Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs GT: ಗುಜರಾತ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲು ರಶೀದ್ ಖಾನ್‌ ಕಾರಣ

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 19ನೇ ಆವೃತ್ತಿ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ಹಾಗೂ ರಾಜಸ್ಥಾನ್ ರಾಯಲ್ಸ್‌ (ಆರ್‌ಆರ್‌) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಆತಿಥೇಯ ರಾಜಸ್ಥಾನ ಪಾಲಾಯಿತು. ರಿಯಾನ್‌ ಪರಾಗ್‌ ಅನುಪಸ್ಥಿತಿಯಲ್ಲಿ, ಆರ್‌ಆರ್‌ ತಂಡವನ್ನು ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮುನ್ನಡೆಸಿದ್ದರು. ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ನಾಯಕ ಶುಭಮನ್‌ ಗಿಲ್ (9 ಬೌಂಡರಿ, 3 ಸಿಕ್ಸರ್‌, 84 ರನ್) ಹಾಗೂ ಸಾಯಿ ಸುದರ್ಶನ್ (6 ಬೌಂಡರಿ, 2 ಸಿಕ್ಸರ್, 55 ರನ್‌) ಜೋಡಿ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 118 ರನ್‌ ಸೇರಿಸಿತು. ಉಳಿದಂತೆ ವಾಷಿಂಗ್ಟನ್‌ ಸುಂದರ್‌ 3 ಸಿಕ್ಸರ್, 2 ಬೌಂಡರಿ ನೆರವಿನಿಂದ ಅಜೇಯ 37 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಟೈಟಾನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಸೇರಿಸಿತು.

RR vs GT

ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ನೈಜ ಆಟವನ್ನು ಆಡಿದರು. ಇವರು 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 36 ರನ್‌ ಬಾರಿಸಿ ಔಟ್ ಆದರು. ನಾಯಕ ಯಶಸ್ವಿ ಜೈಸ್ವಾಲ್‌ 3 ರನ್‌ ಬಾರಿಸಿ ಪೆವಿಲಿಯನ್‌ ಸೇರಿದರು. ಧ್ರುವ್ ಜುರೇಲ್‌ 24, ರವೀಂದ್ರ ಜಡೇಜಾ 38 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದ ಯಾವ ಬ್ಯಾಟರ್‌ ಜವಾಬ್ದಾರಿಯುತ ಆಟವಾಡಲಿಲ್ಲ. ಆರ್‌ಆರ್‌ 16.3 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್ ಆಯಿತು.

ರಶೀದ್ ಕಮಾಲ್‌ ಗೆಲುವಿನ ಹೈಲೈಟ್ಸ್

ಈ ಲೀಗ್‌ನಲ್ಲಿ ವಿಕೆಟ್ ಪಡೆಯುವಲ್ಲಿ ಕೊಂಚ ಹಿಂದೆ ಬಿದ್ದಿದ್ದ ಖ್ಯಾತ ಸ್ಪಿನ್ ಬೌಲರ್ ರಶೀದ್ ಖಾನ್, ರಾಜಸ್ಥಾನ್ ವಿರುದ್ಧ ಅಬ್ಬರಿಸಿದರು. ಫ್ಲೈಟೆಡ್ ಡೆಲಿವರಿ, ಲೆಗ್ ಬ್ರೇಕ್, ಗೂಗ್ಲಿ ಎಸೆತಗಳನ್ನು ಎದುರಿಸುವಲ್ಲಿ ಆರ್‌ಆರ್‌ ಬ್ಯಾಟರ್‌ಗಳು ಕಂಗಾಲಾದರು. ಇವರು ಧ್ರುವ್ ಜುರೇಲ್‌, ಡೊನೊವನ್ ಫೆರೇರಾ, ಶುಭಂ ದುಬೆ, ರವೀಂದ್ರ ಜಡೇಜಾ ಅವರ ವಿಕೆಟ್‌ ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229; ಶುಭಮನ್‌ ಗಿಲ್ 84, ಸಾಯಿ ಸುದರ್ಶನ್‌ 55, ವಾಷಿಂಗ್ಟನ್‌ ಸುಂದರ್‌ ಅಜೇಯ 37, ಬ್ರಿಜೇಷ್ ಶರ್ಮಾ (ಆರ್‌ಆರ್‌) 47ಕ್ಕೆ 2.

ರಾಜಸ್ಥಾನ್ ರಾಯಲ್ಸ್‌ 16.3 ಓವರ್‌ಗೆ 152; ವೈಭವ್ ಸೂರ್ಯವಂಶಿ 36, ರವೀಂದ್ರ ಜಡೇಜಾ 38, ಧ್ರುವ್ ಜುರೇಲ್‌ 24, ರಶೀದ್ ಖಾನ್‌ (ಜಿಟಿ) 33ಕ್ಕೆ 4.

ಪಂದ್ಯದ ಫಲಿತಾಂಶ: 77 ರನ್‌ಗಳಿಂದ ಗೆದ್ದ ಗುಜರಾತ್‌

Story first published: Sunday, May 10, 2026, 7:00 [IST]
Other articles published on May 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+