SA Vs WI 1st Test: ಏಡೆನ್ ಮಾರ್ಕ್ರಾಮ್ ಶತಕ: ಮೊದಲ ದಿನ ಉತ್ತಮ ರನ್ ಗಳಿಸಿದ ದಕ್ಷಿಣ ಆಫ್ರಿಕಾ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಮೊದಲ ದಿನದಾಂತ್ಯಕ್ಕೆ ದಕ್ಷಿಣ ಆಫ್ರಿಕಾ 300 ರನ್‌ಗಳ ಗಡಿ ದಾಟಿದೆ. ಮೊದಲ ದಿನದಾಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 314 ರನ್ ಗಳಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದೆ.
ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭಿಕರಾದ ಡೀನ್ ಎಲ್ಗರ್ ಮತ್ತು ಏಡೆನ್ ಮಾರ್ಕ್ರಾಮ್ ಭದ್ರ ಬುನಾದಿ ಹಾಕಿದರು.
ಡೀನ್ ಎಲ್ಗಾರ್ 71 ರನ್ ಗಳಿಸಿದರೆ, ಏಡೆನ್ ಮಾರ್ಕ್ರಾಮ್ ಶತಕ ಗಳಿಸಿ ಮಿಂಚಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 141 ರನ್ ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾ ಉತ್ತಮ ರನ್ ಗಳಿಸಲು ಕಾರಣವಾದರು.
ಏಡೆನ್ ಮಾರ್ಕ್ರಾಮ್ 174 ಎಸೆತಗಳಲ್ಲಿ 115 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 18 ಬೌಂಡರಿಗಳು ಸೇರಿದ್ದವು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 6ನೇ ಶತಕವಾಗಿದೆ. ಒಂದು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಅವರು ಅತ್ಯುತ್ತಮವಾಗಿಯೇ ಕಮ್‌ಬ್ಯಾಕ್ ಮಾಡಿದರು.

ಆರಂಭಿಕರನ್ನು ಹೊರತುಪಡಿಸಿ ಉಳಿದವರು ವಿಫಲ
ಆರಂಭಿಕರು ಇಬ್ಬರನ್ನು ಹೊರತುಪಡಿಸಿದರೆ, ಉಳಿದ ಬ್ಯಾಟರ್ ಗಳು ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾದರು. ನಾಯಕ ಟೆಂಬಾ ಬವುಮಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೀಗನ್ ಪೀಟರ್ಸನ್ 14 ರನ್ ಗಳಿಸಿದರೆ, ಹೆನ್ರಿಕ್ ಕ್ಲಸೀನ್ 20 ರನ್ ಗಳಿಸಿದರು. ಸೀನುರನ್ ಮುತ್ತುಸ್ವಾಮಿ 3 ರನ್ ಗಳಿಸಿ ಔಟಾದರೆ, ಕಗಿಸೋ ರಬಾಡ 8 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಮಾರ್ಕೊ ಜಾನ್ಸನ್ ಅಜೇಯ 17 ರನ್ ಮತ್ತು ಗೆರಾಲ್ಡ್ ಕೊಯೆಟ್ಜೆ ಅಜೇಯ 11 ರನ್ ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

3 ವಿಕೆಟ್ ಪಡೆದ ಅಲ್ಜಾರಿ ಜೋಸೆಫ್
ವೆಸ್ಟ್ ಇಂಡೀಸ್ ಪರವಾಗಿ ವೇಗಿ ಅಲ್ಜಾರಿ ಜೋಸೆಫ್ 3 ವಿಕೆಟ್ ಪಡೆದು ಮಿಂಚಿದರು. ಕೆಮರ್ ರೋಚ್, ಕೈಲ್ ಮೇಯರ್ಸ್, ಶನ್ನೋನ್ ಗೇಬ್ರಿಯಲ್, ಜೇಸನ್ ಹೋಲ್ಡರ್ ತಲಾ ಒಂದು ವಿಕೆಟ್ ಪಡೆದರು. ಆರಂಭದಲ್ಲಿ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು ಅಂತಿಮವಾಗಿ ಸತತವಾಗಿ ವಿಕೆಟ್ ಪಡೆದು ಮಿಂಚಿದರು.
ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸನಿಹವಾಗಿದ್ದು, ದಕ್ಷಿಣ ಆಫ್ರಿಕಾ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications