
ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧ ಟಿ-ಟ್ವೆಂಟಿ ಸರಣಿಯಲ್ಲಿ 100ನೇ ಅಂತರಾಷ್ಡ್ರೀಯ ಟಿ-ಟ್ವೆಂಟಿ ಪಂದ್ಯವನ್ನು ಆಡಿದ್ದರು. ನೂರನೇ ಟಿ-ಟ್ವೆಂಟಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಅನ್ನೋ ದಾಖಲೆಗೂ ರೋಹಿತ್ ಪಾತ್ರರಾದರು.
ಭಾರತ vs ಬಾಂಗ್ಲಾ, 1ನೇ ಟೆಸ್ಟ್, Live: ದಾಳಿಗಿಳಿದ ಟೀಮ್ ಇಂಡಿಯಾ ವೇಗಿಗಳು
ಇದೀಗ ಟೆಸ್ಟ್‌ನಲ್ಲೂ ಅಂತದ್ದೇ ಸಾಧನೆಯನ್ನು ಮಾಡಿದ್ದಾರೆ. ಇವತ್ತಿನ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೇ ರೋಹಿತ್ ಶರ್ಮಾ 350ನೇ ಅಂತರಾಷ್ಟ್ರೀಯ ಪಂದ್ಯವಾಡಿದ ಸಾಧನೆ ಮಾಡಿದ್ದಾರೆ. 218 ಏಕದಿನ, 101 ಟಿ-ಟ್ವೆಂಟಿ, 30 ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಭಾರತದ ತಂಡವನ್ನು ಪ್ರತಿನಿಧಿಸಿದ್ದಾರೆ.
ಅತಿ ಹೆಚ್ಚು ಅಂತರಾಷ್ಟ್ರೀಯ ಪಂದ್ಯವನ್ನಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಕ್ಕಿದೆ. 664 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಆಡಿರುವುದು ಈಗಿನ ದಾಖಲೆ. 652ಪಂದ್ಯಗಳನ್ನಾಡಿರುವ ಮಹೇಲ ಜಯವರ್ಧನೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೋರ್ವ ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್ ಈ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದಾರೆ.