SA20 ಲೀಗ್‌ನ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ನಾಯಕ ಫಾಫ್ ಡು ಪ್ಲೆಸಿಸ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಆಡಿರುವುದು ತುಂಬಾ ಅದೃಷ್ಟ ಎಂದು ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದೊಂದಿಗಿನ ತಮ್ಮ ಆಟದ ಅವಧಿಯಲ್ಲಿ ಕ್ರಿಕೆಟಿಗನಾಗಿ ಕಲಿತ ಪಾಠಗಳನ್ನು ನೆನಪಿಸಿಕೊಳ್ಳುತ್ತಾರೆ.

SA20 ಎರಡನೇ ಅವೃತ್ತಿಗೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್, ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಆಡಿದ್ದೇನೆ, ಎಂಎಸ್ ಧೋನಿ ಮತ್ತು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಆಟವನ್ನು ನೋಡಿದ್ದೇನೆ ಎಂದರು.
ಫಾಫ್ ಡು ಪ್ಲೆಸಿಸ್ 2011ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಸದಸ್ಯರಾಗಿದ್ದರು, ನಂತರ 2021ರಲ್ಲಿ ಟ್ರೋಫಿ ಗೆಲುವಿನ ಬಳಿಕ ಸಿಎಸ್‌ಕೆ ತಂಡವನ್ನು ತೊರೆದು ಆರ್‌ಸಿಬಿ ಸೇರಿದರು.
ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಕೊಡುಗೆಗಳು ಕೇವಲ ಅವರ ಬ್ಯಾಟಿಂಗ್ ಅಂಕಿಅಂಶಗಳಿಗೆ ಸೀಮಿತವಾಗಿರಲಿಲ್ಲ. ವಿಶೇಷವಾಗಿ ಫೈನಲ್‌ಗಳಲ್ಲಿ, ಅವರು ಸಿಎಸ್‌ಕೆ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

2021ರ ಐಪಿಎಲ್ ಫೈನಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಿರುದ್ಧ 59 ಎಸೆತಗಳಲ್ಲಿ 86 ರನ್‌ಗಳ ಪಂದ್ಯ ವಿಜೇತ ಪ್ರದರ್ಶನವನ್ನು ನೀಡಿದರು. ಇದು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಂದುಕೊಟ್ಟಿತು ಮತ್ತು ಸಿಎಸ್‌ಕೆ ತಮ್ಮ ನಾಲ್ಕನೇ ಐಪಿಎಲ್ ಟ್ರೋಫಿ ಗೆಲ್ಲಲು ಸಹಾಯ ಮಾಡಿತು.
ಒತ್ತಡದಲ್ಲಿ ಪ್ರದರ್ಶನ ನೀಡುವ ಮತ್ತು ಸವಾಲಿನ ಸಂದರ್ಭಗಳಲ್ಲಿ ತಂಡಕ್ಕೆ ರನ್ ಗಳಿಸುವ ಅವರ ಸಾಮರ್ಥ್ಯವು ಫಾಫ್ ಡು ಪ್ಲೆಸಿಸ್ ಅವರನ್ನು ತಂಡದ ಅಮೂಲ್ಯ ಆಸ್ತಿಯನ್ನಾಗಿ ಮಾಡಿದೆ.
ಹಲವು ಅನುಭವಿ ಆಟಗಾರರನ್ನು ಹೊಂದಿರುವ ತಂಡದ ಭಾಗವಾಗಿದ್ದರೂ, ಫಾಫ್ ಡು ಪ್ಲೆಸಿಸ್ ಅವರ ನಾಯಕತ್ವದ ಗುಣಗಳು ಮತ್ತು ತಮ್ಮ ಆಟದ ಮನೋಧರ್ಮದಿಂದ ಎದ್ದು ಕಾಣುತ್ತಾರೆ.
