For Quick Alerts
ALLOW NOTIFICATIONS  
For Daily Alerts
 

SA vs BAN: ಬಾಂಗ್ಲಾದೇಶ ವಿರುದ್ಧ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ಕ್ವಿಂಟನ್ ಡಿ ಕಾಕ್

ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ 2023 ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಇತಿಹಾಸ ನಿರ್ಮಿಸಿದರು.

ಕ್ವಿಂಟನ್ ಡಿ ಕಾಕ್ ಬಾಂಗ್ಲಾದೇಶ ವಿರುದ್ಧದ 2023ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ 174 ರನ್‌ಗಳ ಅಮೋಘ ಶತಕ ಗಳಿಸುವ ಮೂಲಕ ತಮ್ಮ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಪರ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

SA vs BAN: Quinton de Kock Create Many Records with a Big Century Against Bangladesh


ಇದೇ ವೇಳೆ ಕ್ವಿಂಟನ್ ಡಿ ಕಾಕ್ ತಮ್ಮ 20ನೇ ಏಕದಿನ ಶತಕವನ್ನು ಪೂರೈಸಿದರು. ಆರಂಭಿಕ ಹಿನ್ನಡೆಯ ನಂತರ ಏಡೆನ್ ಮಾರ್ಕ್ರಾಮ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ಗೆ ಮಾರ್ಗದರ್ಶನ ನೀಡಿದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅವರು ತಮ್ಮ ಮೂರನೇ ಶತಕ ಬಾರಿಸಿದರು. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಮೂರು ಶತಕಗಳನ್ನು ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿದರು.

ಕ್ವಿಂಟನ್ ಡಿ ಕಾಕ್ ಅವರ ಪ್ರದರ್ಶನವು ಈ ಪಂದ್ಯಕ್ಕೆ ನಿರ್ಣಾಯಕವಾಗಿತ್ತು. ಮಾತ್ರವಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತು. ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಕನಿಷ್ಠ ಮೂರು ಶತಕಗಳನ್ನು ಬಾರಿಸಿದ 7ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

SA vs BAN: Quinton de Kock Create Many Records with a Big Century Against Bangladesh

ಅವರ ಶತಕವು ಕೇವಲ 101 ಎಸೆತಗಳಿಂದ ಬಂದಿದ್ದು, ನಂತರ ಗೇರ್ ಬದಲಾಯಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಶಕೀಬ್ ಅಲ್ ಹಸನ್ ಅವರ ಒಂದೇ ಓವರ್‌ನಲ್ಲಿ 22 ರನ್‌ ಬಾರಿಸಿ ತಮ್ಮ 150 ರನ್ ಪೂರ್ಣಗೊಳಿಸಿದರು ಮತ್ತು ನಂತರ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ ಅವರ 162 ರನ್‌ಗಳನ್ನು ಮೀರಿದರು. ಇದು ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಎರಡನೇ ಅತಿ ಹೆಚ್ಚು ಸ್ಕೋರ್ ಆಗಿತ್ತು.

1996ರ ವಿಶ್ವಕಪ್‌ನಲ್ಲಿ ಯುಎಇ ವಿರುದ್ಧ 188 ರನ್ ಗಳಿಸಿದ ಗ್ಯಾರಿ ಕರ್ಸ್ಟನ್ ಅವರ ಗರಿಷ್ಠ ಸ್ಕೋರ್ ಎನಿಸಿದೆ. ಕ್ವಿಂಟನ್ ಡಿ ಕಾಕ್ ಅವರ ಇನ್ನಿಂಗ್ಸ್ 140 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರ ಹಿಂದಿನ ಶತಕಗಳು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 100 ಮತ್ತು 109 ರನ್‌ಗಳೊಂದಿಗೆ ಬಂದಿವೆ.

ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ನಿಂದ ಹೆಚ್ಚಿನ 150-ಪ್ಲಸ್ ರನ್‌ಗಳು

3 - ಕ್ವಿಂಟನ್ ಡಿ ಕಾಕ್
2 - ಆಡಮ್ ಗಿಲ್‌ಕ್ರಿಸ್ಟ್
2 - ಜೋಸ್ ಬಟ್ಲರ್

ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ಸ್ಕೋರ್‌ಗಳು

188 - ಗ್ಯಾರಿ ಕರ್ಸ್ಟನ್ vs ಯುಎಇ, ರಾವಲ್ಪಿಂಡಿ, 1996
174 - ಕ್ವಿಂಟನ್ ಡಿ ಕಾಕ್ vs ಬಾಂಗ್ಲಾದೇಶ, ಮುಂಬೈ, 2023
162 - ಎಬಿ ಡಿವಿಲಿಯರ್ಸ್ vs ವೆಸ್ಟ್ ಇಂಡೀಸ್, ಸಿಡ್ನಿ, 2015
161 - ಆಂಡ್ರ್ಯೂ ಹಡ್ಸನ್ vs ನೆದರ್ಲ್ಯಾಂಡ್ಸ್ , ರಾವಲ್ಪಿಂಡಿ, 1996
159 - ಹಾಶಿಮ್ ಆಮ್ಲಾ vs ಐರ್ಲೆಂಡ್, ಕ್ಯಾನ್‌ಬೆರಾ, 2015

ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ನಿಂದ ಅತ್ಯಧಿಕ ಸ್ಕೋರ್‌ಗಳು

183 - ಎಂಎಸ್ ಧೋನಿ (ಭಾರತ) vs ಶ್ರೀಲಂಕಾ, ಜೈಪುರ, 2005
178 - ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) vs ಆಸ್ಟ್ರೇಲಿಯಾ, ಸೆಂಚುರಿಯನ್, 2016
176 - ಲಿಟ್ಟನ್ ದಾಸ್ (ಬಾಂಗ್ಲಾದೇಶ) vs ಜಿಂಬಾಬ್ವೆ, ಸಿಲ್ಹೆಟ್, 2020
174 - ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) vs ಬಾಂಗ್ಲಾದೇಶ, ಮುಂಬೈ, 2023
173 - ಜಸ್ಕರನ್ ಮಲ್ಹೋತ್ರಾ (ಯುಎಸ್ಎ) vs ಪಪುವಾ ನ್ಯೂ ಗಿನಿಯಾ, ಅಲ್ ಅಮರತ್, 2021

Story first published: Tuesday, October 24, 2023, 19:57 [IST]
Other articles published on Oct 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+