RCB vs GT IPL 2024: ಸಾಯಿ, ಶಾರುಖ್ ಅಬ್ಬರದ ಬ್ಯಾಟಿಂಗ್; ಮತ್ತೆ ದುಬಾರಿಯಾದ ಆರ್‌ಸಿಬಿ ಬೌಲಿಂಗ್
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಗುಜರಾತ್ ಟೈಟನ್ಸ್ ಬೃಹತ್ ಮೊತ್ತ ಕಲೆ ಹಾಕಿದೆ.
ಸಾಯಿ ಸುದರ್ಶನ್ ಮತ್ತು ಶಾರುಖ್ ಖಾನ್ ಅವರ ಅದ್ಭುತ ಪ್ರದರ್ಶನದಿಂದ ಗುಜರಾತ್ ತಂಡವು 201 ರನ್‌ಗಳ ಗುರಿಯನ್ನು ಆರ್‌ಸಿಬಿಗೆ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ ಗುಜರಾತ್ 3 ನಷ್ಟಕ್ಕೆ 200 ರನ್ ಗಳಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಪ್ ಡು ಪ್ಲೆಸಿಸ್ ಟಾಸ್ ಗೆಲ್ಲುವ ಮೂಲಕ ಬೌಲಿಂಗ್ ಆಯ್ಕೆ ಮಾಡಿ ಗುಜರಾತ್ ಟೈಟನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅದರಂತೆ ಗುಜರಾತ್ ಪರ ವೃದ್ದಿಮಾನ್ ಸಹಾ ಮತ್ತು ನಾಯಕ ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್ ಶುರು ಮಾಡಿದರು.
ಆದರೆ ಮೊದಲ ಓವರ್‌ನಲ್ಲೆ ವೃದ್ದಿಮಾನ್ ಸಹಾ (6) ಸ್ವಪ್ನಿಲ್ ಸಿಂಗ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಾತಿ ಸುದರ್ಶನ ಅವರು ಗಿಲ್ ಜೊತೆಗೂಡಿ ಉತ್ತಮವಾಗಿ ಆಡಿದರು. ಗಿಲ್ ಕೂಡ ತಾಳ್ಮೆ ಆಟದ ಮೂಲಕ ರನ್ ಗಳಿಸುತ್ತಿದ್ದರು. ಈ ವೇಳೆ ಏಳನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಶುಭ್ಮನ್ ಗಿಲ್ (16) ಕ್ಯಾಚ್ ನೀಡಿ ಹೊರ ನಡೆದರು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಾರುಖ್ ಖಾನ್ ಮತ್ತು ಸಾಯಿ ಸುದರ್ಶನ್ ಒಂದಾಗಿ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಪರಿಣಾಮವಾಗಿ ಈ ಇಬ್ಬರು ಸಿಡಿಲಬ್ಬರ ಬ್ಯಾಟಿಂಗ್ ಮಾಡಿದರು. ಆರಂಭದಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಗುಜರಾತ್ ರನ್ ವೇಗಕ್ಕೆ ಬ್ರೇಕ್ ಹಾಕಿದ ಆರ್‌ಸಿಬಿ ಬೌಲರ್ಸ್ ಪವರ್ ಪ್ಲೇ ನಂತರ ವಿಕೆಟ್ ಪಡೆಯುವಲ್ಲಿ ವಿಫಲರಾದರು.
ಹೀಗಾಗಿ ಶಾರುಖ್ ಖಾನ್ ಕೇವಲ 30 ಎಸೆತಗಳಲ್ಲಿ 5 ಸಿಕ್ಸರ್ ಹಾಗು 3 ಬೌಂಡರಿಗಳೊಂದಿಗೆ 58 ರನ್ ಗಳಿಸಿದರು. ಆರ್‌ಸಿಬಿಗೆ ಹೆಚ್ಚು ಕಂಟಕವಾಗಿ ಕಾಣುತ್ತಿದ್ದ ಶಾರುಖ್ ಖಾನ್ ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಪಡೆದುಕೊಂಡರು. ಹೀಗಾಗಿ ತಮ್ಮ ಆಟವನ್ನು ಶಾರುಖ್ ನಿಲ್ಲಿಸಿದರು.
ಇತ್ತ ಮೂರನೇ ಕ್ರಮಾಂಕದ ಬ್ಯಾಟರ್ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಶುರುವಿನಲ್ಲಿ ಆರ್‌ಸಿಬಿ ಬೌಲಿಂಗ್ ಅರಿತ ಸಾಯಿ 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ಅಜೇಯ 84 ರನ್ ಗಳಿಸಿದರು. ಮತ್ತೊಂದೆಡೆ ಡೇವಿಡ್ ಮಿಲ್ಲರ್ ಅಜೇಯ 26 ರನ್ ಬಾರಿಸುವ ಮೂಲಕ ಗುಜರಾತ್ ಬೃಹತ್ ರನ್ ಗಳಿಸಿಲು ನೆರವಾದರು.
ಆರ್‌ಸಿಬಿ ಪರ ಸ್ವಪ್ನಿಲ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications