Rohit Sharma: ಬೆಂಗಳೂರಿನಲ್ಲಿ ಅಂದು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ದ್ವಿಶತಕದ ಆಟ
ದುಬೈನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ತಮ್ಮ ಹಳೆಯ ಖದರ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಸಲಿಗೆ ರೋಹಿತ್ ಶರ್ಮಾ ಅವರಿಗೆ ಕಾಂಗರೂಗಳನ್ನು ಬೇಟೆಯಾಡುವುದು ಅಚ್ಚು ಮೆಚ್ಚು. ಈ ಮೊದಲೇ ರೋಹಿತ್ ಶರ್ಮಾ ಆಸ್ಟ್ರೇಲಿಯನ್ನರಿಗೆ ಕಾಟ ನೀಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ, ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಲ್ಲುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಈಗಾಗಲೇ ಆಸೀಸ್ ವಿರುದ್ಧ 8 ಶತಕಗಳನ್ನು ಬಾರಿಸಿದ್ದಾರೆ. ಇನ್ನೊಂದು ಶತಕವನ್ನು ಬಾರಿಸುವಲ್ಲಿ ಸಫಲರಾದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಮನಾಗಿಸುವ ಇರಾದೆಯನ್ನು ಹೊಂದಿದ್ದಾರೆ.

ಡಬಲ್ ಸೆಂಚುರಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ, ನವೆಂಬರ್ 2, 2013ರಂದು ಆಸ್ಟ್ರೇಲಿಯಾ ತಂಡವನ್ನು ಬಹುವಾಗಿ ಕಾಡಿದ್ದರು. ಈ ಪಂದ್ಯದಲ್ಲಿ ಇವರು ಬಾರಿಸಿದ ದ್ವಿಶತಕದ ಆಟವನ್ನು ಕಂಡೇ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಈ ವೇಳೆ ಇವರು ತಮ್ಮ ವೃತ್ತಿ ಜೀವನದ ಮೊದಲ ದ್ವಿಶತಕ ಬಾರಿಸಿದ್ದರು. ಇವರು 158 ಎಸೆತಗಳಲ್ಲಿ 12 ಬೌಂಡರಿ, 16 ಸಿಕ್ಸರ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 383 ರನ್ ಸಿಡಿಸಿತ್ತು. ಈ ದಾಖಲೆಯ ಮೊತ್ತವನ್ನು ಆಸ್ಟ್ರೇಲಿಯಾ ಬೆನ್ನಟ್ಟುವಲ್ಲಿ ವಿಫಲವಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಆಡುವುದು ಎಂದರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗೆ ಅಚ್ಚು ಮೆಚ್ಚು. ಇವರು ಆಸೀಸ್ ವಿರುದ್ಧ ಆಡಿದ 45 ಪಂದ್ಯಗಳಲ್ಲಿ 2379 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 58 ಆಗಿದ್ದು, ಸ್ಟ್ರೈಕ್ ರೇಟ್ 96 ಆಗಿದೆ. ಇನ್ನು 8 ಶತಕ ಹಾಗೂ 9 ಅರ್ಧಶತಕಗಳು ಇವರ ಇನಿಂಗ್ಸ್‌ನಲ್ಲಿ ಒಳಗೊಂಡಿವೆ.
ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಆಡುವ ಪ್ಲೇಯರ್ ಹೀಗಾಗಿ ಇವರ ಮೇಲೆ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಇವರು ಒಬ್ಬ ಬಿಗ್ ಮ್ಯಾಚ್ ಪ್ಲೇಯರ್ ಸಹ ಹೌದು. ಕಳೆದ ಬಾರಿ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ ಗೆಲುವು ದಾಖಲಿಸಿರುವಲ್ಲಿ ಹಿಟ್ ಮ್ಯಾನ್ ನೀಡುತ್ತಿದ್ದ ಅಬ್ಬರದ ಆರಂಭ ಮುಖ್ಯವಾಗಿದೆ. ಹೀಗಾಗಿಯೇ ಇವರು ಮಂಗಳವಾ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಕಾಟ ನೀಡಬಲ್ಲರು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಅಲ್ಲದೆ ಈ ಬಾರಿ ಆಸ್ಟ್ರೇಲಿಯಾ ಬೌಲಿಂಗ್‌ನಲ್ಲಿ ಅನುಭವಿಗಳ ಕೊರತೆ ಇದ್ದು, ಇದನ್ನು ಎರಡೂ ಕೈಗಳಿಂದ ಬಳಸಿಕೊಳ್ಳಲು ರೋಹಿತ್ ಎದುರು ನೋಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications