For Quick Alerts
ALLOW NOTIFICATIONS  
For Daily Alerts
 

SA20: ವೈಲ್ಡ್‌ಕಾರ್ಡ್ ಪ್ಲೇಯರ್ ಆಗಿ MI ಕೇಪ್ ಟೌನ್‌ಗೆ ಸೇರಿದ ಜೋಫ್ರಾ ಆರ್ಚರ್

SA20: Jofra Archer Joins MI Cape Town As A Wildcard Player

ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಅವರು 2023ರ ಜನವರಿಯಲ್ಲಿ ಪ್ರಾರಂಭವಾಗಲಿರುವ ಉದ್ಘಾಟನಾ ದಕ್ಷಿಣ ಆಫ್ರಿಕಾ ಟಿ20 (SA20) ಲೀಗ್‌ಗೆ ವೈಲ್ಡ್‌ಕಾರ್ಡ್ ಆಟಗಾರನಾಗಿ MI ಕೇಪ್ ಟೌನ್‌ ತಂಡಕ್ಕೆ ಸಹಿ ಹಾಕಿದ್ದಾರೆ. ಐಪಿಎಲ್‌ನ ಮುಂಬೈ ಇಂಡಿಯನ್ಸ್ ಮತ್ತು SA20 ತಂಡ MI ಕೇಪ್ ಟೌನ್ ತಂಡಗಳು ಒಂದೇ ಒಡೆತನದಲ್ಲಿವೆ.

ದೀರ್ಘಕಾಲದ ಮೊಣಕೈ ಸಮಸ್ಯೆಯಿಂದಾಗಿ ಜೋಫ್ರಾ ಆರ್ಚರ್ ಮಾರ್ಚ್ 2021ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿಲ್ಲ. ಅನಂತರ ಬೆನ್ನು ನೋವಿನಿಂದಾಗಿಯೂ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಬುಧವಾರ, ಅವರು ಅಬುಧಾಬಿಯಲ್ಲಿ ಇಂಗ್ಲೆಂಡ್ ಲಯನ್ಸ್ ಪರ ಆಡಿದ್ದರು. ಜೋಫ್ರಾ ಆರ್ಚರ್ ಲಭ್ಯವಾಗುವುದಿಲ್ಲ ಎಂದು ತಿಳಿದಿದ್ದರೂ ಮುಂಬೈ ಇಂಡಿಯನ್ಸ್ ಕಳೆದ ಐಪಿಎಲ್ ಹರಾಜಿನಲ್ಲಿ 8 ಕೋಟಿ ರೂ.ಗೆ ಖರೀದಿಸಿತ್ತು. ಮುಂಬೈ ಇಂಡಿಯನ್ಸ್ ಮತ್ತೆ ಅವರನ್ನು ರಿಟೇನ್ ಮಾಡಿಕೊಂಡಿದ್ದು, 2023ರ ಐಪಿಎಲ್ ಸೀಸನ್‌ನಲ್ಲಿ ಆಡಲಿದ್ದಾರೆ.

SA20: Jofra Archer Joins MI Cape Town As A Wildcard Player

ಕ್ರಿಕೆಟ್‌ಗೆ ಮರಳಿದ ಹೊರತಾಗಿಯೂ, ಜೋಫ್ರಾ ಆರ್ಚರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ತಂಡದಲ್ಲಿಲ್ಲ ಮತ್ತು 2023ರಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ನಿರೀಕ್ಷೆಯಿದೆ. ಒಂದು ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದರೆ, MI ಕೇಪ್ ಟೌನ್‌ ತಂಡಕ್ಕೆ ಸಂಪೂರ್ಣ ಋತುವಿನಲ್ಲಿ ಲಭ್ಯವಿರುವುದಿಲ್ಲ.

ಜೋಫ್ರಾ ಆರ್ಚರ್ ಅವರು MI ಕೇಪ್ ಟೌನ್‌ನಲ್ಲಿರುವ ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡಾ, ರಶೀದ್ ಖಾನ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರನ್ನು ಸೇರಿಕೊಳ್ಳಲಿದ್ದಾರೆ.

MI ಕೇಪ್ ಟೌನ್‌ನ ಕೋಚಿಂಗ್ ಸಿಬ್ಬಂದಿಯನ್ನು ಅನುಭವಿ ತರಬೇತುದಾರ ಸೈಮನ್ ಕ್ಯಾಟಿಚ್ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲಾ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, ಜೇಮ್ಸ್ ಪಾಮ್ಮೆಂಟ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

MI ಕೇಪ್ ಟೌನ್ ತಂಡದ ಜನರಲ್ ಮ್ಯಾನೇಜರ್ ರಾಬಿನ್ ಪೀಟರ್ಸನ್ ಆಗಿರುತ್ತಾರೆ. ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

Story first published: Thursday, November 24, 2022, 10:22 [IST]
Other articles published on Nov 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+