SA T20: ದಕ್ಷಿಣ ಆಫ್ರಿಕಾ ಟಿ20 ಲೀಗ್ ತಂಡಗಳ ಲೋಗೋ ನೋಡಿ ಗಾಬರಿಯಾದ ಬಿಸಿಸಿಐ ಅಧಿಕಾರಿಗಳು

ದಕ್ಷಿಣ ಆಫ್ರಿಕಾ ಟಿ20 (SA20 ಲೀಗ್) ಲೀಗ್ ತಂಡಗಳ ಲೋಗೋ ನೋಡಿ ಬಿಸಿಸಿಐ ಅಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. ಐಪಿಎಲ್ ಫ್ರಾಂಚೈಸಿಗಳ ಮಾಲಿಕರೇ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ತಂಡಗಳ ಮಾಲಿಕರಾಗಿದ್ದಾರೆ. ಎರಡೂ ತಂಡಗಳ ಲೋಗೋಗಳು ಒಂದೇ ರೀತಿ ಇರುವುದು ಈಗ ಸಂಘರ್ಷಕ್ಕೆ ಕಾರಣವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ತಂಡದ ಲೋಗೋಗಳನ್ನೇ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ತಂಡಗಳಿಗೆ ಲೋಗೊ ವಿನ್ಯಾಸ ಮಾಡಲು ಬಳಸಿಕೊಳ್ಳಲಾಗಿದೆ. ಎರಡೂ ಲೋಗೋಗಳು ಒಂದೇ ರೀತಿಯಾಗಿ ಕಾಣುತ್ತಿರುವುದಕ್ಕೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.
"ಎಸ್‌ಎ20 ಲೋಗೋಗಳನ್ನು ನೋಡಿ ನಮಗೆ ಆಘಾತ ಮತ್ತು ಅಚ್ಚರಿಯಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಮತ್ತು ಐಪಿಎಲ್ ತಂಡಗಳ ಜೊತೆ ಈ ವಿಚಾರವನ್ನು ಚರ್ಚೆ ಮಾಡುತ್ತೇವೆ. ತಂಡದ ಮಾಲೀಕರ ಜೊತೆ ನಾವು ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧದವಾಗಿದೆ" ಎಂದು ಬಿಸಿಸಿಐ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಲೋಗೋಗಳ ನೋಡಿ ಬಿಸಿಸಿಯ ಅಧಿಕಾರಿಗಳು ಬೇಸರಗೊಂಡಿದ್ದಾರೆ ಎನ್ನುವುದಂತೂ ಸ್ಪಷ್ಟವಾಗಿದೆ. ತಂಡಗಳ ಹೆಸರು ಬದಲಾವಣೆ ಮಾಡಿರುವುದನ್ನು ಹೊರತುಪಡಿಸಿದರೆ, ಲೋಗೋಗಳ ವಿನ್ಯಾಸ ಒಂದೇ ರೀತಿಯಿದೆ. ಐಪಿಎಲ್ ಫ್ರಾಂಚೈಸಿಗಳ ಜೊತೆ ಮಾಡಿಕೊಂಡಿರುವ ಒಪ್ಪಂದಗಳ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳು ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವುದನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಐಪಿಎಲ್ ಬ್ರಾಂಡ್‌ನ ದುರ್ಬಲಗೊಳಿಸುವಿಕೆ ಷರತ್ತಿನ ಕಾರಣದಿಂದ ಬಿಸಿಸಿಐ ಇದನ್ನು ವಿರೋಧಿಸುವ ಸಾಧ್ಯತೆ ಇದೆ.

ಫ್ರಾಂಚೈಸಿಗಳ ಜೊತೆ ಚರ್ಚೆ
ಫ್ರಾಂಚೈಸಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಬಿಸಿಸಿಐಗೆ ಸಾಧ್ಯವಿಲ್ಲವಾದರೂ, ತಂಡಗಳ ಮಾಲೀಕರ ಜೊತೆ ಚರ್ಚೆ ನಡೆಸಿ, ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಉದ್ದೇಶವನ್ನು ಬಿಸಿಸಿಐ ಹೊಂದಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಎಸ್‌ಎ ಟಿ20 ಲೀಗ್‌ನಲ್ಲಿ ತಂಡಗಳನ್ನು ಹೊಂದಿವೆ. ಅಲ್ಲಿಗೆ ತಕ್ಕಂತೆ ಹೆಸರುಗಳನ್ನು ಬದಲಾಯಿಸಿದ್ದರೂ ಐಪಿಎಲ್ ತಂಡಗಳ ಲೋಗೋಗಳನ್ನು ಉಳಿಸಿಕೊಂಡಿವೆ. ಇದನ್ನು ಮಿನಿ ಐಪಿಎಲ್ ಎಂದೇ ಪರಿಗಣಿಸಲಾಗುತ್ತಿದೆ. ವಿಶ್ವದ ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಆಡಲು ಸಹಿ ಮಾಡಿದ್ದಾರೆ.
Ind vs SL 1st T20 : ಪಂದ್ಯ ಸೋತರೂ ಪರವಾಗಿಲ್ಲ! ಪಂದ್ಯ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಅಚ್ಚರಿಯ ಹೇಳಿಕೆ

ವಿವಿಧ ಲೀಗ್‌ಗಳಲ್ಲಿ ತಂಡಗಳ ಮಾಲಿಕತ್ವ
ಕೆಲವು ಐಪಿಎಲ್ ಫ್ರಾಂಚೈಸಿಗಳು ಐಪಿಎಲ್ ಮತ್ತು ಎಸ್‌ಎ20 ಲೀಗ್ ಹೊರತುಪಡಿಸಿ ಇತರೆ ಲೀಗ್‌ಗಳಲ್ಲಿ ಕೂಡ ತಂಡಗಳನ್ನು ಹೊಂದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಕೂಡ ತಂಡವನ್ನು ಹೊಂದಿದೆ. ಪಂಜಾಬ್ ಕಿಂಗ್ಸ್ ಕೂಡ ಸಿಪಿಎಲ್‌ನಲ್ಲಿ ತಂಡವನ್ನು ಖರೀದಿಸಿದೆ. ಮಾತ್ರವಲ್ಲ ಯುಎಇಯಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಟಿ20 ಲೀಗ್ (ಐಎಲ್‌ಟಿ20) ಲೀಗ್‌ನಲ್ಲಿ ಕೂಡ ತಂಡವನ್ನು ಹೊಂದಿದೆ.
ಕೆಕೆಆರ್ ಜೊತೆಗೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಐಎಲ್‌ಟಿ20 ಲೀಗ್‌ನಲ್ಲಿ ತಂಡಗಳನ್ನು ಹೊಂದಿವೆ.

ಜನವರಿ 10 ರಿಂದ ಎಸ್‌ಎ 20 ಆರಂಭ
ದಕ್ಷಿಣ ಆಫ್ರಿಕಾ ಟಿ20 ಲೀಗ್‌ಗೆ ಜನವರಿ 10 ರಂದು ಅದ್ದೂರಿ ಚಾಲನೆ ದೊರೆಯಲಿದೆ. ಬಿಸಿಸಿಐ ಲೈವ್ ಸ್ಟ್ರೀಮಿಂಗ್ ಪಾಲಿದಾರ ವೈಯಾಕಾಮ್ (Viacom) ಸಿಎಸ್‌ಎ ಟಿ20 ಲೀಗ್ ಸ್ಟ್ರೀಮಿಂಗ್ ಪಾಲಿದಾರರಾಗಿದ್ದಾರೆ.
ಮುಂದಿನ 10 ವರ್ಷಗಳ ಕಾಲ ಎಸ್‌ಎ20 ಲೀಗ್‌ನ ಪ್ರಸಾರದ ಹಕ್ಕುಗಳನ್ನು ವೈಯಾಕಾಮ್ 18 ಸ್ಪೋರ್ಟ್ಸ್ ಪಡೆದುಕೊಂಡಿದೆ. ವೋಟ್ ಮತ್ತು ಜಿಯೋ ಸಿನಿಮಾ ಈ ಪಂದ್ಯಗಳನ್ನು ನೇರಪ್ರಸಾರ ಮಾಡಲಿವೆ. ಪ್ರತಿವರ್ಷ 10 ಮಿಲಿಯನ್ ಡಾಲರ್ ಪಾವತಿಸುತ್ತದೆ.
ಮೊದಲನೇ ಆವೃತ್ತಿಯಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್, ಎಮ್‌ಐ ಕೇಪ್‌ಟೌನ್, ಪರ್ಲ್ ರಾಯಲ್ಸ್, ಪ್ರಿಟೋರಿಯಾ ಕ್ಯಾಪಿಟಲ್ಸ್, ಸನ್ ರೈಸರ್ಸ್ ಈಸ್ಟರ್ನ್ ಕೇಪ್, ಡರ್ಬನ್ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications