ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಜಸ್ತಾನ್ ರಾಯಲ್ಸ್ ಆಲ್‌ರೌಂಡರ್ ರಾಹುಲ್ ತೆವಾಟಿಯ

ಇಂದು ಟೀಂ ಇಂಡಿಯಾ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತನ್ನ ಬಹುಕಾಲದ ಗೆಳತಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಹೊರಬಂದ ಬೆನ್ನಲ್ಲೇ, ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್) ಮತ್ತೊಬ್ಬ ಕ್ರಿಕೆಟರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜಸ್ತಾನ್ ರಾಯಲ್ಸ್ ಆಲ್‌ರೌಂಡರ್ ರಾಹುಲ್ ತೆವಾಟಿಯ ಸೋಮವಾರ (ನ. 29) ರಿಧಿ ಪನ್ನುರನ್ನ ಮದುವೆಯಾಗುವ ಮೂಲಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ.
ರಾಹುಲ್ ತೆವಾಟಿಯ ಮದುವೆಯಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್, ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಮತ್ತು ಕೆಕೆಆರ್‌ನ ನಿತೀಶ್ ರಾಣಾ ಅವರಂತಹ ಅನೇಕ ಸಹ ಕ್ರಿಕೆಟಿಗರು ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ನವವಿವಾಹಿತ ಜೋಡಿಗೆ ಕ್ರಿಕೆಟ್ ತಾರೆಯರು ಶುಭ ಹಾರೈಸಿದ್ದಾರೆ.
ಇದೇ ವರ್ಷದ ಆರಂಭದಲ್ಲಿ ಫೆಬ್ರವರಿ 3ರಂದು ತೆವಾಟಿಯ ಮತ್ತು ರಿಧಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲೂ ಅನೇಕ ಕ್ರಿಕೆಟಿಗಳು ಸಹ ಭಾಗವಹಿಸಿದ್ದರು. ರಾಹುಲ್ ತೆವಾಟಿಯ ಮದುವೆ ಸಮಾರಂಭದ ಚಿತ್ರಗಳು ವೈರಲ್ ಆದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದುಬಂದಿವು.

ರಾಜಸ್ತಾನ್ ರಾಯಲ್ಸ್ ತಂಡದ ಪರ ಉತ್ತಮ ಪ್ರದರ್ಶನ
ರಾಜಸ್ತಾನ್ ಪರ ತೆವಾಟಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕಳೆದ ಸೀಸನ್‌ಗಳಲ್ಲಿ ಹಲವಾರು ಅದ್ಭುತ ಪ್ರದರ್ಶನಗಳನ್ನು ನೀಡಿದರೂ, ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಅರ್ಧಶತಕವು ಎಲ್ಲಕ್ಕಿಂತ ಹೆಚ್ಚಾಗಿ ಹೈಲೈಟ್ ಆಗಿದೆ. ಶೆಲ್ಡನ್ ಕಾಟ್ರೆಲ್ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡವನ್ನು ರೋಚಕ ಗೆಲುವಿನತ್ತ ತೆಗೆದುಕೊಂಡು ಹೋಗಿದ್ದನ್ನ ಯಾರೂ ಮರೆತಿಲ್ಲ. ಈ ಅದ್ಭುತ ಪ್ರದರ್ಶನವೇ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಪರ ಸ್ಥಾನಗಿಟ್ಟಿಸಿತು. ಆದ್ರೆ ಅವರು ಯಾವುದೇ ಪಂದ್ಯವನ್ನು ಆಡಲು ಆಗದಿದ್ದರೂ, ಭಾರತೀಯ ಡ್ರೆಸ್ಸಿಂಗ್‌ನಲ್ಲಿ ಸಮಯ ಕಳೆದಿರುವುದು ಖಂಡಿತವಾಗಿಯೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕೆ.ಎಲ್ ರಾಹುಲ್, ರಶೀದ್ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರು

ರಾಹುಲ್ ತೆವಾಟಿಯ ಐಪಿಎಲ್ ರೆಕಾರ್ಡ್ಸ್
ರಾಹುಲ್ ತೆವಾಟಿಯಾ 48 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಉರುಳಿಸಿದ್ದಾರೆ, ಇವರ ಬೌಲಿಂಗ್ ಎಕಾನಮಿ 7.71 ಆಗಿದೆ. ಅದೇ ಸಮಯದಲ್ಲಿ, ಅವರು 124.34 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು 521 ರನ್ ಹೊಡೆದರು. ಆದ್ರೆ ಐಪಿಎಲ್‌ನ 2021 ರ ಆವೃತ್ತಿಯಲ್ಲಿ ಈತ ಬ್ಯಾಟ್ ಅಥವಾ ಬಾಲ್‌ನಲ್ಲಿ ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ.

2022 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರಾ?
2022 ರ ಐಪಿಎಲ್ ಆವೃತ್ತಿಯಲ್ಲಿ ರಾಹುಲ್ ತೆವಾಟಿಯ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಐಪಿಎಲ್ 15ನೇ ಆವೃತ್ತಿ ನಡೆಯಲಿದೆ. ಮುಂದಿನ ಸೀಸನ್‌ಗೆ ಅವರು ಆರ್‌ಆರ್‌ನೊಂದಿಗೆ ಇರುತ್ತಾರೋ ಅಥವಾ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ ರಾಜಸ್ತಾನ್ ರಾಯಲ್ಸ್ ತೆವಾಟಿಯ ಅವರನ್ನ ರೀಟೇನ್ ಮಾಡಿಕೊಳ್ಳುವುದೋ ಅಥವಾ ಹರಾಜಿಗೆ ಬಿಡುವುದೋ ಕಾದು ನೋಡಬೇಕು

ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ
ತೆವಾಟಿಯ ಮದುವೆಯ ಸುದ್ದಿ ಒಂದೆಡೆಯಾದ್ರೆ, ಇದಕ್ಕೂ ಮೊದಲು ಮುಂಬೈನ ಪಾಲ್ಘರ್‌ನ ನಿವಾಸಿ , ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಸೋಮವಾರ ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್ ಅವರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
"ಸೋಮವಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಸೌಲಭ್ಯದಲ್ಲಿ ಒಂದು ಸಣ್ಣ ನಿಶ್ಚಿತಾರ್ಥದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಅವರು 75 ಅತಿಥಿಗಳನ್ನು, ಅದ್ರಲ್ಲೂ ಹೆಚ್ಚಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಂತರ ಮದುವೆ ನಡೆಯುವ ಸಾಧ್ಯತೆಯಿದೆ'' ಎಂದು ಶಾರ್ದೂ್ಲ್‌ಗೆ ಹತ್ತಿರವಿರುವ ಮೂಲವೊಂದು ತಿಳಿಸಿದೆ.
ಈ ಮೂಲಕ ಶಾರ್ದೂಲ್ ಕಾಂಗರೂ ನಾಡಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications