For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಸ್ಥಾನಕ್ಕೆ ಸಿದ್ಧವಾಗಿದ್ದಾರೆ ಇಬ್ಬರು ಭವಿಷ್ಯದ ಸ್ಟಾರ್‌ಗಳು: ಟೆಸ್ಟ್ ಆರಂಭಿಕ ಸ್ಥಾನಕ್ಕೆ ಯಾರು ಬೆಸ್ಟ್!!

ಟೀಮ್ ಇಂಡಿಯಾದ ಮೂರು ಮಾದರಿಯ ನಾಯಕ ರೋಹಿತ್ ಶರ್ಮಾ(Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಘಟ್ಟದಲ್ಲಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಟೀಮ್ ಇಂಡಿಯಾದ ನಾಯಕ ಈಗಾಗಲೇ 36 ವರ್ಷಗಳನ್ನು ದಾಟಿದ್ದು ಇತ್ತೀಚಿನ ದಿನಗಳಲ್ಲಿ ರೋಹಿತ್ ಪ್ರದರ್ಶನ ಕೂಡ ಮಂಕಾದಂತಿದೆ. ರೋಹಿತ್ ಎಷ್ಟು ದೀರ್ಘವಾಗಿ ಆಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟಯಿಲ್ಲದಿದ್ದರೂ ಅವರ ಸ್ಥಾನಕ್ಕೆ ಸೂಕ್ತವಾದ ಆಟಗಾರನನ್ನು ಸಿದ್ಧಪಡಿಸುವ ಜವಾಬ್ಧಾರಿ ತಂಡದ ಮ್ಯಾಬೇಜ್‌ಮೆಂಟ್ ಮೇಲಿದೆ.

2019ರವರೆಗೂ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಖದಲ್ಲಿ ಕಣಕ್ಕಿಳಿಯುತ್ತಿದ್ದ ರೋಹಿತ್ ಶರ್ಮಾ 2019ರಲ್ಲಿ ಸುದೀರ್ಘ ಮಾದರಿಯಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ಅವರ ಟೆಸ್ಟ್ ವೃತ್ತಿ ಬದುಕಿಗೆ ಹೊಸ ಆಯಾಮ ದೊರೆಯಿತು. ಅದಾದ ಬಳಿಕ ರೋಹಿತ್ ಹಿಂತಿರುಗಿ ನೋಡಿದ್ದೇ ಇಲ್ಲ. 2019ರಲ್ಲಿ ಟೆಸ್ಟ್‌ಗೆ ಕಮ್‌ಬ್ಯಾಕ್ ಮಾಡಿದ ಬಳಿಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪೂಜಾರ ಮತ್ತು ಕೊಹ್ಲಿ ಮಾತ್ರವೇ ಈ ಅವಧಿಯಲ್ಲಿ ರೋಹಿತ್‌ಗಿಂತ ಅಧಿಕ ರನ್‌ ಬಾರಿಸಿದ ಆಟಗಾರರಾಗಿದ್ದಾರೆ. ಇನ್ನು ರೋಹಿತ್ 35ನೇ ವಯಸ್ಸಿನಲ್ಲಿ ಟೆಸ್ಟ್ ತಂಡದ ನಾಯಕತ್ವದ ಜವಾನ್ಧಾರಿ ಕೂಡ ವಹಿಸಿಕೊಂಡರು.

Yashasvi Jaiswal

ಇದೀಗ ರೋಹಿತ್ ಶರ್ಮಾ ಅವರ ಸ್ಥಾನವನ್ನು ಭವಿಷ್ಯದಲ್ಲಿ ಸಮರ್ಥವಾಗಿ ತುಂಬಬಲ್ಲ ಆಟಗಾರನನ್ನು ಸಿದ್ಧಪಡಿಸುವ ಜವಾಬ್ಧಾರಿ ಮ್ಯಾನೇಜ್‌ಮೆಂಟ್ ಮುಂದಿದೆ. ಆದರೆ ಈ ಸಂದರ್ಭದಲ್ಲಿ ಇಬ್ಬರು ಯುವ ಆಟಗಾರರು ರೋಹಿತ್ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ ಎಂಬ ಚರ್ಚೆಗಳು ಜೋರಾಗಿದೆ. ಟೆಸ್ಟ್ ತಂಡಕ್ಕೆ ಇನ್ನಷ್ಟೇ ಪದಾರ್ಪಣೆ ಮಾಡಬೇಕಿರುವ ಆ ಇಬ್ಬರು ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಯಶಸ್ವಿ ಜೈಸ್ವಾಲ್

ರೋಹಿತ್ ಶರ್ಮಾ ಅವರ ಸ್ಥಾನವನ್ನು ಭವಿಷ್ಯ ತುಂಬಬಲ್ಲ ಆಟಗಾರ ಯಾರು ಎಂಬ ಪ್ರಶ್ನೆ ಬಂದಾಗ ಸದ್ಯಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಜೋರಾಗಿ ಮತ್ತು ಸ್ಪಷ್ಟವಾಗಿ ಹೊರಬರುವ ಹೆಸರೆಂದರೆ ಅದು ಯಶಸ್ವಿ ಜೈಸ್ವಾಲ್. ಬಹುಶಃ ಆಯ್ಕೆ ಆಯ್ಕೆಗಾರರ ಮುಂದೆಯೂ ಇದೇ ಹೆಸರಿದ್ದರೆ ಅಚ್ಚರಿಯಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೀಡಿರುವ ಅವರ ಸ್ಥಿರ ಪ್ರದರ್ಶನ ಇದಕ್ಕೆ ಇತ್ತೀಚಿನ ಕಾರಣ. ಸರಾಸರಿ ಈ ಬಾರಿಯ ಐಪಿಎಲ್‌ನಲ್ಲಿ ಜೈಸ್ವಾಲ್ 48ರ ಸರಾಸರಿಯಲ್ಲಿ 625 ರನ್‌ಗಳನ್ನು ಗಳಿಸಿದ್ದು ಟೂರ್ನಿಯಲ್ಲಿ 5ನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಎನಿಸಿಕೊಂಡಿದ್ದಾರೆ. 1 ಶತಕ ಮತ್ತು 5 ಅರ್ಧಶತಕ ಸಿಡಿಸಿದ ಅವರು 163ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು.

ಯಶಸ್ವಿ ಜೈಸ್ವಾಲ್ ಅವರು ರೋಹಿತ್ ಶರ್ಮಾ ಅವರ ಟೆಸ್ಟ್ ಆರಂಭಿಕ ಸ್ಥಾನವನ್ನು ತುಂಬಲು ಈ ಐಪಿಎಲ್ ಪ್ರದರ್ಶನಕ್ಕಿಂತಲೂ ದೊಡ್ಡ ಕಾರಣವಿದೆ ಎಂಬುದು ಕೂಡ ನಿಜ. ಚುಟುಕು ಮಾದರಿಯಲ್ಲಿ ಮಾತ್ರವಲ್ಲದೆ ಈ ಯುವ ಎಡಗೈ ಬ್ಯಾಟರ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿರುವ ರನ್‌ಗಳೇ ಇದಕ್ಕೆ ಸಾಕ್ಷಿಯಾಗಿದೆ. ಆಡಿರುವ 15 ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಜೈಸ್ವಾಲ್ 67ರ ಸ್ಟ್ಐಕ್‌ರೇಟ್‌ನಲ್ಲಿ 80ರಷ್ಟು ಅಮೋಘ ಸರಾಸರಿಯೊಂದಿಗೆ 1845 ರನ್‌ಗಳನ್ನು ಗಳಿಸಿದ್ದಾರೆ.

ಕೇವಲ 21ರ ಹರೆಯದ ಜೈಸ್ವಾಲ್ ದೇಶೀಯ ರೆಡ್‌ ಬಾಲ್ ಕ್ರಿಕೆಟ್‌ನಲ್ಲಿ ಈಗಾಗಲೇ 9 ಶತಕ ಹಾಗೂ 2 ಅರ್ಧ ಶತಕ ಸಿಡಿಸಿದ್ದಾರೆ. ಈ ಅಂಕಿಅಂಶಗಳು ಅವರಲ್ಲಿರುವ ಸುದೀರ್ಘ ಕಾಲ ಆಡುವ ಸಾಮರ್ಥ್ಯವನ್ನು ಸ್ಪಷ್ಟವಾಗಿ ಹೇಳುತ್ತಿವೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅವರ ಅತಿ ಹೆಚ್ಚಿನ ಸ್ಕೋರ್ ಎಂದರೆ 265 ರನ್. ರಣಜಿ ಟ್ರೋಫಿಯ ಈ ಅಮೋಘ ಪ್ರದರ್ಶನವನ್ನು ಹೊರತುಪಡಿಸಿದರೆ ದುಲೀಪ್ ಟ್ರೋಫಿ ಹಾಗೂ ಇರಾನಿ ಟ್ರೋಫಿಯಲ್ಲಿಯೂ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ.

ಋತುರಾಜ್ ಗಾಯಕ್ವಾಡ್

ಋತುರಾಜ್ ಗಾಯಕ್ವಾಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಮೊದಲಿಗೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಆದರೆ ತಮ್ಮ ಮದುವೆಯ ಕಾರಣದಿಂದಾಗಿ ಅವರು ಈ ಪ್ರವಾಸದಿಂದ ಹಿಂದೆ ಸರಿದಿದ್ದರು. ಆದರೆ ಈ ಆಯ್ಕೆ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸನಿಹದಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರಲ್ಲೂ ರೋಹಿತ್ ಶರ್ಮಾ ಅಥವಾ ಶುಬ್ಮನ್ ಗಿಲ್ ಗಾಯಗೊಂಡರೆ ನಂತರದ ಸರದಿಯಲ್ಲಿ ಗಾಯಕ್ವಾಡ್ ಇದ್ದಾರೆ ಎಂಬುದನ್ನು ಕೂಡ ತಿಳಿಸುವಂತಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸೊಗಸಾದ ಶೈಲಿಯ ಬ್ಯಾಟರ್‌ಗಳಲ್ಲಿ ಒಬ್ಬರಾದ ಗಾಯಕ್ವಾಡ್ ತಮ್ಮ ವೃತ್ತಿಜೀವನದಲ್ಲಿ ಈಗಾಗಲೇ ಐಪಿಎಲ್‌ನಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದಾರೆ. ಅಲ್ಲದೆ ಅವರುದೇಶೀಯ ಕ್ರಿಕೆಟ್‌ನಲ್ಲಿ ರೆಡ್‌ಬಾಲ್‌ನಲ್ಲಿಯೂ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. 28 ಪ್ರಥಮದರ್ಜೆ ಪಂದ್ಯಗಳಲ್ಲಿ ಅವರು 6 ಶತಕಗಳು ಮತ್ತು 9 ಅರ್ಧಶತಕಗಳನ್ನು ಸಿಡಿಸಿದ್ದು 42ರ ಸರಾಸರಿಯನ್ನು ಹೊಂದಿದ್ದಾರೆ.

Story first published: Tuesday, June 20, 2023, 10:55 [IST]
Other articles published on Jun 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+