಡೆಯುವ ಈ ಸರಣಿಯು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಈ ಸರಣಿಗಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ರೋಹಿತ್ ಜೂನ್ 8 ಮತ್ತು 9 ರಂದು ಮೊಹಾಲಿಯಲ್ಲಿ ಅಭ್ಯಾಸ ಮಾಡಲಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಅವರು ತರಬೇತಿ ನಡೆಸಲು ಅನುಮತಿ ಪಡೆದಿದ್ದಾರೆ. ತಮ್ಮ ಬ್ಯಾಟಿಂಗ್ ತಂತ್ರದ ತಪ್ಪುಗಳನ್ನು ಸುಧಾರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಗುರಿ ರನ್ ಗಳಿಕೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ.

Rohit Sharma

ಐಪಿಎಲ್ 2026 ಲೀಗ್ ಹಂತದಲ್ಲಿ ರೋಹಿತ್ ಗಾಯಗೊಂಡಿದ್ದರು. ಸ್ನಾಯು ಸೆಳೆತದಿಂದ ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಅಲ್ಲದೆ ರೋಹಿತ್ ಅವರ ಮುಂಬೈ ಇಂಡಿಯನ್ಸ್‌ ಈ ಬಾರಿ ಮತ್ತೆ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾಗಿದೆ. ರೋಹಿತ್ ಅವರಿಗೆ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಸರಣಿ ಮಹತ್ವದಾಗಿದೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಅವರು ರನ್ ಗಳಿಸಲು ಪರದಾಡಿದರು.

ಬಿಸಿಸಿಐ ನಿಯಮ ಮತ್ತು ಫಿಟ್ನೆಸ್

ಬಿಸಿಸಿಐ ನಿಯಮದಂತೆ, ಗಾಯಗೊಂಡ ಆಟಗಾರರು ಫಿಟ್ನೆಸ್ ಸಾಬೀತುಪಡಿಸಬೇಕು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರು ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಅಲ್ಲಿನ ವೈದ್ಯಕೀಯ ತಂಡದಿಂದ ದೃಢೀಕರಣ ಪಡೆದ ಬಳಿಕವೇ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಬಹುದು. ರೋಹಿತ್ ಶರ್ಮಾ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.

ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಬಯಕೆ

2027 ರ ವಿಶ್ವಕಪ್‌ಗಾಗಿ ಬಲಿಷ್ಠ ಭಾರತೀಯ ತಂಡವನ್ನು ಸಿದ್ಧಪಡಿಸುವುದು ಬಿಸಿಸಿಐ ಗುರಿ. ಅಫ್ಘಾನಿಸ್ತಾನ ವಿರುದ್ಧದ ಸರಣಿಯು ಧರ್ಮಶಾಲಾದಲ್ಲಿ ಆರಂಭವಾಗಲಿದೆ. ನಂತರ ಲಕ್ನೋ ಮತ್ತು ಚೆನ್ನೈನಲ್ಲಿ ಮುಂದಿನ ಪಂದ್ಯಗಳು ನಡೆಯುತ್ತವೆ. ರೋಹಿತ್ ಈಗ ತಮ್ಮ ಫಾರ್ಮ್ ಮರಳಿ ಪಡೆಯುವ ಒತ್ತಡದಲ್ಲಿದ್ದಾರೆ. ಜೊತೆಗೆ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಅವರ ಮೇಲಿದೆ.

19ನೇ ಆವೃತ್ತಿಯ ಐಪಿಎಲ್‌ನಲ್ಲೂ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಿದ್ದಾರೆ. ರೋಹಿತ್ ಆಡಿದ 9 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 283 ರನ್‌ ಕಲೆ ಹಾಕಿದ್ದರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ದದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮುಂದಿನ ಸರಣಿಗಳಲ್ಲೂ ತಮ್ಮ ಸ್ಥಾನ ಭಧ್ರ ಪಡಿಸಿಕೊಳ್ಳುವ ಕನಸಿನಲ್ಲಿದ್ದಾರೆ.

Story first published: Friday, June 5, 2026, 19:25 [IST]
Other articles published on Jun 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+