ಈಗ ಗೆದ್ದಿರಬಹುದು, ಆದ್ರೆ SENA ಪಿಚ್‌ಗಳಲ್ಲಿ ರೋಹಿತ್‌ಗೆ ನಿಜವಾದ ಚಾಲೆಂಜ್ ಎದುರಾಗಲಿದೆ: ಕೊಹ್ಲಿ ಕೋಚ್

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಈಗಾಗಲೇ ಸತತ ಟೂರ್ನಿಗಳನ್ನ ಗೆದ್ದಿರಬಹುದು ಆದ್ರೆ ಅವರಿಗೆ ನಿಜವಾದ ಚಾಲೆಂಜ್ SENA ರಾಷ್ಟ್ರಗಳಲ್ಲಿ ಎದುರಾಗಲಿದೆ ಎಂದು ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಮೂರು ಫಾರ್ಮೆಟ್‌ನ ನಾಯಕನಾದ ಬಳಿಕ ಇತ್ತಿಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಭರ್ಜರಿ ಜಯಗಳಿಸಿದರು. ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧ ಗೆದ್ದ ಬಳಿಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಎದುರಾಳಿ ತಂಡವನ್ನ ವೈಟ್‌ವಾಶ್ ಮಾಡಿದರು.
ಕೇವಲ ಇದೊಂದೇ ಸರಣಿ ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ನಡೆದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 3-0 ಅಂತರದಲ್ಲಿ ಟಿ20 ಸರಣಿ ಗೆದ್ದಿತು.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಸರಣಿ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್ ಸರಣಿಯನ್ನ ಶ್ರೀಲಂಕಾ ವಿರುದ್ಧ ಆಡಲಿದೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಹಿಟ್‌ಮ್ಯಾನ್ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಯಕತ್ವ ವಹಿಸಲಿದ್ದಾರೆ. ಇದಕ್ಕೂ ಮೊದಲು ಭಾರತ ಮೂರು ಪಂದ್ಯಗಳ ಟಿ20ಯನ್ನು ಇದೇ ವಾರ ಗುರುವಾರ ಲಕ್ನೋದಲ್ಲಿ ಆಡಲಿದೆ.

ವಿದೇಶಿ ಪಿಚ್‌ಗಳಲ್ಲಿ ರೋಹಿತ್‌ಗೆ ನಿಜವಾದ ಚಾಲೆಂಜ್
ಯೂಟ್ಯೂಬ್ ಚಾನೆಲ್ ಖೇಲ್ ನೀತಿಯಲ್ಲಿ ಮಾತನಾಡಿದ ರಾಜ್‌ಕುಮಾರ್ ಶರ್ಮಾ, SENAದಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ತಂಡವನ್ನು ಮುನ್ನಡೆಸುವುದು ರೋಹಿತ್‌ಗೆ ನಿಜವಾದ ಪರೀಕ್ಷೆಯಾಗಿದೆ. ಏಕೆಂದರೆ ಬಲಿಷ್ಠ ತಂಡಗಳು ಭಾರತ ಪ್ರವಾಸ ಮಾಡುವಾಗ ಹೋರಾಡುತ್ತವೆ. ಅದೇ ರೀತಿ ಟೀಂ ಇಂಡಿಯಾ ಈ ರಾಷ್ಟ್ರಗಳಲ್ಲಿ ಗೆಲ್ಲಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.
ಆತನಲ್ಲಿರುವ ಸಾಮರ್ಥ್ಯದ ಕಾರಣಕ್ಕೆ ಆಯ್ಕೆ ಮಾಡಲಾಗಿದೆ: ಕಳಪೆ ಪ್ರದರ್ಶನ ನೀಡಿದ ಆಟಗಾರನ ಬೆಂಬಲಕ್ಕೆ ನಿಂತ ದ್ರಾವಿಡ್
"ಶರ್ಮಾ ಅವರ ನಿಜವಾದ ಪರೀಕ್ಷೆಯು SENA ದೇಶಗಳಲ್ಲಿ ಇರುತ್ತದೆ. ಬಲಿಷ್ಠ ತಂಡಗಳು ಕೂಡ ಭಾರತಕ್ಕೆ ಬಂದಾಗ ಕಷ್ಟಪಡುತ್ತವೆ. ಒಬ್ಬ ಭಾರತೀಯ ನಾಯಕನು SENA ದೇಶಗಳಲ್ಲಿ ಅವನು ಗೆಲ್ಲುವ ಪಂದ್ಯಗಳು ಮತ್ತು ಸರಣಿಗಳ ಸಂಖ್ಯೆಯ ಮೇಲೆ ನಾಯಕತ್ವ ನಿರ್ಣಯಿಸಲಾಗುತ್ತದೆ'' ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.
ಜೊತೆಗೆ ವಿದೇಶಿ ಪ್ರವಾಸಗಳಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ ಭಾರತೀಯ ನಾಯಕನನ್ನು ಮತ್ತು ಅವನ ಸಾಮರ್ಥ್ಯವನ್ನ ನಿರ್ಣಯಿಸಲಾಗುತ್ತದೆ. ಹೀಗಾಗಿ ರೋಹಿತ್ ಅವರು SENA ದೇಶಗಳಲ್ಲಿ ನಾಯಕರಾಗಿ ತಮ್ಮ ಪ್ರತಿಭೆಯನ್ನು ಮುಂದುವರೆಸುತ್ತಾರೆ ಎಂದು ಅವರು ಆಶಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಒಂದೇ ಸಮಯದಲ್ಲಿ ನಾಲ್ಕೈದು ನಾಯಕರನ್ನ ಬೆಳೆಸಬಾರದು
ರೋಹಿತ್ ಶರ್ಮಾರನ್ನ ನಾಯಕರನ್ನಾಗಿ ಆಯ್ಕೆ ಮಾಡಿದ ಬಳಿಕ ಏಕಕಾಲದಲ್ಲಿ ನಾಲ್ಕೈದು ಆಟಗಾರರನ್ನ ನಾಯಕತ್ವಕ್ಕೆ ತರಲು ಸಾಧ್ಯವಿಲ್ಲ ಮತ್ತು ಅವರು ಭಾರತಕ್ಕಾಗಿ ದೀರ್ಘಕಾಲ ಆಡಬಲ್ಲ ಒಬ್ಬ ಆಟಗಾರನನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಿಮವಾಗಿ ತಂಡದ ಎಲ್ಲಾ ಸ್ವರೂಪದ ನಾಯಕರಾಗುವ ಮೊದಲು ಎಂಎಸ್ ಧೋನಿ ಅವರ ಉಪನಾಯಕರಾಗಿ ದೀರ್ಘಕಾಲ ಉಳಿದಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications