
2023ರ ಏಕದಿನ ವಿಶ್ವಕಪ್‌ಗೆ ತಯಾರಿ
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಕೇಂದ್ರೀಕೃತವಾಗಿರುವ ಕಾರಣ, ಭಾರತ ತಂಡಕ್ಕೆ ಫೈನಲ್‌ಗೆ ಪ್ರವೇಶಿಸಲು ಉತ್ತಮ ಅವಕಾಶವಿದೆ ಮತ್ತು 2023ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲು ಸಮಾಲೋಚನೆ ನಡೆಸಲಾಗಿದೆ.
ಹೊಸ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಸಭೆಯ ಭಾಗವಾಗಿರಲಿಲ್ಲ. ಮಂಗಳವಾರದಿಂದ (ಜನವರಿ 3) ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿದ್ದಾರೆ.

20 ಆಟಗಾರರನ್ನು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದೆ
"ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಈ ಎರಡು ಸ್ವರೂಪಗಳಲ್ಲಿ ನಾಯಕರಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅವರ ನಾಯಕತ್ವದ ದಾಖಲೆಯನ್ನು ನೋಡಿ ಮತ್ತು ಇದು ಉತ್ತಮವಾಗಿದೆ," ಎಂದು ಅನಾಮಧೇಯ ಬಿಸಿಸಿಐ ಮೂಲವು ತಿಳಿಸಿದೆ.
50 ಓವರ್‌ಗಳ ಐಸಿಸಿ ವಿಶ್ವಕಪ್‌ವರೆಗೆ ರೊಟೇಷನ್ ಮೂಲಕ 20 ಆಟಗಾರರನ್ನು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಸಭೆಯ ನಂತರ ಕಾರ್ಯದರ್ಶಿ ಜಯ್ ಶಾ ಹೇಳಿದರು.

ಚೇತನ್ ಶರ್ಮಾ ಮತ್ತೊಮ್ಮೆ ಆಯ್ಕೆ ಸಮಿತಿ ಅಧ್ಯಕ್ಷ ಸಾಧ್ಯತೆ
ಬಿಸಿಸಿಐ ಮಹತ್ವದ ನಡೆಯಲ್ಲಿ, ಭಾನುವಾರದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಚೇತನ್ ಶರ್ಮಾ ಅವರು ಮತ್ತೊಮ್ಮೆ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಅಧ್ಯಕ್ಷರಾಗದಿದ್ದರೆ ಉತ್ತರ ವಲಯದ ಪ್ರತಿನಿಧಿಯಾಗುವ ಸಾಧ್ಯತೆಯೂ ಇದೆ. ಭಾರತದ ಮಾಜಿ ವೇಗದ ಬೌಲರ್ ಹಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರ ಹೆಸರು ಕೂಡ ದಕ್ಷಿಣ ವಲಯದಿಂದ ಕೇಳಿಬರುತ್ತಿದೆ, ಆದರೆ ಸಭೆಯಲ್ಲಿ ಅವರ ಆಯ್ಕೆಯನ್ನು ಖಚಿತಪಡಿಸಿಲ್ಲ.
2023ರ ಏಕದಿನ ವಿಶ್ವಕಪ್‌ನ ಮಾರ್ಗಸೂಚಿಯ ಯೋಜನೆಯಲ್ಲಿ ಚೇತನ್ ಶರ್ಮಾ ಅವರನ್ನು ಪುನಃ ಸೇರಿಸಿಕೊಳ್ಳುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಮೂರು ಹೊಸ ಸದಸ್ಯರೊಂದಿಗೆ ಸಮಿತಿಯ ನಿರಂತರತೆ
"ಚೇತನ್ ಶರ್ಮಾಗೆ ಹೇಳದಿದ್ದರೆ, ಅವನು ಮೊದಲ ಸ್ಥಾನದಲ್ಲಿ ಅರ್ಜಿ ಸಲ್ಲಿಸುತ್ತಿರಲಿಲ್ಲ. ಅದು ಸ್ವತಃ ಬಿಸಿಸಿಐನ ಸೂಚನೆಯಾಗಿದೆ. ಇನ್ನು 10 ತಿಂಗಳಲ್ಲಿ ಭಾರತ ವಿಶ್ವಕಪ್‌ಗೆ ತಯಾರಿ ನಡೆಸಬೇಕಿದೆ. ಚೇತನ್ ಶರ್ಮಾ ಮತ್ತು ಹರ್ವಿಂದರ್ ಸಿಂಗ್ ಅವರ ಉಪಸ್ಥಿತಿಯು ಮೂರು ಹೊಸ ಸದಸ್ಯರೊಂದಿಗೆ ನಿರಂತರತೆಯನ್ನು ಕಾಪಾಡುತ್ತದೆ," ಎಂದು ಬಿಸಿಸಿಐ ಮೂಲವು ಹೇಳಿವೆ.
ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಎಸ್‌ಎಸ್ ದಾಸ್ ಅವರು ತಮ್ಮ 21 ಟೆಸ್ಟ್ ಪಂದ್ಯಗಳ ಅನುಭವದೊಂದಿಗೆ ಪೂರ್ವ ವಲಯದಿಂದ ನೆಚ್ಚಿನ ಆಯ್ಕೆಯಾಗಿದ್ದಾರೆ. ಇನ್ನು ಪಶ್ಚಿಮ ವಲಯದಿಂದ ಗುಜರಾತ್‌ನ ಅನುಭವಿ ಆಟಗಾರ ಮುಕುಂದ್ ಪರ್ಮಾರ್, ಸಲೀಲ್ ಅಂಕೋಲಾ, ಸಮೀರ್ ದಿಘೆ ತ್ರಿಕೋನ ಸ್ಪರ್ಧೆಯಲ್ಲಿದ್ದಾರೆ. ಮುಂದಿನ ವಾರದಲ್ಲಿ ನೂತನ ಆಯ್ಕೆ ಸಮಿತಿಯನ್ನು ಹೆಸರಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.


Click it and Unblock the Notifications
