ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್!

ಮ್ಯಾಂಚೆಸ್ಟರ್, ಜೂನ್ 16: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಪಾಕಿಸ್ತಾನ ಎದುರು ಕೇವಲ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ತಮ್ಮ ಮೊದಲ ಸಿಕ್ಸರ್ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಳಿಕ ನೋಡ ನೋಡುತ್ತಿದ್ದಂತೆಯೇ 85 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಅವರ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 24ನೇ ಶತಕವಾಗಿದೆ. ಹಾಗೂ ವಿಶ್ವಕಪ್‌ನಲ್ಲಿ ದಾಖಲಿಸಿದ ಮೂರನೇ ಶತಕ ಕೂಡ.
ಟೆಸ್ಟ್, ಒಡಿಐ ಮತ್ತು ಟಿ20-ಐ ಕ್ರಿಕೆಟ್‌ನಲ್ಲಿ ಧೋನಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮಮನ್ ಹಾಗೂ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಒಟ್ಟು 355 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೀಗ 32 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 357+ ಸಿಕ್ಸರ್‌ಗಳ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು.

ರೋಹಿತ್ ಶರ್ಮಾ
ಅವಧಿ: 2007-2019
ಪಂದ್ಯ: 329 (ಟೆಸ್ಟ್, ಒಡಿಐ, ಟಿ20-ಐ)
ಸಿಕ್ಸರ್: 357+

ಎಂ.ಎಸ್ ಧೋನಿ
ಅವಧಿ: 2004-2019
ಪಂದ್ಯ: 531 (ಭಾರತ/ಏಷ್ಯಾ)
ಸಿಕ್ಸರ್: 355+

ಸಚಿನ್ ತೆಂಡೂಲ್ಕರ್
ಅವಧಿ: 1989-2013
ಪಂದ್ಯ: 664
ಸಿಕ್ಸರ್: 264

ಯುವರಾಜ್ ಸಿಂಗ್
ಅವಧಿ: 2000-2017
ಪಂದ್ಯ: 402 (ಭಾರತ/ಏಷ್ಯಾ)
ಸಿಕ್ಸರ್: 251

ಸೌರವ್ ಗಂಗೂಲಿ
ಅವಧಿ: 1992-2008
ಪಂದ್ಯ: 424 (ಭಾರತ/ಏಷ್ಯಾ)
ಸಿಕ್ಸರ್: 247
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications