IPL 2024: ಆರ್‌ಸಿಬಿ vs ಗುಜರಾತ್ ಟೈಟನ್ಸ್ ತಂಡಗಳ ಬಲಾಬಲ ವರದಿ: ಯಾರಿಗೆ ಒಲಿಯಲಿದೆ ಗೆಲುವು?
ಏಪ್ರಿಲ್ 28, ವಾರಾಂತ್ಯದ ಭಾನುವಾರ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡೆರಡು ಪಂದ್ಯಗಳು ನಡೆಯುತ್ತಿದ್ದು, ಮಧ್ಯಾಹ್ನದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆರ್‌ಸಿಬಿ ಮತ್ತು ಜಿಟಿ ಪಂದ್ಯಕ್ಕೆ ಆತಿಥ್ಯ ವಹಿಸಿದೆ.
ಆರ್‌ಸಿಬಿ ಐಪಿಎಲ್ ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ತಂಡದ ಎದುರು ಗೆಲ್ಲುವ ಒತ್ತಡದಲ್ಲಿದೆ. ಇದೇ ಮೊದಲ ಬಾರಿಗೆ ಐಪಿಎಲ್ 2024ರಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಜಯಗಳಿಸಿರುವ ಜಿಟಿ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇತ್ತ 9 ಪಂದ್ಯಗಳ ಪೈಕೆ ಕೇವಲ ಎರಡರಲ್ಲಿ ಮಾತ್ರ ಗೆಲುವು ಕಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಭದ್ರವಾಗಿ ಕೊನೆಯ ಸ್ಥಾನದಲ್ಲಿದೆ.

ಒಟ್ಟಾರೆ ಗುಜರಾತ್ ಮತ್ತು ಬೆಂಗಳೂರು ತಂಡಗಳು ಈವರೆಗೆ 3 ಬಾರಿ ಮಾತ್ರ ಐಪಿಎಲ್‌ನಲ್ಲಿ ಎದುರಾಗಿದ್ದು, ಇದರಲ್ಲಿ ಗುಜರಾತ್ 2 ಪಂದ್ಯಗಳಲ್ಲಿ ಗೆದ್ದರೆ, ಆರ್‌ಸಿಬಿ 1ರಲ್ಲಿ ಗೆದ್ದು ಬೀಗಿದೆ. ಹೀಗಾಗಿ ಆರ್‌ಸಿಬಿ ವಿರುದ್ಧ ಗುಜರಾತ್ ಮೈಲುಗೈ ಸಾಧಿಸಿದೆ. ಕೊನೆಯ ಬಾರಿಗೆ ಕಳೆದ ವರ್ಷ 2023ರ ಮೇ 23 ರಂದು ಆರ್‌ಸಿಬಿ ಮತ್ತು ಗುಜರಾತ್ ಪಂದ್ಯವಾಡಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. ಈ ಮೂಲಕ ಆರ್‌ಸಿಬಿ 197 ರನ್ ಗುರಿಯನ್ನು ಗುಜರಾತ್ ತಂಡಕ್ಕೆ ನೀಡಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ 5 ಎಸೆತಗಳು ಬಾಕಿ ಇರುವಂತೆ ಟಾರ್ಗೆಟ್ ಚೇಸ್ ಮಾಡಿತ್ತು. ಜಿಟಿ ಪರ ಶುಭ್ಮನ್ ಗಿಲ್ ಕೂಡ ಭರ್ಜರಿ ಶತಕ ಹೊಡೆದು ಸಂಭ್ರಮಿಸಿದರು. ಈ ಮೂಲಕ ಆರ್‌ಸಿಬಿಐ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.
ಆರ್‌ಸಿಬಿ vs ಜಿಟಿ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಆರ್‌ಸಿಬಿ vs ಜಿಟಿ ಸಂಭ್ಯಾವ ಆಡುವ 11ರ ಬಳಗ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ಯಾವ ತಂಡ : ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ. ಕೀ), ಮಹಿಪಾಲ್ ಲೊಮ್ರರ್, ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್
ಗುಜರಾತ್ ಟೈಟನ್ಸ್ ಸಂಭ್ಯಾವ ತಂಡ : ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿ.ಕೀ), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಸಾಯಿ ಕಿಶೋರ್, ರಶೀದ್ ಖಾನ್, ರಶೀದ್ ಖಾನ್, ನೂರ್ ಅಹ್ಮದ್, ಮೋಹಿತ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications