ನ್ಯೂಜಿಲೆಂಡ್ vs ದ.ಆಫ್ರಿಕಾ 2ನೇ ಟೆಸ್ಟ್: ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 364 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
ಮೊದಲ ದಿನದಾಟದಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದಲ್ಲಿ 364 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆಫ್ರಿಕಾ ಪರ ಸೆರೆಲ್ ಎರ್ವಿ 221 ಎಸೆತಗಳಲ್ಲಿ 108 ರನ್ ಕಲೆಹಾಕಿದ ಬಳಿಕ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕದ ಗಡಿ ಮುಟ್ಟುವಲ್ಲಿಯೂ ಸಾಧ್ಯವಾಗಲಿಲ್ಲ.
ಮೊದಲ ದಿನದಾಟದಂತ್ಯದಲ್ಲಿ ಅಜೇಯ 22 ರನ್ ಗಳಿಸಿದ್ದ ಟೆಂಬಾ ಬವುಮಾ 29 ರನ್‌ಗಳಿಗೆ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದ್ರೆ, ರಾಸ್ಸಿ ವ್ಯಾನ್ ಡರ್ ಡಸ್ಸೆನ್ 35ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಕೆಳಕ್ರಮಾಂಕದಲ್ಲಿ ಬೌಲಿಂಗ್ ಆಲ್‌ರೌಂಡರ್ ಮಾರ್ಕೊ ಜಾನ್ಸನ್ 37 ರನ್ ಕಲೆಹಾಕಿ ತಂಡದ ಮೊತ್ತವನ್ನ 350ರ ಗಡಿದಾಟಸಿದ್ರು. ಕೇಶವ್ ಮಹಾರಾಜ್ 36 ರನ್‌ಗಳ ಕೊಡುಗೆಯನ್ನ ನೀಡಿದ್ರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್‌ಗಳಿಗೆ ಸರ್ವಪತನಗೊಂಡಿತು.
ನ್ಯೂಜಿಲೆಂಡ್ ಪರ ಎಡಗೈ ಬೌಲರ್ ನೀಲ್ ವ್ಯಾಗ್ನರ್‌ಗೆ 4 ವಿಕೆಟ್, ಮ್ಯಾಟ್ ಹೆನ್ರಿ 3, ಕೈಲ್ ಜೇಮಿಸನ್ 2, ಟಿಮ್ ಸೌಥಿ 1 ವಿಕೆಟ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ರನ್‌ಗೆ ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಯಿತು. ರಬಾಡ ಮತ್ತು ಮಾರ್ಕೊ ಜಾನ್ಸನ್ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ 91 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದೆ.
ಕ್ಯಾಪ್ಟನ್ ಟಾಮ್ ಲಥಾಮ್ 0, ವಿಲ್ ಯಂಗ್ 3, ಡಿವೊನ್ ಕಾನ್ವೆ 16, ಹೆನ್ರಿ ನಿಕೋಲ್ಸ್ 39, ಟಾಮ್ ಬ್ಲಂಡೆಲ್ 6 ರನ್‌ಗಳಿಸಿ ಔಟಾದ್ರು. ಡರೆಲ್ ಮಿಚೆಲ್ ಅಜೇಯ 29, ಕಾಲಿನ್ ಡಿ ಗ್ರಾಂಡ್‌ಹೋಮ್ ಅಜೇಯ 54ರನ್‌ಗಳಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 157 ರನ್‌ಗಳಿಸಿದ್ದು, 207ರನ್‌ಗಳ ಹಿನ್ನಡೆಯಲ್ಲಿದೆ.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 12 ಓವರ್‌ಗಳಲ್ಲಿ 37 ರನ್‌ಗೆ 3 ವಿಕೆಟ್, ಮಾರ್ಕೊ ಜಾನ್ಸನ್ 12 ಓವರ್‌ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.
ಇನ್ನು ಕ್ರೈಸ್ಟ್‌ಚರ್ಚ್‌ನಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಇನ್ನಿಂಗ್ಸ್ ಸೇರಿದಂತೆ 276 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications