
ವೆಸ್ಟ್‌ಇಂಡೀಸ್ ತಂಡದ ಲಿಮಿಟೆಡ್ ಓವರ್ ತಂಡದ ನೂತನ ಕ್ಯಾಪ್ಟನ್ ಕಿರಾನ್ ಪೊಲಾರ್ಡ್ ಭಾರತ ತಂಡದ ನಿಗದಿತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ವೆಸ್ಟ್ಇಂಡೀಕಸ್ ವಿರುದ್ಧ ಭಾರತ ಸರಣಿ ಆರಂಭವಾಗಲಿದ್ದು ಈ ಸಂದರ್ಭದಲ್ಲೇ ಕಿರಾನ್ ಪೊಲಾರ್ಡ್ ತನ್ನ ಐಪಿಎಲ್ ತಂಡದ ನಾಯಕನನ್ನು ಅನ್‌ಫಾಲೋ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.
ಹೌದು ಕಿರಾನ್ ಪೊಲಾರ್ಡ್ ರೋಹಿತ್ ಶರ್ಮಾರನ್ನು ಅನ್‌ಫಾಲೋ ಮಾಡೋದ್ದಾರೆ. ಅದಕ್ಕೆ ಇದೀಗ ಕಾರಣವೂ ತಿಳಿದುಬಂದಿದೆ. ಅದು ಮುಂಬರುವ ವೆಸ್ಟ್‌ಇಂಡೀಸ್ ಭಾರತ ಸರಣಿ ಅನ್ನೋದು ಬಹಿರಂಗವಾಗಿದೆ. ಇಬ್ರೂ ಆಟಗಾರರುಈ ಸರಣಿಯಲ್ಲಿ ಸೆಣೆಸಾಡಲು ಗೆಳೆತನಕ್ಕೆ ಕೊಳ್ಳಿಯಿಟ್ಟಿದ್ದಾರೆ. ಆದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಕಿರಾನ್ ಪೊಲಾರ್ಡ್ ಅನ್ ಫಾಲೋ ಮಾಡಿದ್ದಾರೆ. ಮಾತ್ರವಲ್ಲ ಈ ಕುರಿತಾಗಿ ಇವತ್ತಿ ರೋಹಿತ್ ಶರ್ಮಾ ಟ್ವೀಟರ್‌ನಲ್ಲಿ ಹ್ಯಾಪಿ ಅನ್‌ಫ್ರೆಂಡ್‌ಶಿಪ್ ಡೇ ಎಂದು ಪೋಲಾರ್ಡ್ ಅವರನ್ನು ಮೆನ್ಶನ್ ಮಾಡಿ ಶುಭಕೋರಿದ್ದಾರೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯ ನೇರಪ್ರಸಾರ ಸ್ಟಾರ್‌ಸ್ಪೋರ್ಟ್‌ನಲ್ಲಿ ಪ್ರಸಾರವಾಗಲಿದೆ. ಪ್ರತೀ ಸರಣಿಗೂ ಮುನ್ನ ಸ್ಟಾರ್ ಸ್ಪೋರ್ಟ್ ಕ್ರಿಯೇಟಿವ್ ಜಾಹೀರಾತಿನ ಮೂಲಕ ಪ್ರಚಾರವನ್ನು ನಡೆಸುತ್ತೆ. ಈ ಸರಣಿಗೂ ರೋಹಿತ್ ಶರ್ಮಾ ಹಾಗೂ ಕಿರಾನ್ ಪೊಲಾರ್ಡ್ ಅವರ ಸ್ನೇಹವನ್ನು ವಿಷಯವಾಗಿಸಿಕೊಂಡು ಜಾಹೀರಾತು ಸಿದ್ಧಪಡಿಸಿದೆ. ಜಾಹೀರಾತಿನ ಅಂತ್ಯದಲ್ಲಿ ಇಬ್ಬರೂ ಗೆಳೆಯರು ತಮ್ಮ ತಮ್ಮ ತಂಡಗಳಿಗೋಸ್ಕರ ಕಿತ್ತಾಡಿಕೊಂಡು ಬೇರೆಯಾಗುತ್ತಾರೆ. ಈ ಜಾಹೀರಾತಿಗೆ ಪೂರಕವಾಗಿ ಕಿರಾನ್ ಪೊಲಾರ್ಡ್ ರೋಹಿತ್ ಶರ್ಮಾರನ್ನು ಅನ್‌ಫಾಲೋ ಮಾಡಿದ್ದಾರೆ.
ರೋಹಿತ್ ಶರ್ಮಾ ಮತ್ತು ಕಿರಾನ್ ಪೊಲಾರ್ಡ್ ಐಪಿಎಲ್‌ನಲ್ಲ ಒಂದೇ ತಂಡವನ್ನು ಪ್ರತಿನಿಧಿಸುವ ಆಟಗಾರರು. ಕಳೆದ ಹಲವು ಸೀಸನ್‌ಗಳಿಂದ ಇಬ್ಬರೂ ಆಟಗಾರರು ಮುಂಬೈ ಇಂಡಿಯನ್ಸ್‌ನಲ್ಲಿ ಸಹಪಾಠಿಗಳಾಗಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಪ್ರಶಸ್ತಿಗೆಲ್ಲಲು ಈ ಇಬ್ಬರು ಆಟಗಾರರ ಕೊಡುಗೆ ಸಾಕಷ್ಟಿದೆ. ಇಬ್ಬರು ಆಟಗಾರರು ಉತ್ತಮ ಗೆಳೆಯರೂ ಹೌದು.
ಕಳೆದ ಐಪಿಎಲ್ ಸರಣಿಯನ್ನು ಗೆದ್ದುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಮುಂದಿನ ವರ್ಷ ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಇಂತಾ ಸಂದರ್ಭದಲ್ಲಿ ಈ ಇಬ್ಬರು ಆಟಗಾರರ ನಡುವೆ ಮನಸ್ಥಾಪಗಳೇನಾದ್ರು ಉಂಟಾಗಿದ್ಯಾ? ಹಾಗೇನಾದರೂ ಆಗಿದ್ದಲ್ಲಿ ಅದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬುದು ಅಭಿಮಾನಿಗಳ ಆತಂಕವಾಗಿತ್ತು. ಆದರೆ ಜಾಹೀರಾತಿನ ವೀಡಿಯೋ ನೋಡಿದ ಬಳಿಖ ಅಭಿಮಾನಿಗಳ ಮುಖದಲ್ಲಿ ನಗು ಕಾಣಿಸುವುದು ಖಂಡಿತಾ.