RCB vs DC IPL 2024: ಜ್ಯಾಕ್ಸ್, ಪಾಟಿದಾರ್ ಬ್ಯಾಟಿಂಗ್ ಅಬ್ಬರ; ಡೆಲ್ಲಿಗೆ ಟಫ್ ಟಾರ್ಗೆಟ್ ನೀಡಿದ ಆರ್‌ಸಿಬಿ
ಮೇ 12 ಭಾನುವಾರ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೃಹತ್ ರನ್ ಕಲೆ ಹಾಕಿದೆ.
ಡೆಲ್ಲಿ ವಿರುದ್ಧ ವಿಲ್ ಜ್ಯಾಕ್ಸ್ ಮತ್ತು ರಜತ್ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಮಾಡಿದರು. ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದೆ. ಡೆಲ್ಲಿ ಗೆಲುವಿಗೆ 188 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ತವರಿನಲ್ಲಿ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲೇ ನಾಯಕ ಫಾಪ್ ಡು ಪ್ಲೆಸಿಸ್ (6) ವಿಕೆಟ್ ಪಡೆದು ಡೆಲ್ಲಿ ಬೌಲರ್ ಮುಖೇಶ್ ಕುಮಾರ್ ಶಾಕ್ ನೀಡಿದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ವಿಲ್ ಜ್ಯಾಕ್ಸ್ ಆರಂಭಿಕ ವಿರಾಟ್ ಕೊಹ್ಲಿ ಜೊತೆಗೂಡಿ ರನ್ ಹೆಚ್ಚಿಸಲು ನೆರವಾದರು.
ಆದರೆ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ ಕೊಹ್ಲಿ(27) ಅವರನ್ನು ಇಶಾಂತ್ ಶರ್ಮಾ ಔಟ್ ಮಾಡಿದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ರಜತ್ ಪಾಟಿದಾರ್ ಮತ್ತೊಮ್ಮೆ ಸಿಡಿದೆದ್ದರು. ಜೊತೆಗೆ ವಿಲ್ ಜ್ಯಾಕ್ಸ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಜ್ಯಾಕ್ಸ್ ಮತ್ತು ಪಾಟಿದಾರ್ ಜೋಡಿ 88 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ರಜತ್ ಪಾಟಿದಾರ್ (52) ಕೇವಲ 32 ಎಸೆತಗಳಲ್ಲಿ 3 ಸಿಕ್ಸರ್ ಹಾಗು 3 ಬೌಂಡರಿ ಮೂಲಕ ಅರ್ಧಶತಕ ಸಿಡಿಸಿ ರಾಸಿಖ್ ಸಲಾಂವ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ವಿಲ್ ಜ್ಯಾಕ್ಸ್ ಕೂಡ (41) ಕುಲದೀಪ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕ್ರೀಸ್‌ಗೆ ಬಂದ ಆರ್‌ಸಿಬಿ ಬ್ಯಾಟರ್ ರನ್ ಗಳಿಸುವಲ್ಲಿ ವಿಫಲವಾದರು. ಮಹಿಪಾಲ್ ಲೊಮ್ರೋರ್ (13) ಮತ್ತಿ ದಿನೇಶ್ ಕಾರ್ತಿಕ್ (0) ಇಬ್ಬರು ಒಂದೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಔಟ್ ಆದರು. ಬಳಿಕ ಬಂದ ಸ್ವಪ್ನಿಲ್ ಸಿಂಗ್ ಕೂಡ ರಸಿಖ್ ದಾರ್ ಸಲಾಂ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿ ಹೊರ ನಡೆದರು.
ಆದರೆ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ಕ್ಯಾಮೆರಾನ್ ಗ್ರೀನ್ ನಿಧಾನವಾಗಿ ರನ್ ಗಳಿಸಿದರು. 24 ಎಸೆತಗಳಲ್ಲಿ 32 ರನ್ ಹೊಡೆದು ಅಜೇಯರಾಗುಳಿದರು. ಕೊನೆಯಲ್ಲಿ ಕರಣ್ ಶರ್ಮಾ (6) ಹಾಗು ಮೊಹಮ್ಮದ್ ಸಿರಾಜ್ (೦) ರನ್ ಔಟ್‌ಗೆ ಬಲಿಯಾದರು.
ಡೆಲ್ಲಿ ಪರ ರಸಿಖ್ ದಾರ್ ಸಲಾಂ ಮತ್ತು ಖಲೀಲ್ ಅಹ್ಮದ್ 2 ವಿಕೆಟ್ ಕಬಳಿಸಿದರೆ, , ಮುಕೇಶ್ ಕುಮಾರ್, ಇಶಾಂತ್ ಶರ್ಮಾ ಹಾಗು ಕುಲದೀಪ್ ಯಾದವ್ ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications