ಐಪಿಎಲ್ 2019: ರಾಜಸ್ಥಾನ್ ರಾಯಲ್ಸ್‌ಗೆ ಅಪಾಯಕಾರಿ ಸನ್‌ರೈಸರ್ಸ್ ಸವಾಲು

ಜೈಪುರ, ಏಪ್ರಿಲ್ 27: ಕೋಲ್ಕೊತಾ ನೈಟ್ ರೈಡರ್ಸ್ ತಂಡವನ್ನು ಅವರದ್ದೇ ಅಂಗಣದಲ್ಲಿ ಬಗ್ಗುಬಡಿದು ಆತ್ಮವಿಶ್ವಾಸದ ಅಲೆಯಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ ಇದೀಗ ಮನೆಯಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ದಕ್ಕಿಸಿಕೊಳ್ಳಲು ರಣತಂತ್ರ ರೂಪಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಆಡಿದ 11 ಪಂದ್ಯಗಳಿಂದ 4 ಜಯದೊಂದಿಗೆ ಒಟ್ಟು 8 ಅಂಕಗಳನ್ನು ಗಳಿಸಿ ಪ್ಲೇ ಆಫ್ಸ್ ತಲುಪುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಇನ್ನುಳಿದ ಮೂರು ಪಂದ್ಯದಲ್ಲಿ ಎಲ್ಲವನ್ನೂ ಗೆದ್ದು 6 ಅಂಕಗಳನ್ನು ಬಾಚಿಕೊಂಡರೆ ರಾಯಲ್ಸ್ ಪಡೆ ನಾಕ್‌ಔಟ್ ಹಂತಕ್ಕೆ ಕಾಲಿಡುವ ಉತ್ತಮ ಅವಕಾಶ ಹೊಂದಿದೆ.
ಆದರೆ, ತಂಡದ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ತಮ್ಮ ರಾಷ್ಟ್ರೀಯ ತಂಡದ ಸೇವೆ ಸಲುವಾಗಿ ಇಂಗ್ಲೆಂಡ್‌ಗೆ ಹಿಂದಿರುಗಿರುವುದು ರಾಯಲ್ಸ್ ಬಲವನ್ನು ಕುಗ್ಗಿಸಿದೆ. ಹೀಗಾಗಿ ಸ್ಟಾರ್‌ಗಳ ಬಲವಿಲ್ಲದೆ ರಾಯಲ್ಸ್ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ಹೈದರಾಬಾದ್ ಪಡೆಯನ್ನು ಕಟ್ಟಿಹಾಕಬಲ್ಲದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ ಹೈದರಾಬಾದ್ ತಂಡದ ಸ್ಥಿತಿಯೂ ಹಾಗೇ ಇದೆ. ಸ್ಟಾರ್ ಬ್ಯಾಟ್ಸ್‌ಮನ್ ಜಾನಿಬೈರ್‌ಸ್ಟೋವ್ ತಾಯ್ನಾಡಿಗೆ ಹಿಂದಿರುಗಿರುವ ಕಾರಣ ಹೊಸ ಸಂಯೋಜನೆಯೊಂದಿಗೆ ರೈಸರ್ಸ್ ಕಣಕ್ಕಿಳಿಯಲಿದೆ. ಇನ್ನು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ತನ್ನ ಪಾಲಿನ ಉಳಿದ ನಾಲ್ಕು ಪಂದ್ಯಗಳಲ್ಲಿ 3 ಗೆಲುವು ದಕ್ಕಿಸಿಕೊಂಡರೆ ಸುಲಭವಾಗಿ ಪ್ಲೇಆಫ್ಸ್‌ಗೆ ಪ್ರವೇಶ ಪಡೆಯಲಿದೆ.
ರಾಯಲ್ಸ್ ಸಂಭಾವ್ಯ 11
ಅಜಿಂಕ್ಯ ರಹಾನೆ, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್, ವರುಣ್ ಆರೊನ್, ಜಯದೇವ್ ಉನಾದ್ಕಟ್, ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್, ರಿಯಾನ್ ಪರಾಗ್, ರಾಹುಲ್ ತ್ರಿಪಾಠಿ.
ರೈಸರ್ಸ್ ಸಂಭಾವ್ಯ 11
ಶಾಕಿಬ್ ಅಲ್ ಹಸನ್, ಯೂಸುಫ್ ಪಠಾಣ್, ಭುವನೇಶ್ವರ್ ಕುಮಾರ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ವಿಜಯ್ ಶಂಕರ್, ಸಂದೀಪ್ ಶರ್ಮಾ, ದೀಪಕ್ ಹೂಡಾ, ರಶೀದ್ ಖಾನ್, ಖಲೀಲ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications