SA vs WI: ವೆಸ್ಟ್ ಇಂಡೀಸ್ ವಿರುದ್ಧ 284 ರನ್‌ಗಳ ಭರ್ಜರಿ ಜಯ: ಟೆಸ್ಟ್ ಸರಣಿ ವೈಟ್‌ವಾಶ್ ಮಾಡಿದ ದಕ್ಷಿಣ ಆಫ್ರಿಕಾ

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ 284 ರನ್‌ಗಳ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಸರಣಿಯನ್ನು ವೈಟ್‌ವಾಶ್ ಮಾಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಹರಿಣಗಳ ಬೌಲಿಂಗ್ ದಾಳಿಗೆ ಬೆದರಿದ ವಿಂಡೀಸ್ ಪಡೆ 106 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಸೋಲು ಕಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ 390 ರನ್‌ಗಳನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 106 ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಏಡೆನ್ ಮಾರ್ಕ್ರಾಮ್ ಮತ್ತು ಟೋನಿ ಡಿ ಜೊರ್ಜಿ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ 320 ರನ್‌ಗಳನ್ನು ಕಲೆಹಾಕಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಏಡೆನ್ ಮಾರ್ಕ್ರಾಮ್ 96 ರನ್ ಗಳಿಸಿದರೆ, ಟೋನಿ ಡಿ ಜೊರ್ಜಿ 85 ರನ್ ಗಳಿಸಿದರು. ಡೀನ್ ಎಲ್ಗರ್ 42 ರನ್ ಗಳಿಸಿದರು. ಅಲ್ಝಾರಿ ಜೋಸೆಫ್, ಕೈಲ್ ಮೇಯರ್ಸ್ ಮತ್ತು ಗುಡಕೇಶ್ ಮೊಟಿ ತಲಾ 3 ವಿಕೆಟ್ ಪಡೆದರು. ಜೇಸನ್ ಹೋಲ್ಡರ್ ಒಂದು ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 251 ರನ್‌ಗಳಿಗೆ ಸರ್ವಪತನ ಕಂಡಿತು. ಜೇಸನ್ ಹೋಲ್ಡರ್ 81 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ. ಕೈಲ್ ಮೇಯರ್ಸ್ 29 ರನ್, ರೋಸ್ಟನ್ ಚೇಸ್ 28 ಮತ್ತು ಜೋಶ್ವಾ ಡಿ ಸಿಲ್ವ 26 ರನ್ ಗಳಿಸಿದರು.
ಗೆರಾಲ್ಡ್ ಕೊಯೆಟ್ಜೆ ಮೂರು ವಿಕೆಟ್ ಪಡೆದರೆ, ರಬಾಡಾ ಮತ್ತು ಹಾರ್ಮರ್ ತಲಾ ವಿಕೆಟ್ ಪಡೆದರು. ಮುಲ್ಡರ್ ಮತ್ತು ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 69 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಟೆಂಬಾ ಬವುಮಾ ಭರ್ಜರಿ ಶತಕ
ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 321 ರನ್‌ಗಳನ್ನು ಗಳಿಸಿತು. ಟೆಂಬಾ ಬವುಮಾ 172 ರನ್ ಗಳಿಸುವ ಮೂಲಕ ಮಿಂಚಿದರು. ಆರಂಭಿಕರನ್ನು ಬೇಗನೆ ಕಳೆದುಕೊಂಡರು ನಂತರ ಬಂದ ಬವುಮಾ ಅಮೋಘ ಇನ್ನಿಂಗ್ಸ್ ಆಡಿದರು. ಮುಲ್ಡರ್ 42 ರನ್ ಗಳಸಿದರೆ, ಹಾರ್ಮರ್ 19 ರನ್ ಗಳಿಸಿದರು.
ಕೈಲ್ ಮೇಯರ್ಸ್ ಮತ್ತು ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದುಕೊಂಡರು. ರೋಚ್ ಮತ್ತು ರೀಫರ್ ತಲಾ ಒಂದು ವಿಕೆಟ್ ಪಡೆದುಕೊಂಡರು.

106 ರನ್‌ಗಳಿಗೆ ಆಲೌಟ್ ಆದ ವೆಸ್ಟ್ ಇಂಡೀಸ್
390 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು. 34 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯದಲ್ಲಿತ್ತು. ಜೋಶ್ವಾ ಡಿ ಸಿಲ್ವ 34 ರನ್ ಮತ್ತು ಜೇಸನ್ ಹೋಲ್ಡರ್ 19 ರನ್ ಗಳಿಸುವ ಮೂಲಕ 100 ರನ್‌ಗಳ ಗಡಿ ದಾಟಲು ಕಾರಣವಾದರು.
ಅಂತಿಮವಾಗಿ 106 ರನ್‌ಗಳಿಗೆ ಆಲೌಟ್ ಆದ ವೆಸ್ಟ್ ಇಂಡೀಸ್ 284 ರನ್‌ಗಳ ಸೋಲನುಭವಿಸಿತು. ಸೈಮನ್ ಹಾರ್ಮರ್ ಮತ್ತು ಗೆರಾಲ್ಡ್ ಕೊಯೆಟ್ಜಿ ತಲಾ 3 ವಿಕೆಟ್ ಪಡೆದುಕೊಂಡರು. ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ 2 ವಿಕೆಟ್ ಪಡೆದು ಮಿಂಚಿದರು.
ಶತಕ ಗಳಿಸಿ ಮಿಂಚಿದ ಟೆಂಬಾ ಬವುಮಾ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರೆ, ಏಡೆನ್ ಮಾರ್ಕ್ರಾಮ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಸರಣಿಯ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ವೈಟ್ ವಾಶ್ ಮಾಡುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications