Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA20: ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಹೊಡೆದ ರೀತಿ ಸಿಕ್ಸ್ ಬಾರಿಸಿದ ಆರ್​ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್!

SA 20: RCB Batter Will Jacks Smashes 62 Runs In 27 Deliveries Against Rabada, Archer, Sam Curran Bowling

ವಿಲ್ ಜ್ಯಾಕ್ಸ್ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ20 ಲೀಗ್‌ನಲ್ಲಿ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. ಜೋಫ್ರಾ ಆರ್ಚರ್. ಕಗಿಸೋ ರಬಾಡ, ಸ್ಯಾಮ್ ಕರನ್ ಬೌಲಿಂಗ್‌ ಅನ್ನು ಧೂಳೀಪಟ ಮಾಡಿದ ವಿಲ್‌ ಜ್ಯಾಕ್ಸ್ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಹ್ಯಾರಿಸ್‌ ರೌಫ್‌ಗೆ ಸಿಕ್ಸರ್ ಹೊಡೆದ ರೀತಿಯಲ್ಲಿ ವಿಲ್‌ ಜ್ಯಾಕ್ಸ್ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಸಿಕ್ಸ್ ಬಾರಿಸಿ ಗಮನ ಸೆಳೆದರು. ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಜನವರಿ 23, ಸೋಮವಾರ ನಡೆದ ಎಂಐ ಕೇಪ್‌ ಟೌನ್‌ ವಿರುದ್ಧದ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ವಿಲ್‌ ಜ್ಯಾಕ್ಸ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಘಟಾನುಘಟಿ ಬೌಲಿಂಗ್ ಪಡೆಯನ್ನು ಹೊಂದಿರುವ ಎಂಐ ಕೇಪ್‌ಟೌನ್ ವಿಲ್‌ ಜ್ಯಾಕ್ಸ್ ಅಬ್ಬರಕ್ಕೆ ಕಂಗಾಲಾಯಿತು.

5 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 229.63 ಸ್ಟ್ರೈಕ್‌ರೇಟ್‌ನಲ್ಲಿ 62 ರನ್‌ ಗಳಿಸಿದ ವಿಲ್‌ ಜ್ಯಾಕ್ಸ್ ಒಡಿಯನ್ ಸ್ಮಿತ್ ಬೌಲಿಂಗ್‌ನಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು.

ಸವಾಲಿನ ಮೊತ್ತ ಗಳಿಸಿದ ಕ್ಯಾಪಿಟಲ್ಸ್

ಮೊದಲು ಬ್ಯಾಟಿಂಗ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿಲ್‌ ಜ್ಯಾಕ್ಸ್ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಕುಶಾಲ್ ಮೆಂಡಿಸ್ 29, ಬ್ರುಯ್ನೆ 36, ಜೇಮ್ಸ್ ನೀಶಮ್ 22 ರನ್ ಗಳಿಸಿದರು.

ಎಂಐ ಕೇಪ್‌ಟೌನ್ ಪರವಾಗಿ ರಶೀದ್ ಖಾನ್ ಮತ್ತು ಜೋಫ್ರಾ ಆರ್ಚರ್ ತಲಾ 3 ವಿಕೆಟ್ ಪಡೆದರೆ, ಒಡಿಯನ್ ಸ್ಮಿತ್ 2 ವಿಕೆಟ್ ಪಡೆದು, ಪ್ರಿಟೋರಿಯಾ ಕ್ಯಾಪಿಟಲ್ಸ್‌ಗೆ ಕಡಿವಾಣ ಹಾಕಿದರು.

ಗೆದ್ದು ಬೀಗಿದ ಪ್ರಿಟೋರಿಯಾ ಕ್ಯಾಪಿಟಲ್ಸ್

ಗೆದ್ದು ಬೀಗಿದ ಪ್ರಿಟೋರಿಯಾ ಕ್ಯಾಪಿಟಲ್ಸ್

ಸವಾಲಿನ ಮೊತ್ತವನ್ನು ಬೆನ್ನತ್ತಿದ ಎಂಐ ಕೇಪ್‌ಟೌನ್ ಪ್ರಿಟೋರಿಯಾ ಕ್ಯಾಪಿಟಲ್ಸ್ ದಾಳಿಗೆ ಸಿಕ್ಕಿ ನಲುಗಿತು. 18.1 ಓವರ್ ಗಳಲ್ಲಿ 130 ರನ್‌ಗಳಿಗೆ ಆಲೌಟ್ ಆಗುವ ಮೂಲಕ 52 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ವೇಯ್ನ್ ಪಾರ್ನೆಲ್ ಮತ್ತು ಅನ್ರಿಚ್ ನೋಕಿಯಾ ತಲಾ 3 ವಿಕೆಟ್ ಪಡೆದು ಎಂಐ ಕೇಪ್‌ಟೌನ್‌ಗೆ ಆಘಾತ ನೀಡಿದರು. ಆದಿಲ್ ರಶೀದ್ 2 ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲಿ ಮಿಂಚಿದ ವಿಲ್‌ ಜ್ಯಾಕ್ಸ್ ಕೂಡ ಒಂದು ವಿಕೆಟ್ ಪಡೆದರು. ಅತ್ಯುತ್ತಮ ಪ್ರದರ್ಶನ ನೀಡಿದ ವಿಲ್‌ ಜ್ಯಾಕ್ಸ್ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

ಹೆಚ್ಚು ರನ್ ಗಳಿಸಿದವರಲ್ಲಿ ಅಗ್ರಸ್ಥಾನ

ಹೆಚ್ಚು ರನ್ ಗಳಿಸಿದವರಲ್ಲಿ ಅಗ್ರಸ್ಥಾನ

ವಿಲ್ ಜ್ಯಾಕ್ಸ್ ಎಸ್‌ಎ20 ಟೂರ್ನಿ ಆರಂಭವಾದಾಗಿನಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ವಿಭಾಗಗಳಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ಇದುವರೆಗೂ 7 ಪಂದ್ಯಗಳನ್ನಾಡಿರುವ ಅವರು 38.57 ಸರಾಸರಿ 201.49 ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ 270 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳನ್ನು ಗಳಿಸಿರುವ ವಿಲ್‌ ಜ್ಯಾಕ್ಸ್ ಎಸ್‌ಎ 20 ಟೂರ್ನಿಯಕಲ್ಲಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ವಿಲ್‌ ಜ್ಯಾಕ್ಸ್‌ರನ್ನು ಆರ್​ಸಿಬಿ 2023ರ ಐಪಿಲ್ ಮಿನಿ ಹರಾಜಿನಲ್ಲಿ 3.2 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ. ಸದ್ಯ ವಿಲ್‌ ಜ್ಯಾಕ್ಸ್‌ರ ಅಬ್ಬರವನ್ನು ಕಂಡಿರುವ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಈಗ ನೀಡುತ್ತಿರುವ ಪ್ರದರ್ಶನವನ್ನೇ ಐಪಿಎಲ್‌ನಲ್ಲಿ ಮುಂದುವರೆಸಿದರೆ ಆರ್​ಸಿಬಿ ಬ್ಯಾಟಿಂಗ್‌ ಮಾರಕವಾಗಲಿದೆ ಎನ್ನುತ್ತಿದ್ದಾರೆ.

Story first published: Tuesday, January 24, 2023, 10:31 [IST]
Other articles published on Jan 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+