ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್‌ನಲ್ಲಿ ಲಂಕಾ ಕ್ರಿಕೆಟ್‌ಗೆ ಹೊಸ ರಂಗು ತುಂಬಿದ ಹಸರಂಗ!

Asia Cup Sri Lanka Champions: Wanindu Hasaranga all-rounder performance helps Sri Lanka to lift trophy

ಏಷ್ಯಾ ಕಪ್‌ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದು 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದತಾದರೂ ಬಳಿಕ ಪಂದ್ಯವನ್ನು ಹತೋಟಿಗೆ ಪಡೆದುಕೊಂಡ ಶ್ರೀಲಂಕಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಶ್ರೀಲಂಕಾ ಗೆದ್ದು ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.

ಈ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು ಸ್ಪಿನ್ ಮಾಂತ್ರಿಕ ವನಿಂದು ಹಸರಂಗಾ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ನೀಡಿದ ವನಿಂದು ಹಸರಂಗಾ ನಂತರ ಬೌಲಿಂಗ್‌ನಲ್ಲಿಯೂ ಮ್ಯಾಜಿಕ್ ಮಾಡಿದರು. ಈ ಮೂಲಕ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪರವಾಗಿ ಹೀರೋ ಆಗಿ ಮಿಂಚಿದ್ದಾರೆ.

ನನಗಿಂತಲೂ ಕೊಹ್ಲಿಯ ಕೌಶಲ್ಯ ಅದ್ಭುತ: ವಿರಾಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರಶಂಸೆಯ ಮಾತುನನಗಿಂತಲೂ ಕೊಹ್ಲಿಯ ಕೌಶಲ್ಯ ಅದ್ಭುತ: ವಿರಾಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರಶಂಸೆಯ ಮಾತು

ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ

ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಶ್ರೀಲಂಕಾ ತಂಡ ಅಗ್ರ ಕ್ರಮಾಂಕದ ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಳ್ಳುತ್ತಾ ಸಾಗುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಭಾನುಕಾ ರಾಜಪಕ್ಷ ಅವರೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಸರಂಗ ತಂಡಕ್ಕೆ ಮೊದಲ ಚೈತನ್ಯ ನೀಡಿದರು. 21 ಎಸೆತಗಳನ್ನು ಎದುರಿಸಿದ ಹಸರಂಗಾ 36 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ನೆರವಾದರು. ಇದರ ಜೊತೆಗೆ ರಾಜಪಕ್ಷ ಜೊತೆ ಸೇರಿ ಶ್ರೀಲಂಕಾಗೆ ನಿರ್ಣಾಯಕವ ಜೊತೆಯಾಟದಲ್ಲಿ ಭಾಗಿಯಾದರು. ಈ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ತಂಡ ಭರ್ಜರಿ 170 ರನ್‌ಗಳನ್ನು ಗಳಿಸಲು ಶಕ್ತವಾಗಿತ್ತು.

