ನ್ಯೂಜಿಲೆಂಡ್ ಪ್ರವಾಸಕ್ಕೆ ಬ್ರಾವೋ ಬದಲು ಶೆಫರ್ಡ್‌ಗೆ ಸ್ಥಾನ

ಪೋರ್ಟ್ ಆಫ್ ಸ್ಪೇನ್: ಮುಂಬರಲಿರುವ ನ್ಯೂಜಿಲೆಂಡ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಟಿ20ಐ ತಂಡದಲ್ಲಿ ಮಧ್ಯಮ ವೇಗಿ ರೊಮಾರಿಯೋ ಶೆಫರ್ಡ್ ಸ್ಥಾನ ಪಡೆದುಕೊಂಡಿದ್ದಾರೆ. ಗಾಯಕ್ಕೀಡಾಗಿರುವ ಆಲ್ ರೌಂಡರ್ ಡ್ವೇನ್ ಬ್ರಾವೋ ಬದಲಿಗೆ ಶೆಫರ್ಡ್‌ಗೆ ಅವಕಾಶ ನೀಡಲಾಗಿದೆ.
ತೊಡೆಯ ಗಾಯಕ್ಕೀಡಾಗಿರುವ ಡ್ವೇನ್ ಬ್ರಾವೋ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರ ಬಿದ್ದಿದ್ದರು. ಐಪಿಎಲ್‌ನಲ್ಲಿ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದರು. ಬ್ರಾವೋ ಗಾಯ ಶೀಘ್ರ ಗುಣಮುಖ ಆಗುವ ಸಾಧ್ಯತೆ ಇಲ್ಲದಿರುವುದರಿಂದ ನ್ಯೂಜಿಲೆಂಡ್ ಟಿ20 ಸರಣಿಯಿಂದ ಅವರನ್ನು ಹೊರಗಿಡಲಾಗಿದೆ.
'ನಾನು ನ್ಯೂಜಿಲೆಂಡ್ ಪ್ರವಾಸ ಸರಣಿಯ ಮುಂದಕ್ಕೆ ನೋಡುತ್ತಿದ್ದೆ. ಯಾಕೆಂದರೆ ನಾನು ಕಡೇಯ ಸಾರಿ ವೆಸ್ಟ್ ಇಂಡೀಸ್ ಜೆರ್ಸಿ ಧರಿಸಿದ್ದು ಕಳೆದ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ. ಹೀಗಾಗಿ ನಾನು ಪ್ರವಾಸ ಸರಣಿಯ ಬಗ್ಗೆ ಉತ್ಸುಕನಾಗಿದ್ದೆ. ಆದರೆ ಗಾಯದ ಸಮಸ್ಯೆಯಿಂದ ನಾನು ಐಪಿಎಲ್‌ನಿಂದ ಹೊರ ಬಿದ್ದಿದ್ದೇನೆ,' ಎಂದು ಬ್ರಾವೋ ಹೇಳಿದ್ದಾರೆ.
ಬ್ರಾವೋ ಬದಲು ವಿಂಡೀಸ್ ಟಿ20 ತಂಡ ಸೇರಿಕೊಂಡಿರುವ ಶೆಫರ್ಡ್ ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2 ಟಿ20ಐ ಇನ್ನಿಂಗ್ಸ್fಗಳನ್ನು ಆಡಿರುವ ಶೆಫರ್ಡ್ 2 ವಿಕೆಟ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications