Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ಸಿಎಸ್‌ಕೆ ಎದುರು ಹಿಟ್‌ ಮ್ಯಾನ್ ಷೋ..!

ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಅಲ್ಲದೆ, ಚೆಪಾಕ್‌ನಲ್ಲಿ ಕಳೆದ ಪಂದ್ಯದ ಸೋಲಿಗೆ ಮುಂಬೈ ಇಂಡಿಯನ್ಸ್ ಸೇಡು ತೀರಿಸಿಕೊಂಡಿದ್ದೇವೆ. ಎಂಎಸ್ ಧೋನಿ ಪಡೆ ವಿರುದ್ಧ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಇಬ್ಬರೂ ಬ್ಯಾಟರ್ಸ್ ಅರ್ಧಶತಕಗಳನ್ನು ಬಾರಿಸಿ ಮಿಂಚಿದರು.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 177 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ ಸುಲಭವಾಗಿ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಪಾಯಿಂಟ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ. ಮುಂಬೈ ಆಡಿರುವ 8 ಪಂದ್ಯಗಳಲ್ಲಿ ನಾಲ್ಕು ಜಯಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ಚೆನ್ನೈ ತಂಡವು ಆರನೇ ಸೋಲನ್ನು ಎದುರಿಸಿದೆ. ಸಿಎಸ್‌ಕೆ ಪಾಯಿಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಕೇವಲ 4 ಅಂಕಗಳನ್ನು ಹೊಂದಿದೆ.

Rohit Sharma wins Most Valuable Player award for form in Chennai Super Kings vs Mumbai Indians match

ಹಿಟ್ ಮ್ಯಾನ್ ಷೋ

ಐಪಿಎಲ್ 2025 ರಲ್ಲಿ ರೋಹಿತ್ ಶರ್ಮಾ ಅವರಿಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದರು. ಚೆನ್ನೈ ಬೌಲರ್ಸ್ ಬೆಂಡೆತ್ತಿದ್ದ ರೋಹಿತ್ ಶರ್ಮಾ ತವರಿನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ರೋಹಿತ್ ಶರ್ಮಾ ಸತತ 7 ಪಂದ್ಯಗಳಿಂದ ರನ್ ಗಳಿಸಲು ಹೆಣಗಾಡುತ್ತಿದ್ದರು. ಇದಕ್ಕಾಗಿ ಅವರು ಹಲವು ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ, ಆತ್ಮ ವಿಶ್ವಾಸ ಕಳೆದುಕೊಳ್ಳ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಅವರು ಎದುರಿಸಿದ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಅಮೋಘ ಸಿಕ್ಸರ್‍‌ಗಳ ನೆರವಿನಿಂದ ಅಜೇಯ 76 ರನ್ ಗಳಿಸಿ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರೋಹಿತ್ ಶರ್ಮಾ ಅವರು ಫಾರ್ಮ್‌ಗೆ ಮರಳಿರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಲ ತಂದಿದೆ. ಕಳೆದ 7 ಪಂದ್ಯಗಳಿಂದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗುತ್ತಿತ್ತು. ಇದಕ್ಕೆ ಕಾರಣ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಈಗ ರೋಹಿತ್ ಶರ್ಮಾ ಲಯ ಕಂಡುಕೊಂಡಿರುವುದು ಮುಂದಿನ ಪಂದ್ಯಗಳಲ್ಲಿ ಮುಂಬೈ ಗೆಲುವಿಗೆ ನೆರವಾಗಲಿದೆ.

Story first published: Sunday, April 20, 2025, 23:35 [IST]
Other articles published on Apr 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+