ಒಂದೇ ಓವರ್‌ನಲ್ಲಿ ಚಿತ್ರಣ ಬದಲಿಸಿದ ವನಿಂದು

ಒಂದೇ ಓವರ್‌ನಲ್ಲಿ ಚಿತ್ರಣ ಬದಲಿಸಿದ ವನಿಂದು

ಇನ್ನು ಬೌಲಿಂಗ್‌ನಲ್ಲಿಯೂ ವನಿಂದು ಹಸರಂಗಾ ಪ್ರದರ್ಶನ ಶ್ರೀಲಂಕಾ ಪಾಲಿಗೆ ನಿರ್ಣಾಯಕವಾಗಿತ್ತು. ತನ್ನ ಮೇಲಿದ್ದ ಜವಾಬ್ಧಾರಿಯನ್ನು ಅದ್ಭುತವಾಗಿ ನಿಭಾಯಿಸಿದ ಹಸರಂಗಾ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಕೇವಲ ಒಂದೇ ಓವರ್‌ನಲ್ಲಿ ಈ ಮೂರು ವಿಕೆಟ್ ಪಡೆಯುವ ಮೂಲಕ ಪಾಕ್‌ಗೆ ಚೇತರಿಸಿಕೊಳ್ಳಲು ಸಾಧ್ಯವಾಗದ ಆಘಾತ ನೀಡಿದರು ವನಿಂದು ಹಸರಂಗಾ. 16ನೇ ಓವರ್‌ನ ಅಂತ್ಯದಲ್ಲಿ 119 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ಲಂಕಾ ಗುರಿ ಬೆನ್ನಟ್ಟುವ ಪ್ರಯತ್ನದಲ್ಲಿತ್ತು. ಆದರೆ 17ನೇ ಓವರ್‌ನಲ್ಲಿ ಪಾಕಿಸ್ತಾನದ ಅಪಾಯಕಾರಿ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಆಸಿಫ್ ಅಲಿ ಹಾಗೂ ಕುಶ್ದಿಲ್ ಶಾ ವಿಕೆಟ್ ಪಡೆಯುವ ಮೂಲಕ ದೊಡ್ಡ ಆಘಾತ ನೀಡಿದರು. ಹಸರಂಹ ಅವರ ಈ 17ನೇ ಓವರ್ ಮುಕ್ತಾಯವಾಗುವ ವೇಳೆಗೆ ಪಾಕಿಸ್ತಾನದ ಸ್ಥಿತಿ 112-7 ಆಗಿತ್ತು. ಈ ಓವರ್‌ನಲ್ಲಿಯೇ ಶ್ರೀಲಂಕಾ ಪಂದ್ಯವನ್ನು ಬಹುತೇಕ ಗೆದ್ದುಕೊಂಡಾಗಿತ್ತು.

RSWS-2: ಸ್ಟುವರ್ಟ್ ಬಿನ್ನಿ ಅಬ್ಬರಕ್ಕೆ ಒಲಿದ ಜಯ: ಇಂಡಿಯಾ ಲೆಜೆಂಡ್ಸ್‌ಗೆ ಸಾಟಿಯಾಗದ ದ. ಆಫ್ರಿಕಾ ದಿಗ್ಗಜರು!

ಲಂಕಾ ಗೆಲುವಿನ ಮತ್ತಿಬ್ಬರು ಹೀರೋಗಳು

ಲಂಕಾ ಗೆಲುವಿನ ಮತ್ತಿಬ್ಬರು ಹೀರೋಗಳು

ಶ್ರೀಲಂಕಾ ಪಾಕಿಸ್ತಾನದ ವಿರುದ್ಧ ನಡೆದ ಈ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲು ಕಾರಣವಾದ ಮತ್ತಿಬ್ಬರು ಆಟಗಾರರೆಂದರೆ ಅದು ಭಾನುಕಾ ರಾಜಪಕ್ಷ ಹಾಗೂ ಪ್ರಮೋದ್ ಮದುಶನ್. ಬ್ಯಾಟಿಂಗ್‌ನಲ್ಲಿ ಭಾನುಕಾ ರಾಜಪಕ್ಷ ಶ್ರೀಲಂಕಾ ಪಾಲಿಗೆ ಅಕ್ಷರಶಃ ಹೀರೋ ಆಗಿ ಮೆರೆದಿದ್ದಾರೆ. ಕೇವಲ 45 ಎಸೆತಗಳಲ್ಲಿ 71 ರನ್ ಸಿಡಿಸಿದ ರಾಜಪಕ್ಷ ತಂಡ ಸವಾಲಿನ ಗುರಿ ನೀಡಲು ಕಾರಣವಾದರು. ಇನ್ನು ಈ ಪಂದ್ಯದ ಮೂಲಕ ಕೇವಲ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿರುವ ಪ್ರಮೋದ್ ಮದಿಶನ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡಕ್ಕೆ ಬಹಳ ಅನಿವಾರ್ಯವಾಗಿದ್ದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

Story first published: Sunday, September 11, 2022, 23:58 [IST]
Other articles published on Sep 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X