For Quick Alerts
ALLOW NOTIFICATIONS  
For Daily Alerts
 

RSWS-2: ದಕ್ಷಿಣ ಆಫ್ರಿಕಾ ದಿಗ್ಗಜರಿಗೆ ಸುಲಭ ಸವಾಲಾದ ನ್ಯೂಜಿಲೆಂಡ್ ಲೆಜೆಂಡ್ಸ್

RSWS-2, match 4: South Africa Legends won the match by 9 wickets against New Zealand Legends

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಲೆಜೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ ಕಿವೀಡ್ ಪಡೆಯನ್ನು ಭರ್ಜರಿಯಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ತಂಡದ ಪರವಾಗಿ ಬ್ರಾವ್ನೈಲ್ ಮಾತ್ರವೇ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ನ್ಯೂಜಿಲೆಂಡ್ ಲೆಜೆಂಡ್ಸ್ ತಂಡ 99 ರನ್‌ಗಳನ್ನು ಮಾತ್ರವೇ ಗಳಿಸಿತು. ಬ್ರಾವ್ನೈಲ್ 48 ರನ್‌ಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು.

ಇನ್ನು ನ್ಯೂಜಿಲೆಂಡ್ ಲೆಜೆಂಡ್ಸ್ ನೀಡಿದ ಈ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ದಿಗ್ಗಜರು ಕೇವಲ 13.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆಂಡ್ರೋ ಪುಟಿಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು 36 ಎಸೆತಗಳಲ್ಲಿ 51 ರನ್ ಸಿಡಿಸಿ ಅಜೇಯವಾಗುಳಿದರು. ಅಲ್ವಿರೋ ಪೀಟರ್ಸನ್ 29 ರನ್‌ಗಳಿಸಿದರು.

ಇನ್ನು ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ ಒಂದು ಸೋಲು ಹಾಗೂ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನ್ಯೂಜಿಲೆಂಡ್ ಕೊನೆಯ ಸ್ಥಾನದಲ್ಲಿದೆ. ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್‌ನಲ್ಲಿ ಲಂಕಾ ಕ್ರಿಕೆಟ್‌ಗೆ ಹೊಸ ರಂಗು ತುಂಬಿದ ಹಸರಂಗ!
ಆಡುವ ಬಳಗ
ನ್ಯೂಜಿಲೆಂಡ್ ಲೆಜೆಂಡ್ಸ್: ಆಂಟನ್ ಡೆವ್‌ಸಿಚ್, ರಾಸ್ ಟೇಲರ್ (ನಾಯಕ), ನೀಲ್ ಬ್ರೂಮ್, ಡೀನ್ ಬ್ರೌನ್ಲೀ, ಕ್ರೇಗ್ ಮೆಕ್‌ಮಿಲನ್, ಆರನ್ ರೆಡ್‌ಮಂಡ್, ಗರೆಥ್ ಹಾಪ್‌ಕಿನ್ಸ್ (ವಿಕೆಟ್ ಕೀಪರ್), ಜಾಕೋಬ್ ಓರಮ್, ಶೇನ್ ಬಾಂಡ್, ಬ್ರೂಸ್ ಮಾರ್ಟಿನ್, ಹ್ಯಾಮಿಶ್ ಬೆನೆಟ್
ಬೆಂಚ್: ಸ್ಕಾಟ್ ಸ್ಟೈರಿಸ್, ಕೈಲ್ ಮಿಲ್ಸ್, ಜೇಮೀ ಹೌ

ದಕ್ಷಿಣ ಆಫ್ರಿಕಾ ಲೆಜೆಂಡ್ಸ್: ಆಂಡ್ರ್ಯೂ ಪುಟ್ಟಿಕ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಅಲ್ವಿರೊ ಪೀಟರ್ಸನ್, ಜಾಕ್ವೆಸ್ ರುಡಾಲ್ಫ್, ಹೆನ್ರಿ ಡೇವಿಡ್ಸ್, ಜಾಂಟಿ ರೋಡ್ಸ್ (ಸಿ), ಜೋಹಾನ್ ಬೋಥಾ, ಜೋಹಾನ್ ವಾನ್ ಡೆರ್ ವಾತ್, ಎಡ್ಡಿ ಲೀ, ಥಂಡಿ ತ್ಶಬಲಾಲಾ, ಗಾರ್ನೆಟ್ ಕ್ರುಗರ್
ಬೆಂಚ್: ವೆರ್ನಾನ್ ಫಿಲಾಂಡರ್, ಝಾಂಡರ್ ಡಿ ಬ್ರೂಯ್ನ್, ಲ್ಯಾನ್ಸ್ ಕ್ಲೂಸೆನರ್, ಲಾಯ್ಡ್ ನಾರ್ರಿಸ್ ಜೋನ್ಸ್, ಮಖಯಾ ಎನ್ಟಿನಿ

Story first published: Monday, September 12, 2022, 23:35 [IST]
Other articles published on Sep 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+