Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs GT: ರಶೀದ್ ಖಾನ್‌ ಸ್ಪಿನ್ ಮ್ಯಾಜಿಕ್; ತವರಿನಲ್ಲಿ ಮುಗ್ಗರಿಸಿದ ರಾಯಲ್ಸ್‌

ಜೈಪುರ: ನಾಯಕ ಶುಭಮನ್‌ ಗಿಲ್‌ ಹಾಗೂ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಭರ್ಜರಿ ಆಟದ ನೆರವಿನಿಂದ ಗುಜರಾಟ್‌ ಟೈಟಾನ್ಸ್‌ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ( ಐಪಿಎಲ್)ನ 52ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ತಂಡವನ್ನು 77 ರನ್‌ಗಳಿಂದ ಮಣಿಸಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್‌ ಸೋತರೂ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 10.5 ಓವರ್‌ಗಳಲ್ಲಿ 118 ರನ್ ಸೇರಿಸಿತು. ಪವರ್‌ಪ್ಲೇ ನಲ್ಲಿ ಅಬ್ಬರಿಸಿದ ಈ ಜೋಡಿ ಜೋಫ್ರಾ ಆರ್ಚರ್ ಅವರಂತಹ ಅನುಭವಿ ಬೌಲರ್‌ಗಳನ್ನೇ ದಂಡಿಸಿ 6 ಓವರ್‌ಗಳಲ್ಲಿ 82 ರನ್ ಗಳಿಸಿತು. ಸಾಯಿ ಸುದರ್ಶನ್ 36 ಎಸೆತಗಳಲ್ಲಿ 55 ರನ್ (6 ಬೌಂಡರಿ, 2 ಸಿಕ್ಸರ್) ಬಾರಿಸಿ ಯಶ್ ರಾಜ್ ಪುಂಜಾ ಅವರಿಗೆ ವಿಕೆಟ್ ಒಪ್ಪಿಸಿದರು. ಅಬ್ಬರದ ಆಟ ಮುಂದುವರಿಸಿದ ನಾಯಕ ಶುಭಮನ್ ಗಿಲ್ 44 ಎಸೆತಗಳಲ್ಲಿ 84 ರನ್ (9 ಬೌಂಡರಿ, 3 ಸಿಕ್ಸರ್) ಚಚ್ಚಿದರು.

RR vs GT

ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ (12) ಹಾಗೂ ಜೇಸನ್ ಹೋಲ್ಡರ್ (7) ವೈಫಲ್ಯ ಅನುಭವಿಸಿದರೂ, ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಮಿಂಚಿದರು. ಸುಂದರ್ ಕೇವಲ 20 ಎಸೆತಗಳಲ್ಲಿ 37 ರನ್ ಸಿಡಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ್ ಪರ ಬ್ರಿಜೇಶ್ ಶರ್ಮಾ 2 ವಿಕೆಟ್ ಪಡೆದರು. ಟೈಟಾನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಜವಾಬ್ದಾರಿ ಮರೆತ ಆರ್‌ಆರ್ ಬ್ಯಾಟರ್ಸ್‌

ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. 15 ವರ್ಷದ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಇವರು 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 36 ರನ್‌ ಸಿಡಿಸಿ ಮೊಹಮ್ಮದ್‌ ಸಿರಾಜ್‌ ತೋಡಿದ ಖೆಡ್ಡಾಗೆ ಬಲಿಯಾದರು. ಇವರು ಔಟ್ ಆದಾಗ ಆರ್‌ಆರ್‌ ತಂಡದ ಮೊತ್ತ 2.5 ಓವರ್‌ಗಳಲ್ಲಿ 38 ರನ್‌ ಸೇರಿಸಿತು.

RR vs GT

ರಶೀದ್ ಮ್ಯಾಜಿಕ್

ರಿಯಾನ್‌ ಪರಾಗ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಯಶಸ್ವಿ ಜೈಸ್ವಾಲ್‌ (3) ಜವಾಬ್ದಾರಿಯನ್ನು ಮರೆತರು. ಧ್ರುವ್ ಜುರೇಲ್‌ 10 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 24 ರನ್‌ ಬಾರಿಸಿ ಔಟ್ ಆದರು. ಆಲ್‌ರೌಂಡರ್‌ ರವೀಂದ್ರ ಜಡೇಜಾ (3 ಬೌಂಡರಿ, 2 ಸಿಕ್ಸರ್, 38 ರನ್‌) ಸಿಡಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಶುಭಂ ದುಬೆ (15), ದಸುನ್ ಶನಕ (16) ಸಹ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಅಂತಿಮವಾಗಿ ಆರ್‌ಆರ್‌ 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ಮೂಲಕ ಆರ್‌ಆರ್‌ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ಗುಜರಾತ್ ತಂಡದ ಸ್ಟಾರ್ ಸ್ಪಿನ್ ಬೌಲರ್ ರಶೀದ್ ಖಾನ್ 4 ಓವರ್‌ಗಳಲ್ಲಿ 23 ರನ್‌ಗೆ 4 ವಿಕೆಟ್‌ ಕಬಳಿಸಿದರು. ಈ ಮೂಲಕ ಆರ್‌ಆರ್‌ ತಂಡದ ಬ್ಯಾಟಿಂಗ್‌ಗೆ ಪೆಟ್ಟು ನೀಡಿದರು.

Story first published: Saturday, May 9, 2026, 23:51 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+