For Quick Alerts
ALLOW NOTIFICATIONS  
For Daily Alerts
 

SA20 2023 Final: ಪ್ರಿಟೋರಿಯಾ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಫೈನಲ್ ಪಂದ್ಯದ ವಿವರ, ಟಿವಿ & ಲೈವ್ ಸ್ಟ್ರೀಮ್

SA20 2023 Final: Pretoria Capitals vs Sunrisers Eastern Cape Match Details, TV & Live Streaming

ದಕ್ಷಿಣ ಆಫ್ರಿಕಾ ಟಿ20 ಲೀಗ್ (SA20 2023)ರ ಚೊಚ್ಚಲ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ವೇಯ್ನ್ ಪಾರ್ನೆಲ್ ನಾಯಕತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ 31 ಅಂಕಗಳೊಂದಿಗೆ ಮತ್ತು +0.927 ನೆಟ್ ರನ್‌ರೇಟ್‌ನೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಫೆಬ್ರವರಿ 8ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಡೇವಿಡ್ ಮಿಲ್ಲರ್ ನಾಯಕತ್ವದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ವಿಲ್ ಜ್ಯಾಕ್ಸ್ ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಏಳು ಪಂದ್ಯಗಳಿಂದ 38.57 ಸರಾಸರಿ ಮತ್ತು 201.49 ಸ್ಟ್ರೈಕ್ ರೇಟ್‌ನೊಂದಿಗೆ 270 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ.

SA20 2023 Final: Pretoria Capitals vs Sunrisers Eastern Cape Match Details, TV & Live Streaming

ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ ಅವರು 6.28ರ ಎಕಾನಮಿ ದರದಲ್ಲಿ 10 ಪಂದ್ಯಗಳಿಂದ 18 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಪ್ರಮುಖ ವಿಕೆಟ್ ಟೇಕರ್ ಬೌಲರ್ ಆಗಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.

ಇನ್ನು ಐಡೆನ್ ಮಾರ್ಕ್ರಾಮ್ ನಾಯಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ 10 ಪಂದ್ಯಗಳಿಂದ 19 ಅಂಕಗಳನ್ನು +0.316ರ ನೆಟ್ ರನ್‌ರೇಟ್‌ನಲ್ಲಿ ಗಳಿಸಿತ್ತು. ಸೆಮಿಫೈನಲ್‌ನಲ್ಲಿ ಫಾಫ್ ಡು ಪ್ಲೆಸಿಸ್‌ನ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಅಂತಿಮ ಹಂತಕ್ಕೆ ತಲುಪಿದ್ದಾರೆ.

SA20 2023 Final: Pretoria Capitals vs Sunrisers Eastern Cape Match Details, TV & Live Streaming

ನಾಯಕ ಐಡೆನ್ ಮಾರ್ಕ್ರಾಮ್ ಅವರು ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದರು ಮತ್ತು ತಂಡದ ಪರ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಮಾರ್ಕ್ರಾಮ್ 11 ಪಂದ್ಯಗಳಲ್ಲಿ 34ರ ಸರಾಸರಿ ಮತ್ತು 127.34 ಸ್ಟ್ರೈಕ್‌ರೇಟ್‌ನೊಂದಿಗೆ 340 ರನ್ ಗಳಿಸಿದ್ದಾರೆ.

ಎಡಗೈ ಸ್ಪಿನ್ನರ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ಅವರು 5.33ರ ಎಕಾನಮಿ ದರದಲ್ಲಿ ಒಂಬತ್ತು ಪಂದ್ಯಗಳಿಂದ 16 ವಿಕೆಟ್‌ಗಳೊಂದಿಗೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

SA20 ಫೈನಲ್ ಪಂದ್ಯದ ವಿವರ
ದಿನಾಂಕ: ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ನಡುವಿನ 2023ರ SA20 ಫೈನಲ್ ಪಂದ್ಯವು ಫೆಬ್ರವರಿ 11ರ ಶನಿವಾರದಂದು ನಡೆಯಲಿದೆ.

ಸ್ಥಳ: 2023ರ SA20 ಫೈನಲ್ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಸಮಯ: 2023ರ SA20 ಫೈನಲ್ ಪಂದ್ಯವು ಫೆಬ್ರವರಿ 11ರ ಶನಿವಾರ, ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್: ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ನಡುವಿನ 2023ರ SA20 ಫೈನಲ್ ಪಂದ್ಯವು Sports18ನಲ್ಲಿ ನೇರಪ್ರಸಾರವಾಗಲಿದೆ ಮತ್ತು ಫೈನಲ್‌ ಪಂದ್ಯವನ್ನು Viacomನ JioTV ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಸಂಭಾವ್ಯ 11ರ ಬಳಗ

ಪ್ರಿಟೋರಿಯಾ ಕ್ಯಾಪಿಟಲ್ಸ್: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಕುಸಲ್ ಮೆಂಡಿಸ್, ಥೀನಿಸ್ ಡಿ ಬ್ರುಯಿನ್, ರಿಲೀ ರೊಸ್ಸೌ, ಕಾಲಿನ್ ಇಂಗ್ರಾಮ್, ಜೇಮ್ಸ್ ನೀಶಮ್, ಸೆನುರಾನ್ ಮುತ್ತುಸಾಮಿ, ವೇಯ್ನ್ ಪಾರ್ನೆಲ್ (ನಾಯಕ), ಈಥನ್ ಬಾಷ್, ಆದಿಲ್ ರಶೀದ್, ಅನ್ರಿಚ್ ನಾರ್ಟ್ಜೆ.

ಸನ್‌ರೈಸರ್ಸ್ ಈಸ್ಟರ್ನ್ ಕೇಪ್: ಆಡಮ್ ರೋಸಿಂಗ್ಟನ್ (ವಿಕೆಟ್ ಕೀಪರ್), ಟೆಂಬಾ ಬವುಮಾ, ಜೋರ್ಡಾನ್ ಹರ್ಮನ್, ಐಡೆನ್ ಮಾರ್ಕ್ರಾಮ್ (ನಾಯಕ), ಜೋರ್ಡಾನ್ ಕಾಕ್ಸ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಬ್ರೈಡನ್ ಕಾರ್ಸೆ, ಒಟ್ನಿಯೆಲ್ ಬಾರ್ಟ್‌ಮ್ಯಾನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸಿಸಂಡಾ ಮಗಾಲಾ.

Story first published: Saturday, February 11, 2023, 10:54 [IST]
Other articles published on Feb 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+