Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಆರ್‌ಸಿಬಿ- ಗುಜರಾತ್‌ ನಡುವೆ ಹೈವೋಲ್ಟೇಜ್‌ ಪಂದ್ಯ; ಟಾಸ್‌ ವರದಿ, ಆಡುವ 11ರ ಬಳಗ

ಶನಿವಾರ ಮೇ 4, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 52ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗು ಗುಜರಾತ್‌ ಟೈಟನ್ಸ್‌ ತಂಡಗಳು ಸೆಣಸಾಡುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಜಿಟಿ ಹೈವೋಲ್ಟೇಜ್‌ ಪಂದ್ಯ ಆರಂಭವಾಗಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಶುಭ್ಮನ್‌ ಗಿಲ್‌ ಮುನ್ನಡೆಸುತ್ತಿರುವ ಗುಜರಾತ್‌ ಟೈಟನ್ಸ್‌ ತಂಡ ಬ್ಯಾಟಿಂಗ್‌ ಮಾಡಲಿದೆ.

Royal Challengers Bengaluru vs Gujarat Titans IPL 2024 Match Toss Report

ಗುಜರಾತ್‌ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇತ್ತ 10 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆಲುವು ಕಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆರ್‌ಸಿಬಿ vs ಜಿಟಿ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ :

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಟೈಟನ್ಸ್‌ ತಂಡಗಳ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಆರ್‌ಸಿಬಿ vs ಜಿಟಿ ಆಡುವ 11ರ ಬಳಗ :

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ), ಕರಣ್‌ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯಕುಮಾರ್ ವೈಶಾಕ್

ಗುಜರಾತ್‌ ಟೈಟನ್ಸ್‌ ತಂಡ: ವೃದ್ಧಿಮಾನ್ ಸಹಾ(ವಿ.ಕೀ), ಶುಬ್ಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮಾನವ್ ಸುತಾರ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶುವಾ ಲಿಟಲ್

Story first published: Saturday, May 4, 2024, 19:09 [IST]
Other articles published on May 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+