SA20: ಬೌಲಿಂಗ್‌ನಲ್ಲೂ ಆರ್ಸಿಬಿ ಆಟಗಾರನ ಮೋಡಿ: ಒಂದೇ ಓವರ್ನಲ್ಲಿ ಎರಡು ವಿಕೆಟ್ ಕಿತ್ತ ಜ್ಯಾಕ್ಸ್

ವಿಲ್ ಜ್ಯಾಕ್ಸ್, ಸದ್ಯ ನಡೆಯುತ್ತಿರುವ ಎಸ್‌ಎ20 ಲೀಗ್‌ನಲ್ಲಿ ಸಖತ್ ಸುದ್ದಿ ಮಾಡ್ತಿರೋ ಆಟಗಾರ. ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ ಪಾಲಾಗಿರುವ ಇವರು, ಎಸ್‌ಎ 20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದಾರೆ.
ಎಸ್‌ಎ20 ಲೀಗ್‌ನಲ್ಲಿ ಸದ್ಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋದು ಇದೇ ವಿಲ್ ಜ್ಯಾಕ್ಸ್. ಆತನ ಬ್ಯಾಟಿಂಗ್ ಕಂಡು ಆರ್ಸಿಬಿ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.
ಬ್ಯಾಟಿಂಗ್‌ಗೆ ಇಳಿದಾಗ ಬರಿ ಬೌಂಡರಿಗಳನ್ನೇ ಹುಡುಕುವ ವಿಲ್ ಜ್ಯಾಕ್ಸ್ ಫೀಲ್ಡಿಂಗ್‌ನಲ್ಲಿ ಕೂಡ ಮಿಂಚುತ್ತಿದ್ದಾರೆ. ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಬೌಂಡರಿ ಗೆರೆಯಲ್ಲಿ ಒಂದೇ ಕೈನಲ್ಲಿ ಹಿಡಿದ ಕ್ಯಾಚ್ ಕಂಡು ಎಲ್ಲರೂ ಒಂದು ಕ್ಷಣ ನಿಬ್ಬೆರಗಾಗಿದ್ದರು. ವಿಲ್ ಜ್ಯಾಕ್ಸ್‌ರ ಆಟ ಕಂಡು ಇದು ನಿಜವಾದ ಆರ್ ಸಿಬಿ ಬ್ಲಡ್ ಎಂದು ಬಹುಪರಾಕ್ ಹೇಳಿದ್ದರು.
ಇಷ್ಟು ದಿನ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದ ವಿಲ್ ಜ್ಯಾಕ್ಸ್ ಜನವರಿ 22 ರಂದು ಭಾನುವಾರ ನಡೆದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಕೂಡ ಮಿಂಚು ಹರಿಸಿದರು. ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಅವರು ಪ್ರಮುಖ ಎರಡು ವಿಕೆಟ್ ಪಡೆದು ಮತ್ತೆ ಸುದ್ದಿಯಲ್ಲಿದ್ದಾರೆ.
ಜೋಸ್ ಬಟ್ಲರ್ ಕ್ಲೀನ್ ಬೌಲ್ಡ್
ಭಾನುವಾರ ನಡೆದ ಪರ್ಲ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಜೋಸ್ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಗಮನ ಸೆಳೆದರು. 16ನೇ ಓವರ್ ಬೌಲಿಂಗ್ ಮಾಡಲು ಬಂದ ಜ್ಯಾಕ್ಸ್ ತಮ್ಮ ಓವರ್ ನ ಮೊದಲನೇ ಎಸೆತದಲ್ಲೇ ಡೇನ್ ವಿಲ್ಲಾಸ್‌ರ ವಿಕೆಟ್ ಪಡೆದರು. ನಂತರ ಮೂರನೇ ಎಸೆತದಲ್ಲಿ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಆದರೂ ಈ ಪಂದ್ಯದಲ್ಲಿ ಪರ್ಲ್ ರಾಯಲ್ಸ್ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಪರ್ಲ್ ರಾಯಲ್ಸ್ 19.4 ಓವರ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಆರ್ಸಿಬಿ ತಂಡಕ್ಕೆ ಉತ್ತಮ ಸೇರ್ಪಡೆ
ಎಸ್‌ಎ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಕಂಡು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ತಂಡಕ್ಕೆ ಉತ್ತಮ ಸೇರ್ಪಡೆ ಎಂದು ಹೊಗಳುತ್ತಿದ್ದಾರೆ. ಸ್ಪಿನ್ ಬೌಲಿಂಗ್‌ಗೆ ಕೂಡ ಉತ್ತಮವಾಗಿ ಆಡುವ ಜ್ಯಾಕ್ಸ್ ಭಾರತದ ನೆಲದಲ್ಲಿ ಕೂಡ ಸ್ಫೋಟಕ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications