SA 20: ಆರ್ಸಿಬಿ ಆಟಗಾರ ಹಿಡಿದ ಕ್ಯಾಚ್ ನೋಡಿ ದಂಗಾದ ಬೌಲರ್, ಎದುರಾಳಿ ತಂಡದ ಕೋಚ್!

ಜನವರಿ 17 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಮೊದಲನೇ ಸೋಲು ಕಂಡಿತು. ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಅವರು 6 ರನ್‌ಗಳ ಅಂತರದಲ್ಲಿ ರೋಚಕವಾಗಿ ಸೋಲನುಭವಿಸಿದರು.
ಆದರೆ, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿರುವ ಆರ್ಸಿಬಿ ಆಟಗಾರ ವಿಲ್‌ಜ್ಯಾಕ್ಸ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಹೈಲೈಟ್ ಆಗಿತ್ತು. ವಿಲ್ ಜ್ಯಾಕ್ಸ್ ಹಿಡಿದ ಕ್ಯಾಚ್ ಕಂಡು ತಂಡದ ಸದಸ್ಯರೇ ತಲೆ ಮೇಲೆ ಕೈಹೊತ್ತುಕೊಂಡರು.
ಜೋಬರ್ಗ್ ಅವರ ಬ್ಯಾಟಿಂಗ್ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಈ ಅದ್ಭುತ ಕ್ಯಾಚ್ ಹಿಡಿದರು. ವೇಗಿ ಈಥಾನ್ ಬಾಷ್ ಬೌಲಿಂಗ್‌ನಲ್ಲಿ ಜೆರಾಲ್ಡ್ ಕೊಯೆಟ್ಜಿ ಡೀಪ್ ಸ್ಕ್ವೇರ್ ಲೆಗ್ ಮತ್ತು ಡೀಪ್ ಮಿಡ್-ವಿಕೆಟ್ ನಡುವೆ ಹೊಡೆದರು. ಅದು ಬೌಂಡರಿ ಹೋಗುತ್ತದೆ ಎಂದೇ ಭಾವಿಸುವಾಗ ಮಿಂಚಿನಂತೆ ಓಡಿದ ಜ್ಯಾಕ್ಸ್ ಒಂದೇ ಕೈನಲ್ಲಿ ಕ್ಯಾಚ್ ಹಿಡಿದರು.
ಜ್ಯಾಕ್ಸ್ ಕ್ಯಾಚ್ ಹಿಡಿದಿದ್ದಾರೆ ಎಂದು ಬೌಲರ್ ಈಥಾನ್ ಬಾಷ್ ಕೂಡ ಕೆಲವು ಕ್ಷಣ ನಂಬಲಿಲ್ಲ, ತಲೆ ಮೇಲೆ ಕೈಹೊತ್ತು ನೋಡಿದ ಅವರು ನಂತರ ಅದ್ಭುತ್ ಕ್ಯಾಚ್‌ಗಾಗಿ ಜ್ಯಾಕ್ಸ್‌ರನ್ನು ಅಭಿನಂದಿಸಿದರು.
ಶಾಕ್‌ಗೆ ಒಳಗಾದ ಸ್ಟೀಫನ್ ಫ್ಲೆಮಿಂಗ್
ಬೌಂಡರಿ ಹೋಗುತ್ತದೆ ಎಂದುಕೊಂಡಿದ್ದ ಜೋಹನ್ಸ್ ಬರ್ಗ್ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಒಂದು ಕ್ಷಣ ಶಾಕ್‌ಗೆ ಒಳಗಾದರು. ಅವರು ಮಾತ್ರವಲ್ಲದೆ, ಬ್ಯಾಟರ್, ತಂಡದ ಸಹ ಆಟಗಾರರು, ಪ್ರೇಕ್ಷಕರು ಕೂಡ ವಿಲ್ ಜ್ಯಾಕ್ಸ್ ಕ್ಯಾಚ್‌ಗೆ ಮನಸೋತರು.
ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮೈಕ್ ಹೇಸ್ಮನ್ ಕೂಡ ಜ್ಯಾಕ್ಸ್ ಕ್ಯಾಚ್ ಹಿಡಿದರು ಎಂದು ನಂಬಲಿಲ್ಲ, ಕ್ಯಾಚ್ ನೋಡಿದ ಅವರು "ಅದ್ಭುತವಾಗಿ ಆ ಕ್ಯಾಚ್ ಹಿಡಿಯಲಾಗಿದೆ, ಫ್ಲೆಮಿಂಗ್ ಅದನ್ನು ನಂಬಲು ಸಾಧ್ಯವಿಲ್ಲ. ಇಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿ ನಾವು ಅದನ್ನು ನಂಬಲು ಸಾಧ್ಯವಿಲ್ಲ," ಎಂದು ಸಂತೋಷದಿಂದ ಕಿರುಚಿದರು.
ICC ODI Ranking: ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರಿ ಏರಿಕೆ ಕಂಡ ವಿರಾಟ್ ಕೊಹ್ಲಿ, ಸಿರಾಜ್

