RCB vs GT IPL 2024: ಗುಜರಾತ್ ಬೌಲರ್ಸ್ ಬೆಂಡೆತ್ತಿದ್ದ ಜ್ಯಾಕ್ಸ್, ಕೊಹ್ಲಿ; ಆರ್‌ಸಿಬಿಗೆ ಭರ್ಜರಿ ಜಯ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದೆ.
ಗುಜರಾತ್ ನೀಡಿದ 201 ರನ್ ಮೊತ್ತವನ್ನು ಬೆನ್ನಟ್ಟಿದ್ದ ಆರ್‌ಸಿಬಿ ಕೇವಲ 16 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದಕೊಂಡು ಗುರಿ ತಲುಪಿದೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರೆ, ವಿಲ್ ಜ್ಯಾಕ್ಸ್ ಚೊಚ್ಚಲ ಶತಕ ಹೊಡೆದು ಮಿಂಚಿದರು. ಹೀಗಾಗಿ ಆರ್‌ಸಿಬಿ 9 ವಿಕೆಟ್‌ಗಳ ಅಮೋಘ ಜಯ ಕಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟಾರ್ಗೆಟ್ ಚೇಸಿಂಗ್ ಮಾಡಲು ಬಂದ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಉತ್ತಮವಾಗಿ ಕಾಣಿಸಿಕೊಂಡರು. ಈ ಜೋಡಿ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟವಾಡಿತು. ಮೂರು ಸಿಕ್ಸರ್ ಸಿಡಿಸಿ ಅಧಿಕ ರನ್ ಗಳಿಸುವ ಸಂದೇಶ ಕೊಟ್ಟ ಫಾಪ್ ಡು ಪ್ಲೆಸಿಸ್ (24) ರವಿಶ್ರೀನಿವಾಸನ್ ಸಾಯಿ ಕಿಶೋರ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವಿಲ್ ಜ್ಯಾಕ್, ವಿರಾಟ್ ಕೊಹ್ಲಿ ಅವರೊಂದಿಗೆ ಆಟ ಮುಂದುವರೆಸಿದರು. ಈ ವೇಳೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಬದಲಿಗೆ ನಿಧಾನ ಗತಿ ಆಟದ ಮೂಲಕ ವಿಲ್ ಜ್ಯಾಕ್ಸ್ ಅವರಿಗೆ ರನ್ ಹೊಡೆಯಲು ಸಾಥ್ ನೀಡಿದರು.
ಕೊಹ್ಲಿ ಆರಂಭದಲ್ಲಿ ಬಾಲ್ ಟು ಬಾಲ್ ರನ್ ಗಳಿಸುತ್ತ ಸಾಗಿದರು. ಇನ್ನೊಂದೆಡೆ ವಿಲ್ ಜ್ಯಾಕ್ಸ್ ಸಿಕ್ಕ ಅವಕಾಶ ಬಳಸಿಕೊಂಡು ಗುಜರಾತ್ ಬೌಲರ್ಸ್ ಅನ್ನು ಬೆಂಡೆತ್ತಿದರು. ಬಳಿಕ ಕೊಹ್ಲಿ ಕೂಡ ತನ್ನ ಆಟಕ್ಕೆ ಮರಳಿ ವೇಗವಾಗಿ ರನ್ ಗಳಿಸಲು ಮುಂದಾದರು.
ಸಿಡಿದೆದ್ದಿದ್ದ ವಿಲ್ ಜ್ಯಾಕ್ ಕೇವಲ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 5 ಬೌಂಡರಿಗಳ ಮೂಲಕ ತಮ್ಮ ಐಪಿಎಲ್ ಪ್ರಯಾಣದಲ್ಲಿ ಅಜೇಯ ಚೊಚ್ಚಲ 100 ಶತಕ ಸಿಡಿಸಿ ಸಂಭ್ರಮಿಸಿದರು. ಇತ್ತ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಗಳಿಸಿದರು. ವಿಲ್ ಜ್ಯಾಕ್ಸ್ ಮತ್ತು ವಿರಾಟ್ ಕೊಹ್ಲಿ ಜೋಡಿ 160 ರನ್‌ಗಳ ಜೊತೆಯಾಟವಾಡುವ ಮೂಲಕ ಆರ್‌ಸಿಬಿಗೆ ಗೆಲುವು ತಂದು ಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications