Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR VS PBKS: ರಾಜಸ್ತಾನ್ ಪರ ಈ ಹಿಂದೆ ಯಾರೂ ಮಾಡದ ದಾಖಲೆ ಮಾಡಿದ ಚಹಾಲ್

Chahal

ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್ 2022 ರ ಸೀಸನ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಜೊತೆಗೆ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಚಹಾಲ್, ರಾಜಸ್ತಾನ್ ಪರ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ದಾಖಲೆ ಮಾಡಿದ್ದಾರೆ.

ಚಹಾಲ್ ಈ ಅಪರೂಪದ ದಾಖಲೆ ಮಾಡುವ ಮೂಲಕ ಈ ಹಿಂದೆ ಶ್ರೇಯಸ್ ಗೋಪಾಲ್ ಹೆಸರಲ್ಲಿದ್ದ ದಾಖಲೆಯನ್ನ ಮುರಿದಿದ್ದಾರೆ. 2019ರ ಋತುವಿನಲ್ಲಿ ಶ್ರೇಯಸ್ ಗೋಪಾಲ್ 20 ವಿಕೆಟ್ ಕಬಳಿಸಿದ್ದರು. ಪ್ರಸಕ್ತ ಸೀಸನ್‌ನಲ್ಲಿ 11 ಪಂದ್ಯಗಳಲ್ಲಿ 22 ವಿಕೆಟ್ ಪಡೆಯುವ ಮೂಲಕ ಅವರನ್ನು ಹಿಂದಿಕ್ಕಿದ್ದರು. ಇದರೊಂದಿಗೆ ಚಹಲ್ 13 ವರ್ಷಗಳ ಐಪಿಎಲ್ ಇತಿಹಾಸ ಹೊಂದಿರುವ ರಾಜಸ್ಥಾನ ತಂಡದ ಪರವಾಗಿ ಈ ಹೊಸ ದಾಖಲೆ ಬರೆದಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜಾನಿ ಬೈರ್ ಸ್ಟೋ ವಿಕೆಟ್ ಪಡೆದು ಚಹಾಲ್ ಈ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ಮತ್ತು ಭಾನುಕಾ ರಾಜಪಕ್ಸೆ ಅವರನ್ನು ಔಟ್ ಮಾಡಿದರು. 4 ಓವರ್ ಗಳಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಪಡೆದರು. ಇದು 10 ಡಾಟ್ ಬಾಲ್‌ಗಳನ್ನು ಹೊಂದಿದೆ. ಈ ಪಂದ್ಯದಲ್ಲಿ 20 ವಿಕೆಟ್ ಕಬಳಿಸಿದ ಚಾಹಲ್, ದಿಗ್ಗಜ ವೇಗಿ ಲಸಿತ್ ಮಾಲಿಂಗ ಅವರ ದಾಖಲೆಯನ್ನೂ ಸರಿಗಟ್ಟಿದರು.

ಚಹಾಲ್ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ 20 ಕ್ಕೂ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡಿದ ಮಾಲಿಂಗ 15 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ 20ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. 2011, 2012, 2013, 2015ರಲ್ಲಿ 20ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು.

ಆದ್ರೆ ಈ ಸೀಸನ್‌ನಲ್ಲಿ ಚಹಾಲ್ ಈ ಸಾಧನೆಯನ್ನು ಸರಿಗಟ್ಟಿದ್ದಾರೆ. ಚಾಹಲ್ ಅವರು ಆಡಿದ 9 ಸೀಸನ್‌ಗಳಲ್ಲಿ ಈ ಗೌರವವನ್ನು ಪಡೆದಿದ್ದಾರೆ. ಬಹುತೇಕ ಆರ್‌ಸಿಬಿ ಪರ ಪಂದ್ಯಗಳನ್ನ ಆಡಿರುವ ಈ ಸ್ಪಿನ್ನರ್ 2015, 2016, 2020, 2022ರಲ್ಲಿ 20ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಐಪಿಎಲ್ 2022 ಸೀಸನ್‌ಗೂ ಮುನ್ನ ಕಳಪೆ ಫಾರ್ಮ್‌ನಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ಚಹಾಲ್, 8 ವರ್ಷಗಳ ಕಾಲ ತಾವು ಪ್ರತಿನಿಧಿಸಿದ್ದ ಆರ್‌ಸಿಬಿಯಿಂದಲೂ ಹೊರಬಿದ್ದರು. ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತು ಮತ್ತು ರಾಜಸ್ಥಾನ್ ರಾಯಲ್ಸ್ 6.50 ಕೋಟಿ ರೂ.ಗೆ ಖರೀದಿಸಿತ್ತು. ಚಹಾಲ್ ರಾಜಸ್ಥಾನಕ್ಕೆ ದುಪ್ಪಟ್ಟು ಕೊಡುಗೆ ನೀಡಿದ್ದು, ಇದು ಅವನ ಮೇಲೆ ನಂಬಿಕೆ ಇಡಲು ಅವಕಾಶವನ್ನು ನೀಡಿತು. ಅತಿ ಹೆಚ್ಚು ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿ ಚಹಾಲ್ ಮುಂದುವರಿದಿದ್ದಾರೆ.

Story first published: Sunday, May 8, 2022, 0:03 [IST]
Other articles published on May 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+