SA vs PAK: ರಿಕಲ್ಟನ್ 259, ಕೈಲ್ ವೆರ್ರೆನ್ನೆ 100, ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 615
ಪಾಕಿಸ್ತಾನ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ಪಾಕಿಸ್ತಾನ ಎರಡು ಪಂದ್ಯಗಳ ಟೆಸ್ಟ್ ಆಡುತ್ತಿದೆ. ಈ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 615 ರನ್ ಕಲೆ ಹಾಕಿದೆ. ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 64 ರನ್ ಗಳಿಸಿ ಸಂಕಷ್ಟದಲ್ಲಿದೆ. ಇನ್ನು ಪಾಕ್‌ಗೆ ಇನಿಂಗ್ಸ್ ಮುನ್ನಡೆ ಸಾಧಿಸಲು 551 ರನ್ ಕಲೆ ಹಾಕಿದೆ. ಇನ್ನು ಫಾಲೋ ಆನ್‌ನಿಂದ ಬಚಾವ್ ಆಗಲು ಪಾಕ್‌ಗೆ ಇನ್ನು 331 ರನ್‌ಗಳ ಕಲೆ ಹಾಕಬೇಕಿದೆ.
ದಕ್ಷಿಣ ಆಫ್ರಿಕಾ ಎರಡನೇ ದಿನದಾಟವನ್ನು 4 ವಿಕೆಟ್‌ಗೆ 316 ರನ್‌ಗಳಿಂದ ಆಟ ಮುಂದುವರಿಸಿದ ಆತಿಥೇಯ ತಂಡ ಬೃಹತ್ ಮೊತ್ತ ಕಲೆ ಹಾಕಿದೆ. ಈ ಮೂಲಕ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಮೂಲಕ ಡಬ್ಲ್ಯುಟಿಸಿ ಫೈನಲ್‌ಗೆ ಪ್ರವೇಶ ಪಡೆದ ಮೊದಲ ತಂಡ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಉಳಿದ ಇನ್ನೊಂದು ಸ್ಥಾನಕ್ಕಾಗಿ ಭಾರತ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಕಣ್ಣು ನೆಟ್ಟಿವೆ.

ದಕ್ಷಿಣ ಆಫ್ರಿಕಾದ ಪರ ಆರಂಭಿಕ ಆಟಗಾರ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಎರಡನೇ ದಿನದಾಟವನ್ನು ಅಜೇಯ 176 ರನ್‌ಗಳಿಂದ ಆಟ ಮುಂದುವರಿಸಿದರು. ಇವರು 343 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್ ಸಹಾಯದಿಂದ 259 ರನ್ ಸಿಡಿಸಿ ಅಬ್ಬರಿಸಿದರು.
ರಿಕಲ್ಟನ್ ದಾಖಲೆ
ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ರಿಯಾನ್ ರಿಕಲ್ಟನ್ ಅಬ್ಬರಿಸಿದರು. ಇವರು ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದರು. ಎರಡನೇ ದಿನದಾಟದ ಆರಂಭದಲ್ಲಿ ರಿಕಲ್ಟನ್ 250 ರನ್ ಬಾರಿಸುತ್ತಿದ್ದಂತೆ ದಾಖಲೆ ನಿರ್ಮಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಪರ 250ಕ್ಕೂ ಹೆಚ್ಚು ರನ್ ಕಲೆ ಹಾಕಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ಕೈಲ್ ವೆರ್ರೆನ್ನೆ ಶತಕ
ಮಧ್ಯಮ ಕ್ರಮಾಂಕದಲ್ಲಿ ಕೈಲ್ ವೆರ್ರೆನ್ನೆ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 147 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ನೆರವಿನಿಂದ ಶತಕ ಬಾರಿಸಿ ಔಟ್ ಆದರು. ಇನ್ನು ಆಲ್‌ರೌಂಡರ್ ಮಾರ್ಕೊ ಜಾನ್ಸನ್ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿ ಔಟ್ ಆದರು.
ಪಾಕಿಸ್ತಾನದ ಪರ ಮೊಹಮ್ಮದ್ ಅಬ್ಬಾಸ್ ಹಾಗೂ ಸಲ್ಮಾನ್ ಅಘಾ ತಲಾ ಮೂರು ವಿಕೆಟ್ ಪಡೆದರು.
ಪಾಕ್ ಕಳಪೆ ಆರಂಭ
ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 20 ರನ್‌ಗಳಾಗಿದ್ದಾಗ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೂರನೇ ದಿನದಾಟಕ್ಕೆ ಪಾಕ್ ಪರ ಮೊಹಮ್ಮದ್ ರಿಜ್ವಾನ್ ಅಜೇಯ 9 ಹಾಗೂ ಸ್ಟಾರ್ ಆಟಗಾರ ಬಾಬರ್ ಅಜಮ್ ಅಜೇಯ 31 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications