Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ಟೆಸ್ಟ್ ಬಿಟ್ಟು ಟಿಕ್‌ಟಾಕ್‌ಗೆ ಬಂದ ರೋಹಿತ್, ಖಲೀಲ್, ಚಾಹಲ್

Rohit Sharma, Yuzvendra Chahal, Khaleel Ahmed share hilarious TikTok video
Chahal,Rohit,Khaleel leave fans in splits with a hilarious TikTok video | Oneindia Kannada

ಮುಂಬೈ, ಫೆಬ್ರವರಿ 26: ನ್ಯೂಜಿಲೆಂಡ್‌ ವಿರುದ್ಧದ 5ನೇ ಟಿ20ಐ ಪಂದ್ಯದ ವೇಳೆ ಕಾಲಿನ ಸ್ನಾಯ ಸೆಳೆತಕ್ಕೆ (ಕಾಫ್ ಇಂಜುರಿ) ಒಳಗಾಗಿದ್ದ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ, ತಂಡದಿಂದ ಹೊರ ಬಿದ್ದಿದ್ದರು. ಅನಂತರ ಕಿವೀಸ್ ಎದುರಿನ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿಯಲ್ಲೂ ರೋಹಿತ್ ಪಾಲ್ಗೊಂಡಿರಲಿಲ್ಲ.

ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್-ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್, ಎಡಗೈ ವೇಗಿ ಖಲೀಲ್ ಅಹ್ಮದ್ ಕೂಡ ಆಡುತ್ತಿಲ್ಲ. ಪ್ರಮುಖ ಸರಣಿಯಿಂದ ಹೊರಗಿರುವ ಮೂವರೂ ಆಟಗಾರರು ಟಿಕ್ ಟಾಕ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಟೆಸ್ಟ್ ಸರಣಿಯಿಂದ ಹೊರಗಿರುವ ರೋಹಿತ್, ಚಾಹಲ್, ಖಲೀಲ್ ಬಿಡುವಿನ ವೇಳೆಯನ್ನು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಮೂವರೂ ಇರುವ ತಮಾಷೆಯ ಟಿಕ್ ಟಾಕ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೋಹಿತ್, ಚಾಹಲ್, ಖಲೀಲ್ ಮಾಡಿರುವ ಈ ವೀಡಿಯೋ 'ಢೋಲ್' ಬಾಲಿವುಡ್ ಸಿನಿಮಾದ್ದು. ಇಲ್ಲಿ ಚಾಹಲ್, ಕಾಮಿಡಿಯನ್ ರಾಜ್‌ಪಾಲ್‌ ಯಾದವ್‌ರಂತೆ ನಟಿಸಿದ್ದರೆ, ರೋಹಿತ್ ಮತ್ತು ಖಲೀಲ್, ತುಷಾರ್ ಕಪೂರ್ ಮತ್ತು ಕುನಾಲ್ ಖೆಮು ಅವರಂತೆ ನಟಿಸಿದ್ದಾರೆ.

ರಾಜ್‌ಪಾಲ್‌ ತಲೆ ಉಲ್ಟಾಪಲ್ಟಾ ಆಗಿದೆ ಎಂದು ತಿಳಿದು ತುಷಾರ್ ಮತ್ತು ಕುನಾಲ್ ಇಬ್ಬರೂ ರಾಜ್‌ಪಾಲ್‌ ತಲೆಯನ್ನು ತಿರುಗಿಸಲು ಯತ್ನಿಸುವಾಗಿನ ಕಾಮಿಡಿ ಸೀನ್ ಇದು. ತಮಾಷೆ, ತರ್ಲೆ ವಿಚಾರಕ್ಕಾಗಿ ಆಗಾಗಿ ಸುದ್ದಿಯಾಗುತ್ತಿರುವ ಯುಜುವೇಂದ್ರ ಚಾಹಲ್ ಈ ಟಿಕ್‌ಟಾಕ್ ವೀಡಿಯೋವನ್ನು ತನ್ನ ಟ್ವಿಟರ್ ಖಾತೆಗೆ ಹಾಕಿಕೊಂಡಿದ್ದಾರೆ.

Story first published: Wednesday, February 26, 2020, 16:14 [IST]
Other articles published on Feb 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+