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರೆ 43 ಲಕ್ಷ ರುಪಾಯಿ
ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ವೆಸ್ಟ್ ಇಂಡೀಸ್ ನಾಯಕ ಡೇರೆನ್ ಸ್ಯಾಮಿ ಕೂಡ ಕ್ಯಾಚ್ ನೋಡಿ ಹರ್ಷ ವ್ಯಕ್ತಪಡಿಸಿದರು. ಎಸ್‌ಎ20 ಲೀಗ್‌ನಲ್ಲಿರುವ 'ಕ್ಯಾಚ್ ಎ ಮಿಲಿಯನ್' ಸ್ಪರ್ಧೆಯನ್ನು ಉಲ್ಲೇಖಿಸಿ, "ಇದು ಮಿಲಿಯನ್‌ಗೆ ಅರ್ಹವಾದ ಕ್ಯಾಚ್" ಎಂದು ಹೇಳಿದರು.
ಎಸ್‌ಎ20 ಲೀಗ್‌ನಲ್ಲಿ ಪ್ರೇಕ್ಷಕರು ಒಂದು ಕೈನಲ್ಲಿ ಕ್ಯಾಚ್ ಹಿಡಿದರೆ ಅವರಿಗೆ 1 ಮಿಲಿಯನ್ ರ್‍ಯಾಂಡ್ (43 ಲಕ್ಷ ರುಪಾಯಿ) ಪ್ರಶಸ್ತಿ ಸಿಗುತ್ತದೆ. ಅಭಿಮಾನಿಗಳು ಕೂಡ ಸ್ಯಾಮಿಯ ಹೇಳಿಕೆಗೆ ಸಂತಸದಿಂದ ಕೂಗಿದರು.

ಆರ್ಸಿಬಿ ಅಭಿಮಾನಿಗಳಿಗೆ ಸಂತಸ
ಹಿಂದಿನ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ 46 ಎಸೆತಗಳಲ್ಲಿ 92 ರನ್ ಸಿಡಿಸಿದ್ದರು. ವಿಲ್ ಜ್ಯಾಕ್ಸ್ ಬ್ಯಾಟಿಂಗ್ ಕಂಡು ಆರ್ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಈಗ ಅವರ ಫೀಲ್ಡಿಂಗ್ ನೋಡಿ ಸಂತಸ ಮುಗಿಲು ಮುಟ್ಟಿದೆ. ಇನ್ನೂ ಕೆಲವು ಅಭಿಮಾನಿಗಳು ಅದು ಆರ್ಸಿಬಿ ರಕ್ತ ಜ್ಯಾಕ್ಸ್‌ರನ್ನು ಶ್ಲಾಘಿಸಿದ್ದಾರೆ.
2023 ಮಿನಿ ಹರಾಜಿನಲ್ಲಿ ವಿಲ್ ಜ್ಯಾಕ್ಸ್‌ರನ್ನು 3.20 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ. ಎಸ್‌ಎ20 ಟೂರ್ನಿಯಲ್ಲಿ ಅವರ ಆಟವನ್ನು ನೋಡುತ್ತಿದ್ದರೆ, ಅವರು ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications