Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಾಯದ ನೋವಲ್ಲೂ ಮಿಂಚಿದ ಕೃನಾಲ್‌ಗೆ 'ಸಾಯಲಿ ಬಿಡಿ' ಎಂದ ಸಿಎಸ್‌ಕೆ ಮಾಜಿ ಪ್ಲೇಯರ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಲೀಗ್‌ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸುವಲ್ಲಿ ಸ್ಟಾರ್ ಆಲ್‌ರೌಂಡರ್ ಕೃನಾಲ್‌ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರ ಕ್ಲಾಸಿಕ್‌ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಆರ್‌ಸಿಬಿ ತಂಡ ಪವರ್ ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ತಂಡಕ್ಕೆ ಆಧಾರವಾದವರು ಕೃನಾಲ್ ಪಾಂಡ್ಯ ಹಾಗೂ ಜಾಕೊಬ್ ಬೆಥೆಲ್. ಈ ಜೋಡಿಯ ಆಟದ ಪ್ರಭಾವದಿಂದಲೇ ಆರ್‌ಸಿಬಿ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದಂತೆ ಬ್ಯಾಟ್ ಮಾಡುವಲ್ಲಿ ಸಫಲವಾಯಿತು. ಈ ವೇಳೆ ಕೃನಾಲ್ ಪಾಂಡ್ಯ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು.

S Badrinath

ಕೃನಾಲ್‌ ಪಾಂಡ್ಯ ಭಾನುವಾರದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮುನ್ನುಗುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಮುಂದಾದರು. ಈ ವೇಳೆ ಮೈದಾನದಲ್ಲಿ ಕಾಲು ಮೇಲೆ ಮಾಡಿ ಬಿದ್ದಿದ್ದ ಕೃನಾಲ್ ಅವರ ಸಹಾಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್‌ ಕೀಪರ್ ರಯಾನ್ ರಿಕಲ್ಟನ್ ಧಾವಿಸಿದರು. ಅಲ್ಲದೆ ಕ್ರೀಡಾ ಮನೋಭಾವನೆ ಮೆರೆದರು. ಈ ವೇಳೆ ತಮಿಳಿನಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ಭಾರತ ತಂಡದ ಮಾಜಿ ಆಟಗಾರ ಎಸ್‌ ಬದ್ರಿನಾಥ್‌ ಇಲ್ಲದ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.

ಮೈದಾನದಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಕೃನಾಲ್‌ ಅವರ ವೇದನೆ ಕಂಡು ರಯಾನ್‌ ರಿಕಲ್ಟನ್‌ ಅವರ ಬಳಿ ಬಂದು ಅವರ ಕಾಲುಗಳನ್ನು ಹಿಡಿದು ಕೊಂಡರು. ಆಗ ಎಸ್‌ ಬದ್ರಿನಾಥ್ ರಯಾನ್ ರಿಕೆಲ್ಟನ್ ಅವರು ಕೃನಾಲ್ ಪಾಂಡ್ಯಗೆ ಸಹಾಯ ಮಾಡಬಾರದು, ಅವರು ಅಲ್ಲೇ ಸಾಯಲಿ ಎಂಬ ಅರ್ಥದಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು. ಈಗ ಇವರ ಹೇಳಿಕೆ ವಿವಾದ ಹುಟ್ಟಿಸಿದೆ. ಅಲ್ಲದೆ ಸಾಮಾಜಿಕ ತಾಣದಲ್ಲಿ ನೆಟ್ಟಿಗರ ವಿರೋಧಕ್ಕೂ ಕಾರಣವಾಗಿದೆ.

ಈ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಎಸ್‌ ಬದ್ರಿನಾಥ್ ವಿರುದ್ಧ ಕೆಂಡ ಕಾರಿದ್ದಾರೆ. ಅಲ್ಲದೆ ಇಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇನ್ನು ಹಲವರು ಇಂತಹವರನ್ನು ವೀಕ್ಷಕ ವಿವರಣೆ ಪ್ಯಾನಲ್‌ನಿಂದ ತೆಗೆದುಹಾಕಿ ಎಂದು ಒತ್ತಾಯಿಸಿದ್ದಾರೆ.

ಪಂದ್ಯದ ಫಲಿತಾಂಶ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್‌ ಸಿಡಿಸಿತು. ಈ ವೇಳೆ ರೋಹಿತ್‌ ಶರ್ಮಾ 22, ನಮನ್‌ ಧೀರ್‌ 47 ರನ್‌ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ 57 ಸಿಡಿಸಿ ತಂಡಕ್ಕೆ ಆಧಾರವಾದರು. ಈ ವೇಳೆ ಆರ್‌ಸಿಬಿ ತಂಡದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್‌ ಪಡೆದರು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್‌ ಸೇರಿಸಿತು. ಈ ವೇಳೆ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 73 ರನ್‌ ಸಿಡಿಸಿ ಜಯದಲ್ಲಿ ಮಿಂಚಿದರು.

Story first published: Monday, May 11, 2026, 16:05 [IST]
Other articles published on May 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+