ಸಿಎಸ್‌ಕೆ ತಂಡದೊಂದಿಗೆ ಅವರ ಸಂಬಂಧವು 2011ರಿಂದ 2021ರವರೆಗೆ ಸುಮಾರು ಒಂದು ದಶಕವನ್ನು ವ್ಯಾಪಿಸಿದೆ. ತಂಡದ ಯಶಸ್ಸಿಗೆ ಅವರ ಸಮರ್ಪಣೆ ಮತ್ತು ಬದ್ಧತೆಯು ಸಿಎಸ್‌ಕೆ ಫ್ರಾಂಚೈಸಿ ಇತಿಹಾಸದಲ್ಲಿ ಅಳಿಸಲಾಗದ ಗುರುತಾಗಿದೆ.
ನಂತರದ ದಿನಗಳಲ್ಲಿ ಫಾಫ್ ಡು ಪ್ಲೆಸಿಸ್ ಉತ್ತಮ ನಾಯಕನಾಗಿ ವಿಕಸನಗೊಂಡರು ಮತ್ತು 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕನಾಗಿ ವಿರಾಟ್ ಕೊಹ್ಲಿಯಿಂದ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ದಕ್ಷಿಣ ಆಫ್ರಿಕಾ ತಂಡವನ್ನು ಎಲ್ಲಾ ಸ್ವರೂಪಗಳಲ್ಲಿ ಮುನ್ನಡೆಸಿದ್ದರು.
ಕಳೆದ ವರ್ಷ SA20ರ ಉದ್ಘಾಟನಾ ಆವೃತ್ತಿಯಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್‌ಗಾಗಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗನನ್ನು ಸೆಳೆದುಕೊಳ್ಳಲು ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಿಂದೆಮುಂದೆ ಯೋಚಿಸಲಿಲ್ಲ.
"ಮೊದಲನೆಯದಾಗಿ, ಯುವಕನಾಗಿದ್ದಾಗ ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್ ಭಾಗವಾಗಿರುವುದು ಅದ್ಭುತವಾಗಿದೆ. ಬಹುಶಃ ನನ್ನ ಆರಂಭಿಕ ಪ್ರಯಾಣದ ಆರಂಭದಲ್ಲಿ ಸ್ಟೀಫನ್ ಫ್ಲೆಮಿಂಗ್ ಮತ್ತು ಎಂಎಸ್ ಧೋನಿ ಅವರ ಅಡಿಯಲ್ಲಿ ಅಲ್ಲಿರಲು ಸಾಕಷ್ಟು ಅದೃಷ್ಟಶಾಲಿಯಾಗಿರುವುದು ನನ್ನ ದೊಡ್ಡ ಕಲಿಕೆಯ ಭಾಗವಾಗಿದೆ".
"ದೊಡ್ಡ ಆಟಗಾರರ ಆಟ ಆಡುವುದನ್ನು ನೋಡಲು, ಅವರಿಂದ ಕಲಿಯುವುದು ಉತ್ತಮವಾಗಿದೆ. ನನ್ನ ಮೊದಲ ಋತುವಿನಲ್ಲಿ ನಾನು ಕುಳಿತು ಪ್ರಶ್ನೆಗಳನ್ನು ಕೇಳುತ್ತಿದ್ದೆ ಮತ್ತು ಅವರನ್ನು ಗಮನಿಸುತ್ತಿದ್ದೆ," ಎಂದು ಫಾಫ್ ಡು ಪ್ಲೆಸಿಸ್ ಹೇಳಿದರು.
ಇನ್ನೊಬ್ಬರ ಶೈಲಿಯನ್ನು ನಕಲು ಮಾಡುವುದು ಸಾಧ್ಯವಿಲ್ಲ. ಆದರೆ ನಾಯಕನಾಗಿ ಒಬ್ಬರಿಗೆ ಏನು ಕೆಲಸ ಮಾಡುತ್ತದೆ ಮತ್ತು ಯಾವುದು ಮಾಡುವುದಿಲ್ಲ ಎಂಬುದನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಎಂಎಸ್ ಧೋನಿಯನ್ನು ನೋಡುವ ಮೂಲಕ ಕಲಿತಿದ್ದೇನೆ ಎಂದು ಆರ್‌ಸಿಬಿ ತಂಡದ ನಾಯಕ ಹೇಳಿದರು.